ಕರ್ನಾಟಕದಲ್ಲಿ ಇನ್ನಷ್ಟು ನಗರಗಳಿಗೆ ಕೆಎಸ್‌ಆರ್‌ಟಿಸಿಗೆ ಎಲೆಕ್ಟ್ರಿಕ್ ಬಸ್
ಕೆಎಸ್‌ಆರ್‌ಟಿಸಿ ಒಟ್ಟು 50 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಹೈದರಾಬಾದ್‌ನ ಓಲೆಕ್ಟಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ 25 ಬಸ್‌ಗಳು ಮಾರ್ಚ್ 15ರೊಳಗೆ ನಿಗಮಕ್ಕೆ ಸೇರ್ಪಡೆಗೊಳ್ಳಲಿವೆ.
ಬೆಂಗಳೂರು(ಫೆ.28): ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಿರುವ ಕೆಎಸ್‌ಆರ್‌ಟಿಸಿಗೆ ಮಾರ್ಚ್f 15ರೊಳಗೆ ಮತ್ತೆ 25 ಬಸ್‌ಗಳು ಸೇರ್ಪಡೆಯಾಗಲಿದ್ದು, ಶೀಘ್ರದಲ್ಲೇ ಬಸ್‌ಗಳನ್ನು ಯಾವ ಮಾರ್ಗಗಳಿಗೆ ನಿಯೋಜಿಸಬೇಕೆನ್ನುವ ಬಗ್ಗೆ ನಿಗಮ ತೀರ್ಮಾನ ಕೈಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಜ.16ರಂದು ಮೊದಲ ಎಲೆಕ್ಟ್ರಿಕ್ ಬಸ್(ಇವಿ ಪವರ್ ಪ್ಲಸ್) ಕಾರ್ಯಾಚರಣೆಯನ್ನು ಬೆಂಗಳೂರು-ಮೈಸೂರು ನಡುವೆ ಆರಂಭಿಸಿತ್ತು. 43 ಆಸನ ಹೊಂದಿರುವ ಈ ಬಸ್ ದಿನಕ್ಕೆ ಎರಡು ಟ್ರಿಪ್‌ಗಳ ಕಾರ್ಯಾಚರಣೆ ನಡೆಸುತ್ತಿದ್ದು ಫೆ.23ರವರೆಗೆ ಒಟ್ಟಾರೆ 3440 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಜ.16ರಿಂದ 31ರವರೆಗೆ 4359 ಕಿ.ಮೀ. ದೂರ ಬಸ್ ಚಲಿಸಿದ್ದು .3.77 ಲಕ್ಷ ಸಂಗ್ರಹಿಸಿದೆ. ಫೆ.1ರಿಂದ 23ರವರೆಗೆ 6541 ಕಿ.ಮೀ ಕ್ರಮಿಸಿದ್ದು 5.36 ಲಕ್ಷ ಸಂಗ್ರಹಿಸಿದೆ.
