Asianet Suvarna News Asianet Suvarna News

Mekedatu Padayatreಗೂ ಮುನ್ನ ಡಿಕೆ ಶಿವಕುಮಾರ್ ಕುಟುಂಬ ಸಮೇ​ತ​ರಾಗಿ ಟೆಂಪಲ್‌ ರನ್‌!

*ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೆಂಪಲ್‌ ರನ್‌
*ಮನೆ ದೇವರು ಕೆಂಕೇರಮ್ಮ ದೇವಸ್ಥಾನಕ್ಕೆ  ಭೇಟಿ
*ಬುಕ್‌ ಮಾಡಿದ ಹೋಟೆಲ್‌ ಕ್ಲೋಸ್‌ ಮಾಡಿಸಿದ್ದಾರೆ: ಡಿಕೆಶಿ
 

KPCC President DK Shivakumar Visits temples in Ramanagar ahead of Mekedatu Padayatre mnj
Author
Bengaluru, First Published Jan 9, 2022, 1:10 AM IST

ರಾಮನಗರ /ಕನ​ಕ​ಪುರ (ಜ. 9): ಮೇಕೆದಾಟು ಪಾದಯಾತ್ರೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D K Shivakumar) ಕುಟುಂಬ ಸಮೇತರಾಗಿ ಶನಿ​ವಾ​ರ ಟಂಪಲ್‌ ರನ್‌ ನಡೆ​ಸಿ​ದರು. ಕನಕಪುರದಲ್ಲಿರುವ (Kanakapura) ಮನೆ ದೇವರು ಕೆಂಕೇರಮ್ಮ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌, ಪತ್ನಿ ಉಷಾ ಅವ​ರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಸಾತ​ನೂ​ರಿನ ಕಬ್ಬಾ​ಳಮ್ಮ ದೇವಾ​ಲ​ಯಕ್ಕೂ ತೆರಳಿ ದೇವಿ​ಯ​ ದರ್ಶನ ಪಡೆದು ದೇವಿಗೆ 9 ಈಡಗಾಯಿ ಒಡೆದರು. ನಂತರ ಕನ​ಕ​ಪು​ರದ ಜಾಮೀಯ ಮಸೀ​ದಿಗೂ ಡಿ.ಕೆ.​ಶಿ​ವ​ಕು​ಮಾರ್‌ ಭೇಟಿ ನೀಡಿ​ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಬೇಡಿಕೊಂಡರು.

ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ಮನೆ ದೇವರಿಗೆ ಪೂಜೆ ನೆರ​ವೇ​ರಿ​ಸು​ವು​ದನ್ನು ಡಿ.ಕೆ. ಶಿವಕುಮಾರ್‌ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಅದರಂತೆ ನಾಳೆ ನಡೆಯಲಿರುವ ಮೇಕೆದಾಟು ಪಾದಯಾತ್ರೆ ಯಶಸ್ವಿಯಾಗುವಂತೆ ದೇವರಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.ಈ ಸಂದರ್ಭದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಡಿ.ಕೆ.​ಶಿ​ವ​ಕು​ಮಾರ್‌, ನಾಳೆ ಮೇಕೆದಾಟಿನಿಂದ ಪಾದಯಾತ್ರೆ ಮಾಡಲಿದ್ದೇವೆ. ಯಾರೇ ಯಾವುದೇ ಅಡೆತಡೆ ನಡೆಸಿದರೂ ಕೂಡ ಪಾದಯಾತ್ರೆ ನಡೆದೇ ನಡೆಯುತ್ತದೆ. ನಾನು ಹಾಗೂ ಸಿದ್ದರಾಮಯ್ಯ ಈಗಾಗಲೇ ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದೇವೆ ಎಂದ​ರು.

