ಕೆಂಪೇಗೌಡ ಬಸ್‌ ನಿಲ್ದಾಣದಿಂದ ನಾಲ್ಕು ಮತ್ತು ಶಾಂತಿನಗರ ಬಸ್‌ ನಿಲ್ದಾಣದಿಂದ ಮೂರು ಅಂಬಾರಿ ಉತ್ಸವ ವೋಲ್ವೋ ಬಸ್‌ಗಳು ಹೊರಡಲಿವೆ. ಶಾಂತಿನಗರ ಬಸ್‌ ನಿಲ್ದಾಣದಿಂದ ಸಂಜೆ 4.13ಕ್ಕೆ ಮೊದಲ ‘ಅಂಬಾರಿ ಉತ್ಸವ’ ವೋಲ್ವೋ 9600 ಮಲ್ಟಿಆ್ಯಕ್ಸಲ್‌ ಸ್ಲೀಪರ್‌ ಬಸ್‌ ತಿರುವನಂತಪುರಕ್ಕೆ ಹೊರಡಲಿದೆ. ಅದೇ ರೀತಿ ರಾತ್ರಿ 8.15ಕ್ಕೆ ಎರ್ನಾಕುಲಂ, ರಾತ್ರಿ 9.30ಕ್ಕೆ ತ್ರಿಶೂರು ಕಡೆಗೆ ಶಾಂತಿನಗರ ಬಸ್‌ ನಿಲ್ದಾಣದಿಂದ ಹೊರಡಲಿವೆ.

ಬೆಂಗಳೂರು(ಫೆ.24):  ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದಿಂದ ನೂತನ ‘ಅಂಬಾರಿ ಉತ್ಸವ’ ವೋಲ್ವೋ 9600 ಮಲ್ಟಿಆ್ಯಕ್ಸಲ್‌ ಸ್ಲೀಪರ್‌ ಬಸ್‌ಗಳು ಫೆ.24ರಿಂದ ಹೊರ ರಾಜ್ಯಗಳಿಗೆ ಕಾರ್ಯಾಚರಣೆ ಆರಂಭಿಸಲಿದ್ದು, ಮೊದಲ ದಿನವೇ ಪ್ರಯಾಣಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶುಕ್ರವಾರ ಕೆಂಪೇಗೌಡ ಬಸ್‌ ನಿಲ್ದಾಣದಿಂದ ನಾಲ್ಕು ಮತ್ತು ಶಾಂತಿನಗರ ಬಸ್‌ ನಿಲ್ದಾಣದಿಂದ ಮೂರು ಅಂಬಾರಿ ಉತ್ಸವ ವೋಲ್ವೋ ಬಸ್‌ಗಳು ಹೊರಡಲಿವೆ. ಶಾಂತಿನಗರ ಬಸ್‌ ನಿಲ್ದಾಣದಿಂದ ಸಂಜೆ 4.13ಕ್ಕೆ ಮೊದಲ ‘ಅಂಬಾರಿ ಉತ್ಸವ’ ವೋಲ್ವೋ 9600 ಮಲ್ಟಿಆ್ಯಕ್ಸಲ್‌ ಸ್ಲೀಪರ್‌ ಬಸ್‌ ತಿರುವನಂತಪುರಕ್ಕೆ ಹೊರಡಲಿದೆ. ಅದೇ ರೀತಿ ರಾತ್ರಿ 8.15ಕ್ಕೆ ಎರ್ನಾಕುಲಂ, ರಾತ್ರಿ 9.30ಕ್ಕೆ ತ್ರಿಶೂರು ಕಡೆಗೆ ಶಾಂತಿನಗರ ಬಸ್‌ ನಿಲ್ದಾಣದಿಂದ ಹೊರಡಲಿವೆ.
ಹೊರ ರಾಜ್ಯಗಳಿಗೆ ಹೋಗುವಂತಹ ಪ್ರಯಾಣಿಕರಿಗೆ ‘ಅಂಬಾರಿ ಉತ್ಸವ’ ವೋಲ್ವೋ 9600 ಮಲ್ಟಿಆ್ಯಕ್ಸಲ್‌ ಸ್ಲೀಪರ್‌ ಬಸ್‌ಗಳಲ್ಲಿ ಆಸನಗಳನ್ನು ಕಾಯ್ದಿರಿಸಲು ಗುರುವಾರ ಅವಕಾಶ ನೀಡಲಾಗಿತ್ತು. ಕೇವಲ ಒಂದೇ ದಿನದಲ್ಲಿ ಶೇ.60ಕ್ಕಿಂತ ಹೆಚ್ಚು ಬಸ್‌ಗಳು ಭರ್ತಿಯಾಗಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಂತಸಕ್ಕೆ ಕಾರಣವಾಗಿದೆ.

KSRTC: ರಸ್ತೆಗಿಳಿದ 15 ‘ಅಂಬಾರಿ ಉತ್ಸವ’ ಸ್ಲೀಪರ್‌ ಬಸ್‌

ಟಿಕೆಟ್‌ ದರ ಇಂತಿದೆ:

ಬೆಂಗಳೂರು -ಪಣಜಿ, ಗೋವಾ 2 ಸಾವಿರ ರು., ಬೆಂಗಳೂರು- ಹೈಟೆಕ್‌ ಸಿಟಿ ಹೈದ್ರಾಬಾದ್‌ 1700 ರು., ಬೆಂಗಳೂರು-ಸಿಕಂದ್ರಾಬಾದ್‌ 1700 ರು., ಬೆಂಗಳೂರು-ತಿರುವನಂತಪುರ 2100 ರು. ಮತ್ತು ಬೆಂಗಳೂರು- ಎರ್ನಾಕುಲಂ 1700 ರು. ಟಿಕೆಟ್‌ ದರ ನಿಗದಿಪಡಿಸಲಾಗಿದೆ.