Asianet Suvarna News Asianet Suvarna News

ಮಂಗಳೂರು: ಕೃಷ್ಣ ಜನ್ಮಾಷ್ಟಮಿ-ಮೊಸರುಕುಡಿಕೆಗೆ  ಪೊಲೀಸ್ ಮಾರ್ಗಸೂಚಿ ಪ್ರಕಟ, ಇಲ್ಲಿದೆ ಮಾಹಿತಿ!

ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಆಚರಣೆಗಾಗಿ ಮಂಗಳೂರು ಪೊಲೀಸರು ಮಾರ್ಗಸೂಚಿ ಪ್ರಕಟಿಸಿದ್ದು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಸೂಚನೆ ನೀಡಿದ್ದಾರೆ.

krishna janmashtami mangaluru police department published guidelines for festival celebrations rav
Author
First Published Sep 1, 2023, 10:43 PM IST

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಸೆ.1): ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಆಚರಣೆಗಾಗಿ ಮಂಗಳೂರು ಪೊಲೀಸರು ಮಾರ್ಗಸೂಚಿ ಪ್ರಕಟಿಸಿದ್ದು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಸೂಚನೆ ನೀಡಿದ್ದಾರೆ.

ಕೃಷ್ಣ ಜನ್ಮಾಷ್ಟಮಿ(krishna janmashtami) ಮತ್ತು ಮೊಸರುಕುಡಿಕೆ ಕಾರ್ಯಕ್ರಮ ಆಚರಣೆ ಸಂಬಂಧ ಮಾರ್ಗಸೂಚಿಗಳು ಹೀಗಿವೆ.

  • ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಕಾರ್ಯಕ್ರಮ ಆಯೋಜಿಸುವವರು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಮುಂಚಿತವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು. 
  • ಮಡಿಕೆಗಳನ್ನು 14 ಫೀಟ್ ಎತ್ತರದವರೆಗೆ ಮಾತ್ರ ಕಟ್ಟುವುದು. ಮಡಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಕಟ್ಟತಕ್ಕದ್ದಲ್ಲ.
  • ಮಡಿಕೆಗಳನ್ನು ಕಟ್ಟುವಾಗ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಸೂಕ್ತ ನಿಗಾವಹಿಸಬೇಕು.
  • ಮಡಿಕೆ ಒಡೆಯುವ ಸ್ವಯಂಸೇವಕರ ಮೇಲೆ ತಂಪು ನೀರನ್ನು (Cold water) ಚೆಲ್ಲುವುದನ್ನು ಮಾಡಬಾರದು.
  • ಪೊಲೀಸ್ ಇಲಾಖೆಯಿಂದ ಅಂತಿಮಗೊಳಿಸಲಾದ ರೂಟ್ ನಲ್ಲಿ ಮಾತ್ರ ಮೆರವಣಿಗೆ ಸಾಗುವುದು. 
  • ಮಡಿಕೆ ಕಟ್ಟುವಾಗ, ಸ್ಥಬ್ದಚಿತ್ರ ತಯಾರು ಮಾಡುವಾಗ ಸ್ಥಳದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಯ ಬಗ್ಗೆ ಎಚ್ಚರಿಕೆ ವಹಿಸುವುದು.
  • ಮೊಸರು ಕುಡಿಕೆ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು.
  • ತುರ್ತು ಸಂದರ್ಭದಲ್ಲಿ ಬಳಸಲು ಅನುಕೂಲವಾಗುವಂತೆ ಮೆರವಣಿಗೆಯಲ್ಲಿ ಒಂದು ಸುಸಜ್ಜಿತ ಅಂಬ್ಯುಲೆನ್ಸ್ ವ್ಯವಸ್ಥೆಗೊಳಿಸಬೇಕು.
  • ಧ್ವನಿವರ್ಧಕ ಬಳಕೆ ಬಗ್ಗೆ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳುವುದು. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾತ್ರಿ 10.00 ಗಂಟೆ ತನಕ ಧ್ವನಿವರ್ಧಕ ಬಳಸಲು ಅವಕಾಶವಿರುವುದಿಲ್ಲ.
  • ಯಾವುದೇ ಕಾರಣಕ್ಕೂ ಮೆರವಣಿಗೆಯಲ್ಲಿ ಡಿ.ಜೆ ಬಳಸಬಾರದು.
  • ಫಿಟ್‌ನೆಸ್ ಸರ್ಟಿಫಿಕೇಟ್. ಇನ್ಸೂರೆನ್ಸ್ ಸರ್ಟಿಫಿಕೇಟ್ ಇರುವ ವಾಹನಗಳಲ್ಲಿ ಮಾತ್ರ ಸ್ಥಬ್ದಚಿತ್ರವನ್ನು ಅಳವಡಿಸಲು ಉಪಯೋಗಿಸುವುದು.
  • ಸ್ವಯಂಸೇವಕರನ್ನು ಗುಂಪುಗಳಾಗಿ ವಿಂಗಡಿಸಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ನಿಯೋಜಿಸಿ ಮೆರವಣಿಗೆಯು ಸುಲಲಿತವಾಗಿ ಸಾಗುವಂತೆ ಮಾಡುವುದು.
  • ಯಾವುದೇ ಧರ್ಮ/ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವಂತಹ ಟ್ಯಾಬ್ಲೋ ನೃತ್ಯರೂಪಕ ಇರಬಾರದು.
  • ಸುಡುಮದ್ದು ಬಳಸುವಾಗ ಆಸ್ಪತ್ರೆಗಳ ಬಳಿ, ಜನ ಸಂದಣಿಯ ಮಧ್ಯೆ ಬಳಸಬಾರದು ಹಾಗೂ ರಾತ್ರಿ 10:00 ಗಂಟೆಯ ನಂತರ ಸುಡುಮದ್ದು/ಪಟಾಕಿಗಳನ್ನು ಬಳಸತಕ್ಕದ್ದಲ್ಲ.
  • ಕಾರ್ಯಕ್ರಮಕ್ಕೆ ಸಂಬಂಧಿಸಿ ಸಾರ್ವಜನಿಕ ಸ್ಥಳಗಳಲ್ಲಿ ಪ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸುವ ಪೂರ್ವದಲ್ಲಿ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕು.
  • ಕಾಠ್ಯಕ್ರಮಕ್ಕೆ ಸಂಬಂಧಿಸಿ ಅಳವಡಿಸುವ ಪ್ಲೆಕ್ಸ್, ಬ್ಯಾನರ್‌ಗಳಲ್ಲಿ ಯಾವುದೇ ಪ್ರಚೋದನಾತ್ಮಕ ಬರಹಗಳು/ಚಿತ್ರಗಳನ್ನು ಬಳಸಬಾರದು.
  • ಕಾಠ್ಯಕ್ರಮಕ್ಕೆ ಸಂಬಂಧಿಸಿ ಅಳವಡಿಸಿದ ಎಲ್ಲಾ ಪ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಕಾಠ್ಯಕ್ರಮ ಮುಗಿದ ಕೂಡಲೇ ಸಂಘಟಕರೇ ಕಡ್ಡಾಯವಾಗಿ ತೆರವುಗೊಳಿಸಬೇಕು.
  • ಕಾರ್ಯಕ್ರಮಕ್ಕೆ ಬರುವ ಜನರ ವಾಹನ ಪಾರ್ಕಿಂಗ್‌ಗೆ ಸ್ಥಳ ಗುರುತಿಸುವುದು. ಮೆರವಣಿಗೆ ಹಾದುಹೋಗುವ ರಸ್ತೆಯಲ್ಲಿ ವಾಹನಗಳ ನಿಲುಗಡೆಯಾಗದಂತೆ ಸ್ವಯಂಸೇವಕರನ್ನು ನಿಯೋಜಿಸುವುದು.
  • ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಬಂದೋಬಸ್ತ್ ಕರ್ತವ್ಯದಲ್ಲಿ ಇರುವ ಪೊಲೀಸ್ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವುದು ಪಾಲಿಸುವುದು ಮತ್ತು ಪೊಲೀಸರೊಂದಿಗೆ ಸಂಘಟಕರು ಸಹಕರಿಸುವುದು. 

