ಕೊಪ್ಪಳದಲ್ಲಿ ಆಯೋಜಿಸಲಾದ ಹಣ್ಣು ಮಾರಾಟ ಮೇಳದಲ್ಲಿ, ಜಪಾನ್‌ನಲ್ಲಿ ₹2.5 ಲಕ್ಷಕ್ಕೆ ಮಾರಾಟವಾಗುವ ದುಬಾರಿ ಮಿಯಾಜಾಕಿ ಮಾವು ಕೇವಲ ₹3 ಸಾವಿರಕ್ಕೆ ಲಭ್ಯವಿದೆ. ಸ್ಥಳೀಯ ರೈತರು ಈ ಮಾವನ್ನು ಯಶಸ್ವಿಯಾಗಿ ಬೆಳೆದಿದ್ದು, ಮೊದಲ ದಿನವೇ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ.
₹2.5 ಲಕ್ಷ ಬೆಲೆಯ ಮಿಯಾಜಾಕಿ ಮಾವು ₹3 ಸಾವಿರಕ್ಕೆ ಮಾರಾಟ!

ಕೊಪ್ಪಳ (ಮೇ.13): ನಗರದಲ್ಲಿ ನಡೆಯುತ್ತಿರುವ ಹಣ್ಣು ಮಾರಾಟ ಮೇಳದ ಪ್ರದರ್ಶನದಲ್ಲಿ ಜಪಾನ್ ದೇಶದಲ್ಲಿ ಕೇಜಿಗೆ ₹2.5 ಲಕ್ಷ ಮೌಲ್ಯವಿರುವ ಮಿಯಾಜಾಕಿ ಮಾವು ಈಗ ಇಲ್ಲಿ ಕೇವಲ ₹3 ಸಾವಿರಕ್ಕೆ ಕೆಜಿಯಂತೆ ಮಾರಾಟವಾಗುತ್ತಿದೆ.
ಭಾರತದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವಾಗ ಇಲ್ಲಿನ ರೈತರು ಪ್ರಯೋಗಾರ್ಥ ಬೆಳೆದು ಯಶಸ್ವಿಯಾಗಿದ್ದಾರೆ. ಜಿಲ್ಲಾದ್ಯಂತ ಸುಮಾರು 5-6 ಎಕರೆ ಪ್ರದೇಶದಲ್ಲಿ ನಾಲ್ಕಾರು ರೈತರು ಈ ಮಾವು ಬೆಳೆದು ಯಶಸ್ವಿಯಾಗಿದ್ದಾರೆ. ಜಿಲ್ಲಾ ತೋಟಗಾರಿಕಾ ಇಲಾಖೆಯಿಂದ ನಗರದಲ್ಲಿ ಏರ್ಪಡಿಸಿರುವ ಹಣ್ಣು ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಮಿಯಾಜಾಕಿ ಮಾವನ್ನು ಕೆಜಿಗೆ ₹3 ಸಾವಿರದಂತೆ ಮಾರಾಟಕ್ಕಿಟ್ಟಿದ್ದಾರೆ.
ನಾಗಪ್ಪ ಹಿರೇಬಗನಾಳ ಎನ್ನುವ ರೈತ ಬೆಳೆದಿದ್ದ 25 ಕೇಜಿ ಮಾವು ಮೊದಲ ದಿನವೇ ಬುಕ್ ಆಗಿರುವುದು ವಿಶೇಷ. ಆದರೆ, ಜಪಾನ್ ದೇಶದಲ್ಲಿ ₹2.5 ಲಕ್ಷಕ್ಕೆ ಕೇಜಿಯಂತೆ ಮಾರಾಟವಾಗುತ್ತಿದೆ ಎನ್ನುವ ಮಿಯಾಜಾಕಿ ಇಲ್ಲಿ ಕೇವಲ ₹3 ಸಾವಿರಕ್ಕೆ ಮಾರಾಟ ಆಗುತ್ತಿರುವುದು ವಿಶೇಷ.
ಕೊಪ್ಪಳ ನಗರದ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಹಣ್ಣು ಮಾರಾಟ ಮೇಳದಲ್ಲಿ ಮಿಯಾಜಾಕಿ ಮಾವು.


