ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಸೀಟು ಹಂಚಿಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಹೊರಗಿಡಲಾಗಿತ್ತು.

ಜೆಡಿಎಸ್ ಮುಖಂಡರ ಜೊತೆಗೆ ಮುಂದಿನ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸಂಬಂಧವಾಗಿ ನಡೆಸುತ್ತಿರುವ ಸಭೆಗೆ ಮಾಹಿತಿ ಸೋರಿಕೆ ಮಾಡುತ್ತಾರೆಂದು ಮಾಧ್ಯಮದವರನ್ನು ಹೊರಗಿಡಲಾಗಿತ್ತು.

ಇವತ್ತಿನ ಸಭೆಯ ಟಿಪಿಯಲ್ಲಿ ಹೆಸರಿದ್ದರೂ ಕೂಡ ದಿನೇಶ್ ಗುಂಡೂರಾವ್ ಅವರನ್ನು ಹೊರಗಿಡಲಾಗಿದೆ. ಕೆಪಿಸಿಸಿ ಅಧ್ಯಕ್ಷರನ್ನೇಕೆ ಹೀಗೆ ನಡೆಸಿಕೊಳ್ಳಲಾಯಿತು ಎಂಬ ಬಗ್ಗೆ ಅನೇಕ ಅನುಮಾನಗಳೆದ್ದಿವೆ.

ದಿನೇಶ್ ಗುಂಡೂರಾವ್ ಹೊರಗಿಟ್ಟು ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಜಿಲ್ಲಾವಾರು ಸಭೆಯನ್ನು ನಡೆಸುತ್ತಿದ್ದು, ಮಾಹಿತಿ ಸೋರಿಕೆ ಮಾಡುತ್ತಾರೆ ಎನ್ನುವ ಶಂಕೆಯನ್ನು ಗುಂಡೂರಾವ್ ಮೇಲೆ ವ್ಯಕ್ತಪಡಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ತಮ್ಮನ್ನೇ ಆಚೆ ಇಟ್ಟು ಸಭೆ ನಡೆಸುತ್ತಿರುವ ಸಂಬಂಧ ದಿನೇಶ್ ಗುಂಡೂರಾವ್ ತಮ್ಮ ಆಪ್ತರೊಂದಿಗೆ ಬೇಸರ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.