ಕನ್ನಡಕ್ಕೆ ಕೆಪಿಎಸ್‌ಸಿಯಿಂದಲೇ ಕಂಟಕ, ಬೃಹತ್‌ ಹೋರಾಟಕ್ಕೆ ರೆಡಿಯಾದ ಕರವೇ!

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡದ ಪ್ರಶ್ನೆಪತ್ರಿಕೆಗಳಲ್ಲಿನ ದೋಷಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ. ಕನ್ನಡ ಮಕ್ಕಳ ಬದುಕಿನ ಜೊತೆ ಆಟ ಆಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಮರುಪರೀಕ್ಷೆ ನಡೆಸುವಂತೆ ಆಗ್ರಹಿಸಿ ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕರವೇ ಘೋಷಿಸಿದೆ.

kpsc kannada paper Mistakes karnataka Rakshana vedike Ready For Protest san

ಬೆಂಗಳೂರು (ಆ.31): ಪ್ರಶ್ನೆಪತ್ರಿಕೆಗಳಲ್ಲಿ ಕನ್ನಡ ಕಗ್ಗೊಲೆ ಮಾಡಿದ ಕೆಪಿಎಸ್‌ಸಿ ವಿರುದ್ಧ ಕನ್ನಡಿಗರ ಪ್ರತಿಭಟನೆ ತೀವ್ರಗೊಂಡಿದೆ. ದೊಡ್ಡ ಮಟ್ಟದ ಸೋಶಿಯಲ್‌ ಮೀಡಿಯಾ ಅಭಿಯಾನದ ಬಳಿಕ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಈಗ ಕಣಕ್ಕಿಳಿದಿದೆ. ದೋಷಪೂರಿತ ಪ್ರಶ್ನೆಪತ್ರಿಕೆಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಅನಾಚಾರಗಳನ್ನು ಮಾಡಿರುವ ಕೆಪಿಎಸ್‌ಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದರೂ, ಸರ್ಕಾರ ಮಾತ್ರ ಏನೂ ಆಗೇ ಇಲ್ಲ ಎನ್ನುವಂತೆ ಸುಮ್ಮನೆ ಕುಳಿತಿರುವುದು ಅಚ್ಚರಿಗೆ ಕಾರಣವಾಗಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸಭೆ ನಡೆಸಿದ ಬಳಿಕ ಕರವೇ ನಾರಾಯಣಗೌಡ ಮಾತನಾಡಿದ್ದು. ಪಿಜಿಗಳಲ್ಲಿ, ಹಾಸ್ಟೆಲ್ ಇದ್ದು ಓದಿ ಪರೀಕ್ಷೆ ಪಾಸಾಗುವ ಕನಸು ಕಂಡಿದ್ದರು. ಆದರೆ, ಪರೀಕ್ಷೆ ಬರೆಯಲು ಬಂದ ಮಕ್ಕಳಿಗೆ ದೊಡ್ಡ ಆಘಾತ ಕಾದಿತ್ತು. 120 ಅಂಕದ ಪ್ರಶ್ನೆ ಪತ್ರಿಕೆಯ ಪೇಪರ್ ಅಲ್ಲಿ 30 ಕ್ಕೂ ಅಧಿಕ ಸಂಬಂಧ ಇಲ್ಲದ ಪ್ರಶ್ನೆಗಳನ್ನು ಕೇಳಲಾಗಿದೆ. ಪದಬಳಕೆ, ಪ್ರಶ್ನೆ ಒಂದಕ್ಕೊಂದು ಸಂಬಂಧವೇ ಇಲ್ಲ. ಇಂಥ ಪ್ರತಿಷ್ಠಿತ ಪರೀಕ್ಷೆಯಲ್ಲಿಯೇ ಹೀಗಾದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಯಾವ ಉದ್ದೇಶಕ್ಕೆ ಇಂತಹ ಪ್ರಶ್ನೆ ಪತ್ರಿಕೆ ಕೊಟ್ಟಿದ್ದಾರೆ ಅನ್ನೋದೇ ಅರ್ಥವಾಗ್ತಿಲ್ಲ. ಕನ್ನಡ ಮಕ್ಕಳ ಬದುಕಿನ ಜೊತೆ ಯಾಕೆ ಆಟ ಆಡ್ತಾ ಇದ್ದಾರೆ ಅರ್ಥ ಆಗ್ತಿಲ್ಲ . ಲಕ್ಷಾಂತರ ಮಕ್ಕಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಮರು ಪರೀಕ್ಷೆಗೆ ಅವಕಾಶ ಕೊಡಿ ಅಂತ ಮಕ್ಕಳು ಆಗ್ರಹ ಮಾಡಿದ್ದಾರೆ. ನದಿ ಮೂಲದ ವ್ಯವಸ್ಥೆಗೆ ಚರಂಡಿ ಅನ್ನೋ ಪದ ಬಳಕೆ ಮಾಡಿದ್ದಾರೆ ಇದು ದೊಡ್ಡ ಗೊಂದಲ, ನಾಡಿನ ಮಕ್ಕಳಿಗೆ ದೊಡ್ಡ ಅನ್ಯಾಯ ಆಗಿದೆ. ಮಕ್ಕಳು DYSP, ತಹಶೀಲ್ದಾರ್ ಆಗುವ ಕನಸು ಮಕ್ಕಳು ಹೊತ್ತಿದ್ದರು ಎಂದಿದ್ದಾರೆ.

