Asianet Suvarna News Asianet Suvarna News

ಬಸ್ ಪ್ರಯಾಣಿಕರಿಗೆ ಗುಡ್‌ ನ್ಯೂಸ್..!

ಐಷಾರಾಮಿ ಬಸ್​ಗಳಲ್ಲಿ ಸಂಚರಿಸುವವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಗುಡ್​ ನ್ಯೂಸ್​ ಕೊಟ್ಟಿದೆ.

Ksrtc cancels Weekend Extra 10 Percent amount From passengers rbj
Author
Bengaluru, First Published Oct 18, 2020, 8:27 PM IST
  • Facebook
  • Twitter
  • Whatsapp

ಬೆಂಗಳೂರು, ಅ.18):  ಕೊರೋನಾ ಲಾಕ್​ಡೌನ್​ ಪರಿಣಾಮ ಆರ್ಥಿಕ ನಷ್ಟದಲ್ಲಿರುವ ನಿಗಮವು, ಸದ್ಯ ವಾರಾಂತ್ಯ ದಿನ ಪಡೆಯಲಾಗುತ್ತಿರುವ ಶೇ.10 ಹೆಚ್ಚುವರಿ ಪ್ರಯಾಣ ದರವನ್ನು ರದ್ದು ಮಾಡಿದೆ. 

ಈ ಆದೇಶವು ಡಿ.31ರವರೆಗೆ ಚಾಲ್ತಿಯಲ್ಲಿರಲಿದ್ದು, ಎರಡೂವರೆ ತಿಂಗಳ ಕಾಲ ಪ್ರಯಾಣಿಕರು ಶೇ.10 ಹೆಚ್ಚುವರಿ ಹಣ ಪಾವತಿಸದೆ ವಾರಂತ್ಯದಲ್ಲಿ ಪ್ರಯಾಣಿಸಬಹದು.

HDK ಫೋನ್ ಸಂಭಾಷಣೆ ಲೀಕ್, ರೈಲು ಚಾಲಕಿಯಾದ ಬ್ಯೂಟಿ ಕ್ವೀನ್; ಅ.18ರ ಟಾಪ್ 10 ಸುದ್ದಿ!

ಕೊರೋನಾ ಭೀತಿ ಕಡಿಮೆಯಾಗುತ್ತಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಿಸುವ ಸಲುವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಜ್ಜಾಗಿದೆ. ಈ ಹಿಂದೆ ವಾರಾಂತ್ಯ ದಿನಗಳಾದ ಶುಕ್ರವಾರದಿಂದ ಭಾನುವಾರದವರೆಗೆ ನಿಗಮದ ಐಷಾರಾಮಿ ಬಸ್​ಗಳಲ್ಲಿ ಪ್ರಯಾಣ ದರವನ್ನು ಶೇ.10 ಹೆಚ್ಚಿಸಲಾಗಿತ್ತು. 

ಮೊದಲೇ ಪ್ರಯಾಣಿಕರಿಲ್ಲದೆ ಸಂಕಷ್ಟದಲ್ಲಿರುವ ನಿಗಮ, ಈ ಕ್ರಮದಿಂದಾಗಿ ನಷ್ಟ ಅನುಭವಿಸಿತ್ತು. ಹೀಗಾಗಿ ದರ ಕಡಿತಗೊಳಿಸಿದೆ.

Follow Us:
Download App:
  • android
  • ios