Asianet Suvarna News Asianet Suvarna News

ಪ್ರೀತಿ ಅಂದ್ರೆ ಇದಪ್ಪಾ..! ಅಪಘಾತದಲ್ಲಿ ಅಗಲಿದ ಪತ್ನಿಯನ್ನು ಮರುಸೃಷ್ಟಿಸಿದ ಪತಿರಾಯ..!

 ಅಪಘಾತವೊಂದರಲ್ಲಿ ಪತ್ನಿ ಮಾಧವಿಯನ್ನು ಕಳೆದುಕೊಂಡಿದ್ದ ಇಲ್ಲಿಯ ಭಾಗ್ಯನಗರದ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರು ಸಿಲಿಕಾನ್‌ ಎನ್ನುವ ವಿಶೇಷ ವಸ್ತುವಿನಲ್ಲಿ ಪ್ರತಿಮೆಯಾಗಿ ಪತ್ನಿಯನ್ನು ಮರುಸೃಷ್ಟಿಮಾಡಿಸಿದ್ದಾರೆ.

Koppal Industrialist  installed life size statue of his wife who died in car accident
Author
Bengaluru, First Published Aug 11, 2020, 8:42 AM IST

ಕೊಪ್ಪಳ (ಆ.11):  ಪಘಾತವೊಂದರಲ್ಲಿ ಪತ್ನಿ ಮಾಧವಿಯನ್ನು ಕಳೆದುಕೊಂಡಿದ್ದ ಇಲ್ಲಿಯ ಭಾಗ್ಯನಗರದ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರು ಸಿಲಿಕಾನ್‌ ಎನ್ನುವ ವಿಶೇಷ ವಸ್ತುವಿನಲ್ಲಿ ಪ್ರತಿಮೆಯಾಗಿ ಪತ್ನಿಯನ್ನು ಮರುಸೃಷ್ಟಿಮಾಡಿಸಿದ್ದಾರೆ.

ಬೆಂಗ​ಳೂ​ರಿನ ಗೊಂಬೆ ಮನೆಯ ಕಲಾ​ವಿ​ದ​ರಾದ ಶ್ರೀಧರ ಮೂತಿ​ರ್‍ ಹಾಗೂ ಆನಂದ ಅವರ ಕೈಚ​ಳ​ಕ​ದಲ್ಲಿ ಪ್ರತಿಮೆ ಸಿದ್ಧ​ವಾ​ಗಿ​ದೆ. ಭಾನು​ವಾರ ಉದ್ಯಮಿ ಮನೆಗೆ ಪ್ರತಿಮೆ ತರ​ಲಾ​ಗಿ​ದೆ. ತಮ್ಮ ನೂತನ ಮನೆಯಲ್ಲಿ ಪತ್ನಿ ಮಾಧವಿಯ ಪ್ರತಿಮೆಯನ್ನು ತೂಗುಮಂಚದ ಮೇಲೆ ಕೂಳಿಸಿದ ರೀತಿಯಲ್ಲಿ ಸಿದ್ಧ ಮಾಡಿಸಲಾಗಿದ್ದು, ವಿಶೇಷ ಗಮನ ಸೆಳೆಯುತ್ತಿದೆ.

ಸಿಲಿಕಾನ್‌ ವಸ್ತುವಿನಲ್ಲಿ ಮಾಡಲಾಗಿರುವ ಈ ಪ್ರತಿಮೆ ಥೇಟ್‌ ಜೀವಂತ ಇರುವಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲ, ಸೀರೆಯನ್ನು ಉಡಿಸಬಹುದು. ಬಳೆ ತೊಡಿಸಬಹುದು, ಉಂಗುರ ಹಾಕಬಹುದು ಮತ್ತು ತೆಗೆಯಬಹುದು. ಜೀವಂತ ಇರುವವರು ಪಕ್ಕದಲ್ಲಿ ಕುಳಿತುಕೊಂಡು ಫೋಟೋ ತೆಗೆದರೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ದೇಹ ರಚನೆ, ಮುಖಭಾವ ಸೇರಿದಂತೆ ಎಲ್ಲವೂ ಜೀವಂತ ