ಬೆಂಗಳೂರು (ಡಿ.02):  ರಾಷ್ಟ್ರೀಯ ರಜಾ ದಿನಗಳು ಹಾಗೂ ಹಬ್ಬದ ದಿನದಂದು ಕಾರ್ಯ ನಿರ್ವಹಿಸುವ ನೌಕರರಿಗೆ ಹೆಚ್ಚುವರಿ ವೇತನದ ಬದಲು ‘ಪರಿಹಾರ ರಜೆ’ ನೀಡುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

‘ಕೊರೋನಾದಿಂದ ಪ್ರಯಾಣಿಕರ ಕೊರತೆ ಹಾಗೂ ಸಾರಿಗೆ ಆದಾಯ ಕುಂಠಿತವಾಗಿದ್ದು, ನೌಕರರ ವೇತನಕ್ಕೆ ಸರ್ಕಾರ ಅನುದಾನ ನೀಡಿದೆ.

ಕಿತ್ತು ಹೋದ ಸೀಟುಗಳು, ಸ್ವಚ್ಛತೆ ಕಾಣದ ಬಸ್; ಬದಲೀ ಬಸ್‌ಗೆ ಪಟ್ಟು ಹಿಡಿದ ಪ್ರಯಾಣಿಕರು ..

 ಹೀಗಾಗಿ ರಾಷ್ಟ್ರೀಯ ರಜೆ ದಿನ ಹಾಗೂ ಹಬ್ಬದ ದಿನ ಕಾರ್ಯ ನಿರ್ವಹಿಸುವ ನೌಕರರಿಗೆ ಹೆಚ್ಚುವರಿ ವೇತನದ ಬದಲಾಗಿ ‘ಪರಿಹಾರ ರಜೆ’ ನೀಡಬೇಕು.

ಈ ದಿನಗಳಂದು ಅಗತ್ಯಕ್ಕೆ ತಕ್ಕಷ್ಟುಸಿಬ್ಬಂದಿಯನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಬೇಕು’ ಎಂದು ತಿಳಿಸಿದ್ದಾರೆ.