*  ಮೇಕೆದಾಟು ಯೋಜನೆ ವಿರೋಧಿಸುವವರ ಬಗ್ಗೆ ನಾನು ಮಾತಾಡಲ್ಲ*  ಎಚ್‌ಡಿಕೆ ಬಾಯಿಚಪಲಕ್ಕೆ ಮಾತಾಡ್ತಾರೆ*  ತಮಿಳರು ನಮ್ಮ ಸಹೋದರರು. ಅವರು ಕರ್ನಾಟಕಕ್ಕೆ ಬಂದು ಕೆಲಸ ಮಾಡಬಾರದಾ?

ಬೆಂಗಳೂರು(ಜ.16): ಮೇಕೆದಾಟು ಯೋಜನೆಯನ್ನು(Mekedatu Project) ವಿರೋಧಿಸಿರುವ ಪರಿಸರವಾದಿ(Environmentalist) ಮೇಧಾ ಪಾಟ್ಕರ್‌(Medha Patkar) ಹಾಗೂ ಪಾದಯಾತ್ರೆಯನ್ನು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಟಾಂಗ್‌ ನೀಡಿದ್ದಾರೆ.

ಪರಿಸರವಾದಿ ಮೇಧಾ ಪಾಟ್ಕರ್‌ ಅವರು ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ಬಗ್ಗೆ ನಾನು ಮಾತನಾಡುವುದಿಲ್ಲ. ಅವರಿಗೆ ಉತ್ತರಿಸಲು ಸರ್ಕಾರ, ಮುಖ್ಯಮಂತ್ರಿ ಅವರಿದ್ದಾರೆ. ಅವರಿಗೆ ಉತ್ತರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಇನ್ನು, ಪಾದಯಾತ್ರೆಗೆ ಬಾವುಟ ಕಟ್ಟಲು ತಮಿಳುನಾಡಿನಿಂದ(Tamil Nadu) ಜನರನ್ನು ಕರೆತಂದಿದ್ದರು ಎಂಬ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಅವರಿಗೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್‌, ತಮಿಳರು ನಮ್ಮ ಸಹೋದರರು. ಅವರು ಭಾರತೀಯರಲ್ಲವೇ(Indians) ಎಂದು ಪ್ರಶ್ನಿಸಿದ್ದಾರೆ.

Mekedatu Padayatre ಡಿಕೆಶಿಗೆ ಅರ್ಧದಲ್ಲೇ ಕೈ ಕೊಟ್ಟಿದ್ದರ ಹಿಂದೆ ಪೂರ್ವ ನಿಯೋಜಿತ ತಂತ್ರವಿದೆಯೇ? ಸಿದ್ದುಗೆ ಪ್ರಶ್ನೆ

ಪರಿಸರ ಇಲಾಖೆ ಅನುಮತಿ ಇರುವುದೇ ಅದಕ್ಕೆ:

ಸದಾಶಿವನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ಹೆಣ್ಣು ಮಗಳು ಮೇಧಾ ಪಾಟ್ಕರ್‌ ತಮ್ಮದೇ ಆದ ಚಿಂತನೆಗಳ ಮೇಲೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸರ್ಕಾರ ಇಂತಹ ಯೋಜನೆಗೆ ಪರಿಸರ ಇಲಾಖೆ(Department of the Environment) ಅನುಮತಿಯಂತಹ ಕಾನೂನು ಮಾಡಿರುವುದು ಇಂತಹವರಿಗಾಗಿಯೇ. ಯೋಜನೆ ವಿರೋಧಿಸುವವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಯೋಜನೆ ಜಾರಿಯಿಂದ ತಮ್ಮದೂ ಸೇರಿದಂತೆ ನಮ್ಮ ಕ್ಷೇತ್ರದ ಸಾಕಷ್ಟು ಜನರ ಆಸ್ತಿಗಳು ಹೋಗುತ್ತವೆ, ವಿರೋಧ ಮಾಡುವುದಾದರೆ ನಾವುಗಳು ಮಾಡಬೇಕು. ಈ ಯೋಜನೆಯಿಂದ ನಮ್ಮ ತಾಲೂಕಿಗೆ ಬಹಳ ನಷ್ಟ ಆಗುತ್ತದೆ.