ಉಡುಪಿ: ಕೃಷ್ಣನಿಗೆ ಕೃಷ್ಣಾಪುರ ಶ್ರೀಗಳಿಂದ ಅರ್ಘ್ಯ ಪ್ರದಾನ, ಇಂದು ಲೀಲೋತ್ಸವ

ಧ್ವನಿವರ್ಧಕ ಅಳವಡಿಸುವವರಿಗೆ ಸೂಚನೆಗಳು

  • ಸ್ಥಬ್ಧಚಿತ್ರಗಳಲ್ಲಿ/ಕಾರಕ್ರಮ ಸ್ಥಳಗಳಲ್ಲಿ ಧ್ವನಿವರ್ಧಕವನ್ನು ಅಳವಡಿಸುವ ಮೊದಲು ಪೊಲೀಸ್ ಇಲಾಖೆಯಿಂದ ಪಡೆಯಲಾದ ಪರವಾನಿಗೆಯನ್ನು ಪರಿಶೀಲಿಸಿ ಅನುಮತಿ ಇದ್ದಲ್ಲಿ ಮಾತ್ರ ಧ್ವನಿವರ್ಧಕವನ್ನು ಅಳವಡಿಸುವುದು.
  • ಪೊಲೀಸ್ ಇಲಾಖೆಯಿಂದ ನೀಡಲಾದ ಪರವಾನಗಿಯಲ್ಲಿ ನಿಗಧಿಪಡಿಸಿದ ಸಮಯದವರೆಗೆ ಮಾತ್ರ ಧ್ವನಿವರ್ಧಕವನ್ನು ಬಳಸುವುದು.
  • ಡಿ.ಜೆ ಬಳಸಲು ಅವಕಾಶ ಇರುವುದಿಲ್ಲ.
  • ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಬಳಿ ಧ್ವನಿವರ್ಧಕ ಅಳವಡಿಸಬಾರದು 

 

Follow Us:
Download App:
  • android
  • ios