* ವರ್ಗಾವಣೆ ದಂಧೆಗೆ ಬ್ರೇಕ್ ಹಾಕಲು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನಿರ್ಧಾರ...* ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ಇಲಾಖಾ ಪ್ರಧಾನಕಾರ್ಯದರ್ಶಿಗೆ ಸೂಚನೆ..* ಕಠಿಣ ನಿರ್ಧಾರದತ್ತ ದಿಟ್ಟ ಹೆಜ್ಜೆ ಇಟ್ಟ ಸಚಿವ ಕೋಟಾ ಶ್ರೀನಿವಾಸ ಪೂಜಾರಿ..

ಬೆಂಗಳುರು, (ಸೆ.18): ಸರ್ಕಾರಿ ನೌಕರರ ವರ್ಗಾವಣೆ ಒಂದು ದಂಧೆಯಾಗ್ಬಿಟ್ಟಿದೆ. ಆಫೀರ್ಸ್‌ ಇಂತಿಷ್ಟು ಅಂತ ಹಣ ಕೊಟ್ಟರೇ ಸಾಕು ಬೇಕಾದ ಸ್ಥಳಕ್ಕೆ ಟ್ರಾನ್ಸ್‌ಫರ್ ಸಿಗುತ್ತೆ. ಇದೀಗ ಈ ರೀತಿ ವರ್ಗಾವಣೆ ದಂಧೆಗೆ ಬ್ರೇಕ್‌ ಹಾಕಲು ಸಮಾಜಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮುಂದಾಗಿದ್ದಾರೆ.

ಹೌದು...ಸಮಾಜಕಲ್ಯಾಣ ಇಲಾಖೆಯಲ್ಲಿ ಇನ್ಮುಂದೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ನಡೆಯಲಿದೆ. ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ಇಲಾಖಾ ಪ್ರಧಾನಕಾರ್ಯದರ್ಶಿಗೆ ಶ್ರೀನಿವಾಸ ಪೂಜಾರಿ ಪತ್ರದ ಮೂಲಕ ಸೂಚನೆ ಕೊಟ್ಟಿದ್ದಾರೆ.

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮತ್ತೆ ನಿರಾಸೆ

ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ಬಳಿಕವೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವರ್ಗಾವಣೆಗೆ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಈ ಕಠಿಣ ನಿರ್ಧಾರದತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಎಲ್ಲಾ ವರ್ಗಾವಣೆಗಳು ಕೌನ್ಸಿಲಿಂಗ್ ಮೂಲಕ ನಡೆಯಬೇಕು. ಮಾರಣಾಂತಿಕ ಕಾಯಿಲೆ, ಪತಿ ಪತ್ನಿ, ವಿಧವೆ ಮತ್ತು ವಿಕಲಚೇತನರ ವರ್ಗಾವಣೆ ಗಳಿಗೆ ವಿನಾಯಿತಿ ಇರಲಿದೆ ಎಂದು ಪತ್ರದಲ್ಲಿ ಶ್ರೀನಿವಾಸ ಪೂಜಾರಿ ಉಲ್ಲೇಖಿಸಿದ್ದಾರೆ.