ಇದನ್ನೂ ಓದಿ: Mekedatu Padayatra, ಮೇಕೆದಾಟು ಪಾದಯಾತ್ರೆ, ಡಿಕೆಶಿಗೆ ರಾಮನಗರ ಎಸ್‌ಪಿ ಖಡಕ್ ಎಚ್ಚರಿಕೆ

ಪಾದಯಾತ್ರೆಗೆ ಕಡಿವಾಣ ಹಾಕುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಲೇ ಇದೆ. ನಾವು ಈಗಾಗಲೇ ಪಾದ​ಯಾತ್ರೆ ಮಾಡೇ ಮಾಡು​ತ್ತೇ​ವೆಂದು ತೀರ್ಮಾನ ಮಾಡಿದ್ದೇವೆ. ನಾನು ಸಿದ್ದ​ರಾ​ಮಯ್ಯ ಇಬ್ಬರೇ ನಡೆ​ಯು​ತ್ತೇ​ವೆ. ಜನರು ಪಾದ​ಯಾ​ತ್ರೆಗೆ ಬಂದರೆ ಬರ​ಬೇಡಿ ಎಂದು ಹೇಳಲು ಆಗು​ತ್ತ​ದೆಯೇ. ಇದು ಜನರ ಆಂದೋ​ಲನ. ಎಲ್ಲರೂ ಕೋವಿಡ್‌ ನಿಯಮ ಪಾಲಿ​ಸಿ ಪಾದ​ಯಾತ್ರೆ ಮಾಡಲು ಸಿದ್ಧ​ರಾ​ಗಿ​ದ್ದೇವೆ ಎಂದು ಹೇಳಿ​ದರು.

ಬುಕ್‌ ಮಾಡಿದ ಹೋಟೆಲ್‌ಗಳನ್ನು ಕ್ಲೋಸ್‌ ಮಾಡಿಸಿದ್ದಾರೆ:

ಜಿಲ್ಲೆಯಲ್ಲಿ ಸಂಗಮ ಸೇರಿ​ದಂತೆ ಎಲ್ಲಾ ಪ್ರವಾಸಿ ತಾಣ​ಗ​ಳಿಗೂ ಜಿಲ್ಲಾ​ಡ​ಳಿತ ನಿರ್ಬಂಧ ಹೇರಿದೆ. ಪ್ರವಾಸಿಗÜರು ಹೋಟೆಲ್‌ಗಳಲ್ಲಿ ಬುಕ್‌ ಮಾಡಿದ್ದರು. ಅದೆ​ಲ್ಲ​ವನ್ನು ಡಿಸ್ಕೊ$್ಲೕಸ್‌ ಮಾಡಿ​ಸಿದ್ದಾರೆ. ಕೇಸು ಹಾಕು​ವು​ದಾ​ದರೆ ಎಲ್ಲರ ಮೇಲೂ ಹಾಕಲಿ ಎಂದು ಕಿಡಿ​ಕಾ​ರಿ​ದ​ರು.ಕೊರೋನಾ ಹೆಸ​ರಿ​ನಲ್ಲಿ ಸರ್ಕಾರ ಸುಳ್ಳು ಹೇಳು​ತ್ತಿದೆ. ರಾಮ​ನ​ಗ​ರ​ ಆಸ್ಪ​ತ್ರೆಯ ಐಸಿ​ಯು​ನಲ್ಲಿ ಎಷ್ಟುಜನರು ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ. ಜನ​ರಿಗೆ ಕಷ್ಟನೀಡಲು ಕಫä್ಯ​ರ್‍ ಹೇರಿ​ದ್ದಾರೆ. ಸುಮ್ಮನೆ ರಾಜ​ಕೀ​ಯ​ಕ್ಕಾಗಿ ಕಿರು​ಕುಳ ನೀಡು​ತ್ತಿ​ದ್ದಾರೆ ಎಂದು ಆರೋ​ಪಿ​ಸಿ​ದ​ರು.

