ಬೇಡಿಕೆ ಈಡೇರಿಸಲು ಭರವಸೆ: ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ ವಾಪಸ್
ಕೆಎಸ್ಆರ್‌ಟಿಸಿ ಎಂಡಿ ಅನ್ಬುಕುಮಾರ್ ಅವರು, ನೌಕರರ ಬೇಡಿಕೆಗಳನ್ನ ಆಲಿಸಿ ಪ್ರತಿಭಟನೆ ಕೈಬಿಡಿ ನಿಮ್ಮ ಬೇಡಿಕೆಗಳನ್ನ ಈಡೇರಿಸಲಾಗುವುದು. ಮತ್ತೊಮ್ಮೆ ಸಚಿವರ ಜೊತೆ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನ ಹಿಂಪಡೆಯಲಾಗಿದೆ.

ಬೆಂಗಳೂರು(ಅ.01): ಬೇಡಿಕೆಗಳನ್ನ ಈಡೇರಿಸುವುದಾಗಿ ಭರಸೆ ನೀಡಿದ ಹಿನ್ನಲೆಯಲ್ಲಿ ಸಾರಿಗೆ ನೌಕರರ ಪ್ರತಿಭಟನೆ ವಾಪಸ್ ಪಡೆಯಲಾಗಿದೆ. ಹೌದು, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಕ್ಟೋಬರ್ 5 ರಂದು ಪ್ರತಿಭಟನೆಗೆ ರಾಜ್ಯ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಕರೆ ನೀಡಿತ್ತು.
ಈ ಕುರಿತು ನೌಕರರ ಮುಖಂಡರ ಜೊತೆ ಸಭೆ ನಡೆಸಿದ ಕೆಎಸ್ಆರ್‌ಟಿಸಿ ಎಂಡಿ ಅನ್ಬುಕುಮಾರ್ ಅವರು, ನೌಕರರ ಬೇಡಿಕೆಗಳನ್ನ ಆಲಿಸಿ ಪ್ರತಿಭಟನೆ ಕೈಬಿಡಿ ನಿಮ್ಮ ಬೇಡಿಕೆಗಳನ್ನ ಈಡೇರಿಸಲಾಗುವುದು. ಮತ್ತೊಮ್ಮೆ ಸಚಿವರ ಜೊತೆ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನ ಹಿಂಪಡೆಯಲಾಗಿದೆ.
ಶಕ್ತಿ ಯೋಜನೆಗೆ 100 ದಿನದ ಸಂಭ್ರಮ: 62 ಕೋಟಿ ಮಹಿಳಾ ಪ್ರಯಾಣಕ್ಕೆ ಖರ್ಚಾದ ಹಣವೆಷ್ಟು ಗೊತ್ತಾ?
ಸಾರಿಗೆ ನೌಕರರ ಬೇಡಿಕೆಗಳೇನು?
* ಪ್ರತಿಭಟನೆ ಸಂದರ್ಭದಲ್ಲಿ ಅಮಾನತು ಮಾಡಲಾಗಿರುವ ನೌಕರರನ್ನ ವಾಪಸ್ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕು
* ನಿಗಮದಲ್ಲಿ ಸಿಬ್ಬಂದಿ ಕೊರತೆ ಇದೆ, ಈ ಕೂಡಲೇ ಭರ್ತಿ ಮಾಡಿಬೇಕು
* ಜಿಪಿಪಿ ಮಾದರಿಯಲ್ಲಿ ಬಸ್ ಖರೀದಿ ಮಾಡಬಾರದು(ಬಸ್ ಮತ್ತು ಚಾಲಕ ಖಾಸಗಿಯವರದ್ದಯ, ನಿರ್ವಾಹಕ ಮಾತ್ರ ನಿಗಮದವರು)
* ಬಸ್ ಮಾತ್ರ ಖರೀದಿಸಬೇಕು, ನಿರ್ವಾಹಕ ಮತ್ತು ಚಾಲಕ ನಿಗಮದವರೇ ಆಗಿರಬೇಕು