Arif arwah sdpi KSRTC BUS Anjaneya Image ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿಯ ಗ್ಲಾಸ್‌ ಮೇಲೆ ಆಂಜನೇಯ ಚಿತ್ರ ಇರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತಾಗಿ ಎಸ್‌ಡಿಪಿಐ ನಾಯಕ ಆರಿಫ್‌ ಆರ್ವಾ ಮಾಡಿರುವ ಪೋಸ್ಟ್‌ ವೈರಲ್‌ ಆಗಿದೆ.

ಬೆಂಗಳೂರು (ಆ.3): ಸೋಶಿಯಲ್‌ ಮೀಡಿಯಾ ಇದ್ದಲ್ಲಿ ದಿನಕ್ಕೊಂದು ವಿವಾದ ಸೃಷ್ಟಿಯಾಗುತ್ತಲೇ ಇರುತ್ತದೆ. ಈಗ ಕೆಎಸ್‌ಆರ್‌ಟಿಸಿ ವಿಚಾರದಲ್ಲಿ ಅಂಥದ್ದೇ ಸುದ್ದಿಯಾಗಿದೆ. ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ ನಾಯಕನೊಬ್ಬ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಆಂಜನೇಯನ ಚಿತ್ರ ಇರೋದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾನೆ. ಚಿಕ್ಕಮಗಳೂರಿನ ಎಸ್‌ಡಿಪಿಐನ ಮುಖ್ಯ ಕಾರ್ಯದರ್ಶಿ ಆಗಿರುವ ಆರಿಫ್‌ ಆರ್ವಾ ಜುಲೈ 31 ರಂದು ಈ ಕುರಿತಾಗಿ ಟ್ವೀಟ್‌ ಮಾಡಿದ್ದು, ಕೆಎಸ್‌ಆರ್‌ಟಿಸಿ ಮಾತ್ರವಲ್ಲದೆ, ಸಿಎಂ ಸಿದ್ಧರಾಮಯ್ಯ, ರಾಜ್ಯ ಡಿಜಿಪಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾನೆ. ಇಲ್ಲಿಯವರೆಗೂ ಈತಕ ಪೋಸ್ಟ್‌ಅನ್ನು 4.84 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. ಕಾಮೆಂಟ್‌ ಮಾಡಿದ ಹೆಚ್ಚಿನವರು ಆರಿಫ್‌ ಆರ್ವಾ ಮಾಡಿರುವ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಆಂಜನೇಯನ ನಾಡು, ಆಂಜನೇಯನ ನಾಡಿನಲ್ಲಿಯೇ ಆಂಜನೇಯನಿಗೆ ಸ್ಥಳವಿಲ್ಲ ಅಂದ್ರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಆರಿಫ್‌ ಆರ್ವಾ ತಮ್ಮ ಟ್ವೀಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. 'ಕೆಎಸ್‌ಆರ್‌ಟಿಸಿ ಅವರ ಗಮನಕ್ಕೆ. ನಾನು ಈ ಬಸ್‌ಅನ್ನು ಚಿಕ್ಕಮಗಳೂರು ಬಸ್‌ ಸ್ಟ್ಯಾಂಡ್‌ನಲ್ಲಿ ನೋಡಿದೆ. ಬಸ್‌ನ ಹಿಂಬದಿಯಲ್ಲಿ ಧಾರ್ಮಿಕ ಫೋಟೋವನ್ನು ಹಾಕಲಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಇಂಥ ಧಾರ್ಮಿಕ ಫೋಟೋಗಳನ್ನು ಹಾಕುವುದು ಸರಿಯೇ. ಬಸ್‌ನ ಡ್ರೈವರ್‌ ಹಾಗೂ ಕಂಡಕ್ಟರ್‌ ಮೇಲೆ ಕ್ರಮ ಕೈಗೊಳ್ಳಿ.' ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅದರೊಂದಿಗೆ ಸಿಎಂ ಹಾಗೂ ಡಿಸಿಎಂಗೂ ಟ್ಯಾಗ್‌ ಮಾಡಿದ್ದಾರೆ. ಇನ್ನು ಈ ಪೋಸ್ಟ್‌ಗೆ ರಿಪ್ಲೈ ಮಾಡಿರುವ ಕೆಎಸ್‌ಆರ್‌ಟಿಸಿ, 'ನಿಮ್ಮ ಪೋಸ್ಟ್‌ಗೆ ಧನ್ಯವಾದಗಳು, ಹೆಚ್ಚಿನ ಪರಿಶೀಲನೆಗಾಗಿ ನಾವು ಸಂಬಂಧಪಟ್ಟ ಡಿಪೋಗೆ ಇದನ್ನು ಕಳಿಸುತ್ತೇವೆ..' ಎಂದು ಬರೆದಿದೆ. ಕೆಎ 10 ಎಫ್‌ 0455 ನಂಬರ್‌ ಪ್ಲೇಟ್‌ನ ಬಸ್‌ ಹಿಂಬದಿಯ ಗ್ಲಾಸ್‌ನಲ್ಲಿ ಆಂಜನೇಯನ ಚಿತ್ರವಿರೋದೆ ಈ ಆಕ್ಷೇಪಕ್ಕೆ ಕಾರಣವಾಗಿದೆ.

