KSRTC non-Shakti scheme revenue: ಶಕ್ತಿ ಯೋಜನೆಯಿಂದಾಗಿ ನಿಗಮದ ಆದಾಯ ಹೆಚ್ಚಾಗಿದ್ದು, ಇದೀಗ ಕೆಎಸ್ಸಾರ್ಟಿಸಿ ಶಕ್ತಿ ಯೋಜನೇತರ ಆದಾಯವನ್ನು, ಅಂದರೆ ಪುರುಷ ಪ್ರಯಾಣಿಕರಿಂದ ಬರುವ ಟಿಕೆಟ್‌ ಆದಾಯವನ್ನು ಹೆಚ್ಚಿಸಲು ಮುಂದಾಗಿದೆ. 

ಬೆಂಗಳೂರು (ನ.19): ಶಕ್ತಿ ಯೋಜನೆಯಿಂದ ಬರುವ ಆದಾಯ ಹೊರತುಪಡಿಸಿ, ಶಕ್ತಿ ಯೋಜನೇತರ ಆದಾಯ (ಪುರುಷ ಪ್ರಯಾಣಿಕರ ಟಿಕೆಟ್‌ ಆದಾಯ) ವೃದ್ಧಿಸುವ ಉದ್ದೇಶದಿಂದಾಗಿ ಕೆಎಸ್ಸಾರ್ಟಿಸಿಯು ತನ್ನ ವ್ಯಾಪ್ತಿಯ ಪ್ರತಿ ಘಟಕದಲ್ಲಿ ಸಂಗ್ರಹವಾಗುತ್ತಿರುವ ಆದಾಯದ ವರದಿ ಪಡೆಯಲು ಮುಂದಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಕ್ತಿ ಯೋಜನೆಯಿಂದ ಆದಾಯ ಹೆಚ್ಚಳ:

ರಾಜ್ಯದಲ್ಲಿ ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದರಿಂದ ನಿಗಮಗಳಿಗೆ ಬರುವ ಆದಾಯದಲ್ಲೂ ಏರಿಕೆಯಾಗುವಂತಾಗಿದೆ. ಅದರ ಜತೆಗೆ ಶಕ್ತಿ ಯೋಜನೆ ವ್ಯಾಪ್ತಿಗೊಳಪಡದ ಪ್ರಯಾಣಿಕರಿಂದ ನಿಗಮಕ್ಕೆ ಆದಾಯ ಹೆಚ್ಚಿಸಲು ಕೆಎಸ್ಸಾರ್ಟಿಸಿ ಮುಂದಾಗಿದೆ. ಅದಕ್ಕಾಗಿ ಪ್ರತಿ ಘಟಕದಲ್ಲಿ ಕಳೆದ 6 ತಿಂಗಳಲ್ಲಿ ಶಕ್ತಿ ಯೋಜನೆ ಆದಾಯ ಹೆಚ್ಚಾಗಿ ಸಂಗ್ರಹವಾಗುತ್ತಿರುವ 10 ಮಾರ್ಗಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಅದನ್ನಾಧರಿಸಿ ಆ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕರಿಂದ ಅಭಿಪ್ರಾಯ ಸಂಗ್ರಹಿಸಿ, ಆ ಮಾರ್ಗದಲ್ಲಿ ಹೆಚ್ಚಿನ ಬಸ್‌ಗಳನ್ನು ಸೇವೆಗೆ ನೀಡುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. 

ಶಕ್ತಿ ಯೋಜನೆಯ ಆದಾಯ ಹೊರತುಪಡಿಸಿ ಹೆಚ್ಚಿನ ಆದಾಯ:

ಶಕ್ತಿ ಯೋಜನೆಯಿಂದ ಬರುವ ಆದಾಯ ಹೊರತುಪಡಿಸಿ, ಶಕ್ತಿ ಯೋಜನೇತರ ಆದಾಯ (ಪುರುಷ ಪ್ರಯಾಣಿಕರ ಟಿಕೆಟ್‌ ಆದಾಯ) ವೃದ್ಧಿಸುವ ಉದ್ದೇಶದಿಂದಾಗಿ ಕೆಎಸ್ಸಾರ್ಟಿಸಿಯು ತನ್ನ ವ್ಯಾಪ್ತಿಯ ಪ್ರತಿ ಘಟಕದಲ್ಲಿ ಸಂಗ್ರಹವಾಗುತ್ತಿರುವ ಆದಾಯದ ವರದಿ ಪಡೆಯಲು ಮುಂದಾಗಿದೆ.