ಇದನ್ನೂ ಓದಿ: Mekedatu Project: ರೂಲ್ಸ್ ಮೀರಿ ಸಭೆ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ: ಆರಗ

ಉದ​ಯ​ವಾ​ಗುವ ಸೂರ್ಯ, ಹರಿ​ಯುವ ನೀರನ್ನು ತಡೆ​ಯೋಕೆ ಆಗು​ತ್ತ​ದೆಯೇ. ಬಿಜೆ​ಪಿ​ಯ​ವರು ಹರಿ​ಯುವ ನೀರ​ನ್ನು​ತ​ಡೆ​ಯಲು ಹೊರ​ಟಿ​ದ್ದಾರೆ. ಅವ​ರಿಗೆ ಒಳ್ಳೆ​ಯ​ದಾ​ಗಲಿ. ಸಾಮಾನ್ಯ ಜ್ಞಾನ ಇದ್ದ​ವರು ಯಾರೂ ಕೂಡ ಪಾದ​ಯಾ​ತ್ರೆಗೆ ಅಡ್ಡಿ ಪಡಿ​ಸು​ತ್ತಿ​ರ​ಲಿಲ್ಲ. ಆದರೆ, ಬಿಜೆಪಿಯವ​ರಿಗೆ ಅವ​ರ​ದೇ​ಆದ ರಾಜ​ಕೀ​ಯ ಒತ್ತಡ ಇದೆ. ಹಾಗಾಗಿ ಪಾದ​ಯಾತ್ರೆ ತಡೆ​ಯಲು ಏನೇನು ಮಾಡ​ಬೇಕೋ ಅದೆ​ಲ​ವನ್ನು ಮಾಡು​ತ್ತಿದೆ ಎಂದು ಡಿ.ಕೆ.​ಶಿ​ವ​ಕು​ಮಾರ್‌ ಕಿಡಿ​ಕಾ​ರಿ​ದರು.

ಶಿವರಾಜ್​ ಕುಮಾರ್ ಬಲ?

ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ(Congress Mekedatu Padayatra) ಸ್ಯಾಂಡಲ್​​ವುಡ್ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಬಲ ಸಿಕ್ಕಿದೆ. ಹೌದು...ಮೇಕೆದಾಟು(Mekedatu) ಪಾದಯಾತ್ರೆಯಲ್ಲಿ ಶಿವರಾಜ್ ​ಕುಮಾರ್ ಭಾಗಿಯಾಗಲಿದ್ದು, ಭಾನುವಾರದಿಂದ (ಜನವರಿ 9) ಆರಂಭವಾಗಲಿರುವ ಮೇಕೆದಾಟು ಪಾದಯಾತ್ರೆಯನ್ನು ಶಿವಣ್ಣ​ ಉದ್ಘಾಟಿಸುವ ಸಾಧ್ಯತೆ ಇದೆ.. 

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಪಾದಯಾತ್ರೆಯಲ್ಲಿ ಭಾಗಿ ಆಗಲಿದ್ದಾರೆ. ಕಾಂಗ್ರೆಸ್​ ನಾಯಕರ ಜತೆ ಶಿವಣ್ಣ ವೇದಿಕೆ ಹಂಚಿಕೊಳ್ಳಲಿದ್ದಾರೆ. ಶಿವಣ್ಣನ ಮೂಲಕ ಪಕ್ಷಾತೀತ ಹೋರಾಟವೆಂದು ಕಾಂಗ್ರೆಸ್ ಸಂದೇಶ ರವಾನಿಸಿದಂತಿದೆ. 

ಕಾಂಗ್ರೆಸ್‌ ಪಾದಯಾತ್ರೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಮತ್ತೊಂದೆಡೆ ಬಿಜೆಪಿ ಸರ್ಕಾರ ಏನಾದರೂ ಮಾಡಿ ಇದನ್ನ ತಡೆಬೇಕೆಂದು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಇದರ ಮಧ್ಯೆ ಕನ್ನಡ ಚಿತ್ರೋದ್ಯಮ ಈಗಾಗಲೇ ಬೆಂಬಲ ನೀಡಿದ್ದು ಈಗ ನಟ ಶಿವರಾಜ್‌ ಕುಮಾರ್‌ ಪಾದಯಾತ್ರೆಗೆ ಚಾಲನೆ ನೀಡುತ್ತಿರುವುದು ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಂತಾಗಿದೆ.

Follow Us:
Download App:
  • android
  • ios