ಈ ಪೋಸ್ಟ್‌ಗೆ ಕಾಮೆಂಟ್‌ ಮಾಡಿರುವ ಹೆಚ್ಚಿನ ಮಂದಿ ಆರಿಫ್‌ ಆರ್ವಾಗೆ ಜಾಡಿಸಿದ್ದು ಮಾತ್ರವಲ್ಲದೆ, ಕ್ರಮ ಕೈಗೊಳ್ಳುತ್ತೇವೆ ಎಂದ ಕೆಎಸ್‌ಆರ್‌ಟಿಸಿ ವಿರುದ್ದವೂ ಕಿಡಿಕಾರಿದ್ದಾರೆ. 'ಲೋ ಆರಿಫ್ಫು ಒಂದ್ ಸ್ಟಿಕ್ಕರ್ ಹಾಕಿದಕ್ಕೆ ಸಿಎಂ, ಡಿಜಿಪಿ, ಡಿಸಿಎಂ ನ ಟ್ಯಾಗ್ ಮಾಡಿದ್ಯಲ್ಲ ಇನ್ನ ನೀವುಗಳು ಮಾಡೋ ಕೆಲಸಕ್ಕೆ ನಾವ್ ಯಾರನ್ನ ಟ್ಯಾಗ್ ಮಾಡ್ಬೇಕು ಹೇಳು..' ಎಂದು ನವೀನ್‌ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ.

'ಇದೆಲ್ಲಾ ತುಂಬಾ ಸಾಮಾನ್ಯ. ಗಂಭೀರ ವಿಚಾರಗಳ ಕುರಿತಾಗಿ ಹೋರಾಟ ಮಾಡಿ. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಸುಮ್ಮನೆ ಇಲ್ಲದೇ ಇರೋ ವಿವಾದವನ್ನು ಕ್ರಿಯೇಟ್‌ ಮಾಡೋ ಅವಶ್ಯಕತೆ ಇಲ್ಲ..' ಎಂದು ವೀಣಾ ಜೈನ್‌ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ.

'ಬಸ್ಸಿನಲ್ಲಿ ಸಣ್ಣ ಹನುಮಾನ್ ಸ್ಟಿಕ್ಕರ್ ವಿಚಾರವಾಗಿ ನೀವು ಅಸಹಿಷ್ಣುಕರಾಗಿದ್ದರೆ, ವರ್ಷವಿಡೀ 24/7 ಪ್ರತಿದಿನ ಆ ಭಯಾನಕ ಆಜಾನ್‌ಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು..'ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. 'ಬಾಸ್ಟರ್ಡ್, ನೀವು ಅಥವಾ ಕೋಮು ಸರ್ಕಾರಿ ಆಸ್ತಿಗಳಲ್ಲಿ ಹಿಂದೂ ಸ್ಟಿಕ್ಕರ್‌ಗಳು ಮತ್ತು ಇತರರೊಂದಿಗೆ ಸಮಸ್ಯೆ ಹೊಂದಿದ್ದರೆ, ನಿಮ್ಮ ಮಸೀದಿ ಮತ್ತು ಮದರಸಾಗೆ ತೆರಿಗೆ ಪಾವತಿಸಲು ಹೇಳಿ, ಇಲ್ಲದಿದ್ದರೆ ಮದರಸಾವನ್ನು ಮುಚ್ಚಿ..' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಕೆಆರ್‌ಟಿಸಿಗೆ ಹೈಕೋರ್ಟ್ ದಂಡ, ಬಸ್‌ನಿಂದ ಬಿದ್ದು ಸಾವನ್ನಪ್ಪಿದ ಮಹಿಳೆಗೆ 26 ಲಕ್ಷ ರು. ಪರಿಹಾರ

'ಒಬ್ಬ ಕ್ರಿಶ್ಚಿಯನ್‌ ಆಗಿ ನನಗೆ ಇಲ್ಲಿ ಎಲ್ಲೂ ಸಮಸ್ಯೆ ಕಾಣಲಿಲ್ಲ. ಕರ್ನಾಟಕದಲ್ಲಿ ಓವೈಸಿ ಮಟ್ಟದ ಚೀಪ್‌ ಶೋಗಳನ್ನು ಮಾಡುವ ಪ್ರಯತ್ನ ಮಾಡಬೇಡಿ. ನಿಮ್ಮ ಎಸ್‌ಡಿಪಿಐ ಹಾಗೂ ಪಿಎಫ್‌ಐ ಅಜೆಂಡಾಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳಿ. ಕರ್ನಾಟಕ ಕಾಂಗ್ರೆಸ್‌ ಇಂಥ ಚಿಲ್ಲರ್‌ಗಳಿಗೆ ಗಮನ ನೀಡೋದಿಲ್ಲ..' ಎಂದು ವಿಲಿಯಂ ಡಿಸೋಜಾ ಎನ್ನುವವರು ಬರೆದಿದ್ದಾರೆ. 'ಹನುಮನ ಚಿತ್ರ ಕಂಡರೆ ನಿಮಗೆ ಉರಿ ಬರುತ್ತೆ ಆದರೆ ನಾವು ಮಾತ್ರ ದಿನಕ್ಕೆ 5 ಬಾರಿ ಮಸೀದಿಯಿಂದ ಬರುವ ಹೆಚ್ಚಿನ ಶಬ್ದವನ್ನು ಕೇಳಲೇಬೇಕು, ಇದ್ಯಾವ ನ್ಯಾಯ?' ಎಂದು ಹರೀಶ್‌ ಎನ್ನುವವರು ಬರೆದಿದ್ದಾರೆ. 'ಹನುಮನ ನಾಡು ಕರ್ನಾಟಕದೊಳಗೆ ಹನುಮನ ಫೋಟೋ ಹಾಕಿ ಕೊಳ್ಳುವ ಹಾಗಿಲ್ಲವೇ..' ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಿಯಮ ಪಾಲಿಸದ ಕೆಎಸ್ಸಾರ್ಟಿಸಿ ಚಾಲಕರಿಗೆ ದಂಡ - ನಿಗಮ ಎಚ್ಚರಿಕೆ

Scroll to load tweet…