Asianet Suvarna News Asianet Suvarna News

ಏಪ್ರಿಲ್ 7 ರಿಂದ KSRTC ಬಸ್ ಸೇವೆ ಬಂದ್ : ಹಿಂದೆಯೇ ಕಾರ್ಯತಂತ್ರ

ರಾಜ್ಯದಲ್ಲಿ ಏಪ್ರಿಲ್ 7 ರಿಂದ ಕೆಎಸ್‌ಆರ್‌ಟಿಸಿ ಬಸ್ ಸೇವೆ ಬಹುತೇಕ ಬಂದ್ ಆಗುವ ಸಾಧ್ಯತೆ ಇದೆ.  ನೌಕರರು ಅನಿರ್ಧಿಷ್ಟಾವದಿ ಮುಷ್ಕರ ನಡೆಸಲು ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಇದನ್ನು ತಡೆಯುವ ಕಾರ್ಯತಂತ್ರವೂ ನಡೆಯುತ್ತಿದೆ.  

KSRTC employees to go on indefinite strike from April 7 snr
Author
Bengaluru, First Published Mar 24, 2021, 10:47 AM IST

 ಬೆಂಗಳೂರು (ಮಾ.24):  ಸಾರಿಗೆ ನೌಕರ ಕೂಟ ಏ.7ರಂದು ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಈ ಮುಷ್ಕರ ವಿಫಲಗೊಳಿಸುವ ನಿಟ್ಟಿನಲ್ಲಿ ಕಾರ್ಯ ತಂತ್ರ ಹೆಣೆಯಲು ಮುಂದಾಗಿವೆ.

ಸಾರಿಗೆ ನೌಕರ ಕೂಟದ ಮುಖಂಡರು ಡಿಪೋಗಳಿಗೆ ಭೇಟಿ ನೀಡಿ ನೌಕರರೊಂದಿಗೆ ಸಭೆ ನಡೆಸಿ ಮುಷ್ಕರಕ್ಕೆ ಬೆಂಬಲ ಸೂಚಿಸುವಂತೆ ಮನವಿ ಮಾಡುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಡಿಪೋ ಒಳಗಡೆ ಕಾರ್ಮಿಕರ ಚಟುವಟಿಕೆಗಳಿಗೆ ಅವಕಾಶ ನೀಡದೆ ಮುಷ್ಕರ ವಿಫಲಗೊಳಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಕಾರ್ಮಿಕ ಮುಖಂಡರ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.

ಏ.7ರಿಂದ ರಸ್ತೆಗಿಳಿಯಲ್ಲ KSRTC ಬಸ್‌ಗಳು : ಪ್ರಯಾಣಿಕರೆ ಎಚ್ಚರ ...

ಈ ನಿಟ್ಟಿನಲ್ಲಿ ಡಿಪೋಗಳ ಎಲ್ಲ ಭದ್ರತಾ ಸಿಬ್ಬಂದಿ ಸದಾ ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು. ಸಾಧ್ಯವಾದಷ್ಟೂಡಿಪೋಗಳ ಮುಖ್ಯದ್ವಾರದ ಬಾಗಿಲು ಮುಚ್ಚಿರಬೇಕು. ಡಿಪೋಗಳಿಗೆ ಯಾರೇ ಬಂದರೂ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಮತ್ತು ಮೇಲಾಧಿಕಾರಿಗಳ ಆದೇಶದಂತೆ ಕಾರ್ಯ ನಿರ್ವಹಿಸಬೇಕು. ಎಲ್ಲಾ ಘಟನೆ ಅಥವಾ ಚಟುವಟಿಕೆಗಳ ಬಗ್ಗೆ ವಿಡಿಯೊ ಚಿತ್ರೀಕರಣ ಮಾಡಬೇಕು. ಯಾವುದೇ ಕಾರಣಕ್ಕೂ ಕಾರ್ಮಿಕ ಮುಖಂಡರ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.

Follow Us:
Download App:
  • android
  • ios