ಕೆ.ಎಸ್.ಈಶ್ವರಪ್ಪ ನೀವು ಕೊಲ್ಲಲು ಸಿದ್ಧರಿದ್ದೀರಾ? ನಾನು ನಿಮ್ಮ ಮನೆಗೆ ಬರ್ತೇನೆ: ಸವಾಲೆಸೆದ ಸಂಸದ ಡಿ.ಕೆ. ಸುರೇಶ್!
ಕರ್ನಾಟಕ ಹಾಗೂ ಕನ್ನಡಪರವಾಗಿ ಧ್ಬನಿ ಎತ್ತಿದ್ದಕ್ಕೆ ನನ್ನನ್ನು ಕೊಲ್ಲುವಂತೆ ಹೇಳುತ್ತಾರೆ. ಬೇರೆಯವರು ಕೊಲ್ಲೋದ್ಯಾಕೆ ಈಶ್ವರಪ್ಪನವರೇ ಸಿದ್ಧರಾಗಿ ನಾನೇ ನಿಮ್ಮ ಮುಂದೆ ಬರುತ್ತೇನೆ ಎಂದು ಸಂಸದ ಡಿ.ಕೆ. ಸುರೇಶ್ ಸವಾಲು ಹಾಕಿದರು.
ಬೆಂಗಳೂರು (ಫೆ.10): ಮಹಾತ್ಮ ಗಾಂಧೀಜಿಯನ್ನೇ ಕೊಂದ ಪಕ್ಷಕ್ಕೆ ನಾನೊಬ್ಬ ಸಣ್ಣ ವ್ಯಕ್ತಿ ಕೊಲೆ ಮಾಡೋದೇನು ದೊಡ್ಡದಲ್ಲ. ಕನ್ನಡ ಪರ ಧ್ವನಿ ಎತ್ತಿದ್ದಕ್ಕೆ, ಕರ್ನಾಟಕ ಪರ ಧ್ವನಿ ಎತ್ತಿದ್ದಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗುಂಡಿಕ್ಕಿ ಕೊಲ್ಲಿ ಅಂತ ಹೇಳಿದ್ದಾರೆ. ಅವರಿವರು ಕೊಲ್ಲುವುದು ಏತಕ್ಕೆ, ಒಂದು ವಾರದಲ್ಲಿ ನಾನೇ ನಿಮ್ಮ ಮನೆಗೆ ಬಂದು ನಿಮ್ಮ ಮುಂದೆ ನಿಲ್ಲುತ್ತೇನೆ. ಈಶ್ವರಪ್ಪನವರೇ ಗುಂಡಿಕ್ಕುತ್ತೀರಾ..? ಕೊಲ್ಲುತ್ತೀರಾ ನೋಡೋಣ ಎಂದು ಸಂಸದ ಡಿ.ಕೆ. ಸುರೇಶ್ ಸವಾಲು ಹಾಕಿದರು.
ಮಾಜಿ ಸಚಿವ ಈಶ್ವರಪ್ಪ ಅವರ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇತಿಹಾಸ ತಮಗೆಲ್ಲರಿಗೂ ಗೊತ್ತಿದೆ. ಮಹಾತ್ಮ ಗಾಂಧೀಜಿ ಕೊಂದಂತಹ ಕೀರ್ತಿ ಅವರ ಪಕ್ಷಕ್ಕೆ ಇದೆ. ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡ ಪರ ಧ್ವನಿ ಎತ್ತಿದ್ದಕ್ಕೆ, ಕರ್ನಾಟಕ ಪರ ಧ್ವನಿ ಎತ್ತಿದ್ದಕ್ಕೆ ಗುಂಡಿಕ್ಕಿ ಕೊಲ್ಲಿ ಅಂತ ಹೇಳಿದ್ದಾರೆ ಎಂಬ ವರದಿ ಬರ್ತಿದೆ. ಬಡವರನ್ನು ಬಾವಿಗೆ ತಳ್ಳಿ ಯಾಕೆ ಆಳ ನೋಡ್ತೀರಾ..? ಬಿಜೆಪಿಯವರು ನಿಮಗೆ ಮೂಲೆಗುಂಪು ಮಾಡಿದ್ದಾರೆ ಅನ್ಸುತ್ತೆ. ಅದಕ್ಕೆ ಆಗಾಗ ಏನೇನೊ ಮಾತಾಡ್ತಿದ್ದಿರಾ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.