KSRTC: ರಸ್ತೆಗಿಳಿದ 15 ‘ಅಂಬಾರಿ ಉತ್ಸವ’ ಸ್ಲೀಪರ್ ಬಸ್
ಹೀಗೆ ಒಟ್ಟು 10,900 ಕಿ.ಮೀ ಸಂಚರಿಸಿರುವ ಎಲೆಕ್ಟ್ರಿಕ್ ಬಸ್ .9.13 ಲಕ್ಷಗಳನ್ನು ಟಿಕೆಟ್ ಮಾರಾಟದಿಂದ ಸಂಗ್ರಹಿಸಿದೆ. ಎಲೆಕ್ಟ್ರಿಕ್ ಬಸ್ ನಿರ್ವಹಣಾ ವೆಚ್ಚ .68 ಆಗಿದ್ದು, ಗ್ರಾಹಕರಿಂದ ಸರಾಸರಿ .83.77 ಸಂಗ್ರಹಿಸಲಾಗುತ್ತಿದೆ. ಮೈಸೂರು-ಬೆಂಗಳೂರಿಗೆ ತಲಾ .300 ಟಿಕೆಟ್ ದರ ನಿಗದಿ ಮಾಡಲಾಗಿದೆ. ಎಲೆಕ್ಟ್ರಿಕ್ ಬಸ್ ಬ್ಯಾಟರಿಗಳನ್ನು ಒಮ್ಮೆ ಚಾಜ್‌ರ್ ಮಾಡಿದರೆ 260ರಿಂದ 280 ಕಿ.ಮೀ. ದೂರ ಸಂಚರಿಸಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಒಟ್ಟು 50 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಹೈದರಾಬಾದ್‌ನ ಓಲೆಕ್ಟಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ 25 ಬಸ್‌ಗಳು ಮಾರ್ಚ್ 15ರೊಳಗೆ ನಿಗಮಕ್ಕೆ ಸೇರ್ಪಡೆಗೊಳ್ಳಲಿವೆ. ಈಗಾಗಲೇ ಬೆಂಗಳೂರು-ಮೈಸೂರು ನಡುವೆ ಒಂದು ಎಲೆಕ್ಟ್ರಿಕ್ ಬಸ್ ಸಂಚರಿಸುತ್ತಿದ್ದು, ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಜೂನ್ ವೇಳೆಗೆ ಕರ್ನಾಟಕದಲ್ಲಿ 3,604 ಹೊಸ ಬಸ್
ಎಲೆಕ್ಟ್ರಿಕ್ ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳು, ತುರ್ತು ನಿರ್ಗಮನ ದ್ವಾರ, ಅಗ್ನಿಶಾಮಕ ಸಾಧನ, ಎಮರ್ಜೆನ್ಸಿ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮ್ಮರ್, ಎರಡು ಟೀವಿ, ರಿಜೆನೆರೇಟಿವ್ ಬ್ರೇಕಿಂಗ್, ಸುಧಾರಿತ ಬ್ಯಾಟರಿ, ಐಷಾರಾಮಿ ಪುಶ್‌ಬ್ಯಾಕ್ ಸೀಟ್‌ಗಳು, ಪ್ರತಿ ಸೀಟಿಗೆ ಎನ್‌ಬಿಲ್ಡ್ ಯುಎಸ್‌ಬಿ ಚಾರ್ಜರ್‌ಗಳು, ಎಸಿ ಅಳವಡಿಸಲಾಗಿದ್ದು, ಗ್ರಾಹಕರಿಗೆ ಐಷರಾಮಿ ಬಸ್ ಸಂಚಾರದ ಅನುಭವ ನೀಡುತ್ತಿದೆ.
ಕೊಡಗು, ದಾವಣಗೆರೆ ಶಿವಮೊಗ್ಗಕ್ಕೆ ಇ-ಬಸ್
ನೂತನವಾಗಿ ಸೇರ್ಪಡೆಗೊಳ್ಳಲಿರುವ ಎಲೆಕ್ಟ್ರಿಕ್ ಬಸ್‌ಗಳನ್ನು ಯಾವ ಮಾರ್ಗದ ಕಾರ್ಯಾಚರಣೆಗೆ ನಿಗದಿಪಡಿಸಬೇಕು ಎಂಬುದು ಕೂಡ ಶೀಘ್ರವೇ ನಿರ್ಧರಿಸಲಾಗುವುದು. ಶೀಘ್ರದಲ್ಲೇ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ. ಅದಕ್ಕಾಗಿಯೇ ಬಸ್‌ಗಳ ಜಾರ್ಜಿಂಗ್‌ಗಾಗಿ ಮಡಿಕೇರಿ ಡಿಪೋ(600 ಕೆವಿಎ), ವಿರಾಜಪೇಟೆ ಬಸ್ ನಿಲ್ದಾಣ(400 ಕೆವಿಎ), ದಾವಣೆಗೆರೆ ಘಟಕ 1(900 ಕೆವಿಎ), ಶಿವಮೊಗ್ಗ ಡಿಪೋ (650 ಕೆವಿಎ) ಮತ್ತು ಚಿಕ್ಕಮಗಳೂರು ಡಿಪೋನಲ್ಲಿ (600 ಕೆವಿಎ) ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.