ಬೆಂಗಳೂರು,[ಏ.15]: ಇದೇ ಏಪ್ರಿಲ್‌ 18 ರಂದು ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುವುದರಿಂದ ಕೆಎಸ್​​ಆರ್​ಟಿಸಿ ಬಸ್​ ಸಂಚಾರದಲ್ಲಿ ವ್ಯತ್ಯಯವಾಗಲಿದೆ. 

ಚುನಾವಣೆಯ ಹಿಂದಿನ ಎರಡು ದಿನ ಹಾಗೂ ಚುನಾವಣೆಯ ದಿನ ಅಂದ್ರೆ ಏಪ್ರಿಲ್ 16, 17, 18 ರಂದು ಕೆಎಸ್​​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವೋಟ್ ಮಾಡಲು ಹೋಗುವವರಿಗೆ ಶುಭ ಸುದ್ದಿ, ಉತ್ತರ, ದಕ್ಷಿಣ ಕರ್ನಾಟಕಕ್ಕೆ ಒಟ್ಟು 3 ವಿಶೇಷ ರೈಲು

ಚುನಾವಣೆ ಕಾರ್ಯಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮತ್ತು ಚುನಾವಣೆ ಆಯೋಗಕ್ಕೆ ಕೆಎಸ್​​ಆರ್​ಟಿಸಿ 3314 ಬಸ್​ಗಳನ್ನ ಆಯೋಜನೆ ಮಾಡಲಾಗಿದೆ. ಹೀಗಾಗಿ ರಾಜ್ಯದ ಪ್ರಯಾಣಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಸಾರ್ವಜನಿಕರು ಎಲ್ಲಿಗಾದರೂ ತೆರಳಬೇಕಿದ್ರೆ ಬಸ್ ಗಾಗಿ ಕಾಯುವುದನ್ನು ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ. 

ರಾಜ್ಯದಲ್ಲಿ ಮೊದಲ ಹಂತ ಮತದಾನ ಏ.18ರಂದು ನಡೆದರೆ, ಏ.23ರಂದು 2ನೇ ಹಂತದ ಮತದಾನ ನಡೆಯಲಿದೆ. ಇನ್ನು ಮೇ 23ಕ್ಕೆ ಮತದಾನ ಎಣಿಕೆ ನಡೆಯಲಿದೆ.