Asianet Suvarna News Asianet Suvarna News

ನಾಳೆ ಕೆಎಸ್‌ಅರ್‌ಟಿಸಿ ನೌಕರರ ಮುಷ್ಕರ: ಬಸ್‌ ವ್ಯತ್ಯಯ?

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಂದ ಜ.24ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

KSRTC Employees Strike will be Held on Jan 24th in Bengaluru grg
Author
First Published Jan 23, 2023, 12:00 AM IST

ಬೆಂಗಳೂರು(ಜ.23):  ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಂದ ಜ.24ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ (ವಾಯವ್ಯ), ಕೆಕೆಆರ್‌ಟಿಸಿ (ಕಲ್ಯಾಣ) ಸಾರಿಗೆ ನಿಗಮಗಳ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಡಿಪೋಗಳು, ಹುಬ್ಬಳ್ಳಿ, ಕಲಬುರಗಿ, ಬೆಂಗಳೂರು ಸಾರಿಗೆ ನಿಗಮಗಳ ಕಚೇರಿ ಮುಂಭಾಗ ಮತ್ತು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಗಳು ನಡೆಯಲಿವೆ. ಹೀಗಾಗಿ, ಬಸ್‌ ಸಂಚಾರದಲ್ಲಿ ತುಸು ವ್ಯತ್ಯಯ ಸಾಧ್ಯತೆ ಇದೆ.

‘ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು ಆರು ವರ್ಷ ಕಳೆದರೂ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಿಯಮದಂತೆ 2020ರ ಮಾಚ್‌ರ್‍ ನಲ್ಲಿ ವೇತನ ಪರಿಷ್ಕರಣೆಯಾಗಬೇಕಿತ್ತು. ಆದರೆ ಸರ್ಕಾರ ಇದುವರೆಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ. 1.07 ಲಕ್ಷ ಸಾರಿಗೆ ನೌಕರರಿಗೆ ಅನ್ಯಾಯವಾಗಿದೆ. ಸಾರಿಗೆ ನೌಕರರ ಸೌಲಭ್ಯಗಳನ್ನು ನೀಡುವ ಕುರಿತು ಈ ಹಿಂದೆ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ. ಯಾವೊಂದು ಬೇಡಿಕೆಯನ್ನೂ ಈಡೇರಿಸಲು ಮುಂದಾಗಿಲ್ಲ. ಹೀಗಾಗಿ, ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದೇವೆ’ ಎಂದು ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್‌ ತಿಳಿಸಿದರು.

ಬೆಂಗಳೂರು- ಮೈಸೂರು ನಡುವೆ ವಾಣಿಜ್ಯ ಸೇವೆ ಆರಂಭಿಸಿದ KSRTC ಎಲೆಕ್ಟ್ರಿಕ್ ಬಸ್: ಏನೆಲ್ಲಾ ಸೌಲಭ್ಯವಿದೆ..?

ಭರವಸೆ ಮರೆತ ಸರ್ಕಾರ:

‘ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2021ರ ಏಪ್ರಿಲ್‌ನಲ್ಲಿ 15 ದಿನಗಳು ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಆ ಸಂರ್ಭದಲ್ಲಿ ಸರ್ಕಾರ ಹಲವು ಭರವಸೆ ನೀಡಿತ್ತು. ಆದರೆ, ಈವರೆಗೂ ಈಡೇರಿಕೆಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದು, ಆ ನೆಪ ಹೇಳಿ ವೇತನ ಪರಿಷ್ಕರಣೆಯನ್ನು ಮತ್ತಷ್ಟುದಿನ ಮುಂದೂಡುವ ಸಾಧ್ಯತೆ ಇದೆ. ಹೀಗಾಗಿಯೇ ಸರ್ಕಾರವನ್ನು ಎಚ್ಚರಿಸಲು ಸಾರಿಗೆ ನೌಕರರ ಆರು ಯೂನಿಯನ್‌ಗಳು ಒಟ್ಟಾಗಿ ಪ್ರತಿಭಟನೆಗೆ ಮುಂದಾಗಿದ್ದೇವೆ’ ಎಂದು ಸಾರಿಗೆ ಯೂನಿಯನ್‌ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಬೇಡಿಕೆಗಳು

- ವೇತನ ಪರಿಷ್ಕರಣೆ. ಮೂಲ ವೇತನ ಮತ್ತು ಡಿಎ ಸೇರಿ ಶೇ.20 ರಷ್ಟುಹೆಚ್ಚಳಕ್ಕೆ ಆಗ್ರಹ
- ಫಾರಂ 4 ಜಾರಿಗೊಳಿಸಿ ಕಡ್ಡಾಯವಾಗಿ 8 ಗಂಟೆ ಮಾತ್ರ ಕೆಲಸದ ಅವಧಿ ನಿಗದಿಪಡಿಸಬೇಕು

Follow Us:
Download App:
  • android
  • ios