ನರೇಂದ್ರ ಮೋದಿ ಅಧಿಕಾರದಲ್ಲಿ ಒಂದಾದ್ರೂ ಡ್ಯಾಮ್ ಕಟ್ಟಿದ್ರೆ ಹೇಳಲಿ, ಅವರ ಗುಲಾಮನಾಗ್ತೀನಿ: ಶಾಸಕ ನರೇಂದ್ರಸ್ವಾಮಿ
ನಿಮ್ಮ ಹೇಳಿಕೆಯನ್ನು ಕೇಳಿ ನಾನು ಒಂದು ತೀರ್ಮಾನಕ್ಕೆ ಬಂದಿದ್ದೇನೆ. ತಾವು ಸಮಯ ಕೊಟ್ಟರೆ ನಾನೇ ನಿಮ್ಮ ಮುಂದೆ ನಿಂತುಕೊಳ್ಳುತ್ತೇನೆ. ಬೇರೆಯವರು ಯಾಕೆ ಗುಂಡಿಟ್ಟು ಕೊಲ್ಲಬೇಕು. ದಯವಿಟ್ಟು ನಿಮ್ಮ ಆಸೆ ಈಡೇರಿಸಿಕೊಂಡು, ನಿಮ್ಮ ನಾಯಕರಿಂದ ನೀವೇ ಶಬಾಷ್ ಗಿರಿ ತೆಗೆದುಕೊಳ್ಳಿ. ಬೇರೆಯವರು ಯಾಕೆ ಗುಂಡಿಟ್ಟು ಕೊಲ್ಲಬೇಕು. ಸಮಯ ಕೊಡ್ತಿನಿ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ. ಬಡವರ ಮಕ್ಕಳನ್ನು ರೊಚ್ಚಿಗೆಬ್ಬಿಸಿ, ಅವರ ಮೇಲೆ ಕೇಸ್ ಹಾಕ್ಸಿ, ಅವರನ್ನು ಬಾವಿಗೆ ತಳ್ಳಿ ಆಳ ನೋಡುವ ಬದಲು ನೀವೇ ಆಳಕ್ಕೆ ಇಳಿದು ನೋಡಿ. ಪಾಪ ನೀವು ಮಹಾನ್ ನಾಯಕರು, ನಿಮ್ಮ ನಾಯಕತ್ವಕ್ಕೆ ಶಬಾಷ್ ಗಿರಿ ತೆಗೆದುಕೊಳ್ಳಬೇಕು ಅಂತ ಅಲ್ಲಿ ಇಲ್ಲಿ ಯಾಕೆ ಹುಡುಕುತ್ತೀರಾ? ನಾನೇ ನಿಮ್ಮ ಮನೆಗೆ ಬರ್ತಿನಿ. ಒಂದು ವಾರದಲ್ಲಿ ಸಮಯ ನಿಗದಿ ಮಾಡ್ತೀನಿ, ನಿಮ್ಮನ್ನ ಭೇಟಿ ಮಾಡ್ತೀನಿ. ಈಶ್ವರಪ್ಪನವರೇ ಸಿದ್ಧರಾಗಿ ಗುಂಡುಕ್ಕುತ್ತೀರಾ ಅಥವಾ ಕೊಲ್ಲುತ್ತೀರಾ ನೋಡೋಣ ಎಂದು ಸವಾಲು ಹಾಕಿದರು.
ಹಿಂದೂಗಳ ಟ್ಯಾಕ್ಸ್ ಹಿಂದೂಗಳಿಗೆ ಕೊಡಬೇಕು ಎಂದು ಹರೀಶ್ ಪೂಂಜಾ ಟ್ವೀಟ್ ಮಾಡಿದ ಬಗ್ಗೆ ಮಾತನಾಡಿದ ಸಂಸದ ಸುರೇಶ್, ಒಳ್ಳೆಯದು, ಒಬ್ಬೊಬ್ಬರಾಗಿ ಒಂದೊಂದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರೂ ಮೌನವಾಗಿದ್ದರು. ಇಂದು ಚರ್ಚೆ ವ್ಯಾಖ್ಯಾನ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ. ನಿರಂತರವಾಗಿ ಕರ್ನಾಟಕದ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ. ನಮ್ಮ ತೆರಿಗೆ ಪಾಲು ಎಷ್ಟಿದೆ ಎಂದು ವರದಿ ಮಾಡ್ತೀದ್ದೀರಾ.? ಬೇರೆ ರಾಜ್ಯಕ್ಕೆ ಎಷ್ಟು ಟ್ಯಾಕ್ಸ್ ಕೊಡ್ತೀರಾ.? ಎಂದು ಪ್ರಶ್ನೆ ಮಾಡಿದರು.
ಬೆಂಗಳೂರು ಅಪಾರ್ಟ್ಮೆಂಟ್ ಈಜುಕೊಳದಲ್ಲಿ ಬಾಲಕಿ ಸಾವು; 45 ದಿನದ ಬಳಿಕ ಸಿಕ್ಕ ಟ್ವಸ್ಟ್‌ನಿಂದ 7 ಮಂದಿ ಬಂಧನ!
ಕರ್ನಾಟಕ ರಾಜ್ಯಕ್ಕೆ ಎಷ್ಟು ತೆರಿಗೆ ಪಾಲು ಬರ್ತಿದೆ. ಯಾವೆಲ್ಲ ಯೋಜನೆ ಕರ್ನಾಟಕಕ್ಕೆ ಸಿಕ್ಕಿದೆ, ಯಾವ ವರ್ಷಗಳಿಂದ ಯೋಜನೆಗಳು ರಾಜ್ಯಕ್ಕೆ ಸಿಗ್ತಿದೆ? ಎಲ್ಲದರಲ್ಲೂ ತಡೆದುಕೊಳ್ಳಬೇಕಾ ನಾವು? ನ್ಯಾಷನಲ್ ಹೈವೇ ಜಾಸ್ತಿ ಆಗಿದೆ ಅಂತಾ ಕೆಲವು ಯೋಜನೆಗಳನ್ನು ತಡೆದಿದ್ದಾರೆ ಅಂದರೆ ಯಾರನ್ನು ಕೇಳಬೇಕು? ನಾನೇನು ಭಾರತರ ವಿರೋಧಿ ಅಲ್ಲ. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇನೆ. ನಾನು ಸಂವಿಧಾನದ ಆಶಯದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ದೇಶದ್ರೋಹಿ ಎಂದು ಬಿಂಬಿಸಿ ಕೊಲ್ಲಬೇಕೆಂಬ ಇಚ್ಛಾಶಕ್ತಿ ಇದ್ದರೆ, ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ. ಈಶ್ವರಪ್ಪ ಅವರೇ ಖಂಡಿತ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ರೆಡಿಯಾಗಿ ಎಂದು ಮತ್ತೊಮ್ಮೆ ಆಕ್ರೋಶ ಹೊರ ಹಾಕಿದರು.