ಕೆಎಎಸ್ ಪರೀಕ್ಷೆ ಮುಂದೂಡಲು ಕೆಲವರು ಲಾಬಿ? ನಾಳೆಯೇ ಪರೀಕ್ಷೆ ಎಂದ ಸರ್ಕಾರ!

ಜ್ಞಾನೇಂದ್ರ ಕುಮಾರ್ ಅನ್ನುವ ಅಧಿಕಾರಿ ವಿರುದ್ಧ ಕಿಡಿಕಾರಿದ ನಾರಾಯಣಗೌಡ, ತಮ್ಮ ಅಳಲನ್ನು ನೋವನ್ನ ಹಂಚಿಕೊಂಡಾಗ ಉತ್ತರ ಕೊಡೋದು. ನಿಮ್ಮ ಎಲ್ಲಾ ನೋವನ್ನ ಎಂಜಾಯ್ ಮಾಡ್ತೀನಿ ಅಂತ ದುರಹಂಕಾರದ ಉತ್ತರ ಕೊಡ್ತಾರೆ. ಉತ್ತರ ಭಾರತದ ಅಧಿಕಾರಿಯ ದರ್ಪ ದುರಹಂಕಾರ ನೋಡಿ. ಕನ್ನಡ ನಾಡಿನ ಮಕ್ಕಳ ನೋವನ್ನ ಎಂಜಾಯ್ ಮಾಡ್ತಾನೇ ಅಂತಾನೆ. ಅವನ ಕೆನ್ನೆಗೆ 2 ಬಾರಿಸಬೇಕು. ಇದೆ ಕಾರಣಕ್ಕೆ ಫ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ ಮಾಡುವ ತೀರ್ಮಾನ ಮಾಡಿದ್ದೇವೆ. ಮಕ್ಕಳ ಪರವಾಗಿ ಇಡೀ ಕರ್ನಾಟಕ ರಕ್ಷಣಾ ವೇದಿಕೆ ನಿಲ್ಲುತ್ತೆ. ಸೋಮವಾರ 11 ಗಂಟೆ ಧರಣಿ ಸತ್ಯಾಗ್ರಹ ಫ್ರೀಡಂ ಪಾರ್ಕ್ ಅಲ್ಲಿ ಆರಂಭ ಮಾಡ್ತೀವಿ ಎಂದು ಹೇಳಿದ್ದಾರೆ.

ಕೆಎಎಸ್ ಪರೀಕ್ಷೆ ಮುಂದೂಡಿಕೆ ಮಾಡಿ; ತರಾತುರಿ ಪರೀಕ್ಷೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೇಂದ್ರ ಸಚಿವರು

Latest Videos
Follow Us:
Download App:
  • android
  • ios