ಬೆಂಗಳೂರಿಗೆ(Bengaluru) ನೀರು(Water) ತರಬೇಕಾದರೆ ನಮ್ಮ ಜಮೀನು ಕಳೆದುಕೊಳ್ಳಬೇಕಾಗುತ್ತದೆ. ಜಮೀನು ಕಳೆದುಕೊಳ್ಳುವ ರೈತರಿಗೆ(Farmers) ಉತ್ತಮ ಪರಿಹಾರಕ್ಕಾಗಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಮಳವಳ್ಳಿ ಮೂಲಕವಾಗಿ ಬೆಂಗಳೂರು ನೀರು ತಂದ ರೈತರಿಗೆ ಒಂದು ಎಕರೆಗೆ 30 ಸಾವಿರ, 50 ಸಾವಿರ, 1 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಇಷ್ಟುಸಾಕಾ ಎಂದು ಪ್ರಶ್ನಿಸಿದರು.

ಬಾಯಿಚಪಲಕ್ಕೆ ಎಚ್‌ಡಿಕೆ ಮಾತು:

‘ಮೇಕೆದಾಟು ಪಾದಯಾತ್ರೆಗೆ ಬಾವುಟ ಕಟ್ಟಲು ತಮಿಳುನಾಡಿನ ಜನರನ್ನು ಕರೆತಂದಿದ್ದರು’ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಟೀಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್‌ ಅವರು, ‘ಕುಮಾರಸ್ವಾಮಿ ಹೊರ ರಾಜ್ಯದ ಯಾರನ್ನೂ ಕೆಲಸಕ್ಕೆ ಇಟ್ಟುಕೊಂಡಿಲ್ಲವಾ? ನಾವು ಭಾರತದಲ್ಲಿ(India) ಬದುಕುತ್ತಿದ್ದೇವೆ. ತಮಿಳರು ನಮ್ಮ ಸಹೋದರರು. ಅವರು ಕರ್ನಾಟಕಕ್ಕೆ(Karnataka) ಬಂದು ಕೆಲಸ ಮಾಡಬಾರದಾ? ಬಾಯಿ ಚಪಲಕ್ಕೆ ಅವರು ಮಾತನಾಡುತ್ತಾರೆ. ಮಾತನಾಡಲಿ ಬಿಡಿ’ ಎಂದರು.

Karnataka Politics: ರಾಮನಗರ ಜಗಳ, ಡಿಕೆ ಸುರೇಶ್‌ಗೆ ಧನ್ಯವಾದ ಹೇಳಿದ ಸಿಟಿ ರವಿ

ಮೇಕೆದಾಟು ಡ್ಯಾಮ್‌ಗೆ ಮೇಧಾ ಪಾಟ್ಕರ್‌ ವಿರೋಧ

ಬೆಂಗಳೂರು: ರಾಜ್ಯದಲ್ಲಿ ಬಹುಚರ್ಚಿತ ವಿಷಯವಾಗಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಪರಿಸರವಾದಿ, ಹಾಗೂ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ವಿರೋಧ ವ್ಯಕ್ತಪಡಿಸಿದ್ದು, 1,200 ಹೆಕ್ಟೇರ್‌ ಅರಣ್ಯ ಹಾಗೂ ಜೀವ ಸಂಕುಲದ ನಾಶಕ್ಕೆ ಕಾರಣವಾಗುವ ಯೋಜನೆಗೆ ಜನರೂ ವಿರೋಧ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದ್ದರು.

ಕರ್ನಾಟಕ ನೆಲ ಜಲ ರಕ್ಷಣಾ ಸಮಿತಿಯು ಜ.13ರಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಮೇಕೆದಾಟು ಪರ, ಅಣೆಕಟ್ಟು ವಿರುದ್ಧ’ ವಿಷಯ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರ ಮಾತನಾಡಿದರು.
ನಾನು ಮೇಕೆದಾಟು ಪರವಾಗಿದ್ದೇನೆ. ಹೀಗಾಗಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧಿಸುತ್ತಿದ್ದೇನೆ. ಅಣೆಕಟ್ಟು ಕಟ್ಟುವ ಬದಲು ಕೆರೆ ಕುಂಟೆಗಳನ್ನು ಕಟ್ಟಿಜೀವ ಜಲ ರಕ್ಷಿಸಬೇಕು. ಈ ಹೋರಾಟದಲ್ಲಿ ದಲಿತ, ಬುಡಕಟ್ಟು , ಆದಿವಾಸಿ ಜನರೆಲ್ಲಾ ಒಂದಾಗಿ ಸೇರಿ ಯೋಜನೆ ವಿರೋಧಿಸಬೇಕಿದೆ ಎಂದು ಕರೆ ನೀಡಿದ್ದರು.