ಬೆಂಗಳೂರು (ನ.12 ) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತನ್ನ ನೌಕರರಿಗೆ 2017- 18 ನೇ ಸಾಲಿನ ಬೋನಸ್ ನೀಡಲು ಮುಂದಾಗಿದೆ. ನಿಗಮದ ಅರ್ಹ ನೌಕರರಿಗೆ ನ. 20ರೊಳಗೆ ತಲಾ 7 ಸಾವಿರ ರು. ಬೋನಸ್ ಸಿಗುತ್ತಿದೆ. 

ಈ ಬೋನಸ್ ಮೊತ್ತವನ್ನು ನೌಕರರಿಗೆ ಪಾವತಿಸುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಿಗಮದ ಮುಖ್ಯ ಲೆಕ್ಕಾಧಿಕಾರಿಗೆ ಸೂಚಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೂಲವೇತನ ಹಾಗೂ ತುಟ್ಟಿಭತ್ಯೆ ಸೇರಿ 21 ಸಾವಿರ ರು. ಕ್ಕಿಂತ ಕಡಿಮೆ ವೇತನ ಪಡೆಯುವ ನೌಕರರು ಈ ಬೋನಸ್ ಪಡೆಯಲು ಅರ್ಹರಾಗಿದ್ದಾರೆ. 

ಅಂದರೆ, ಅಧಿಕಾರಿ ವರ್ಗ ಹೊರತುಪಡಿಸಿ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್ ಗಳು ಈ ಬೋನಸ್ ಲಾಭ ಪಡೆಯಲಿದ್ದಾರೆ.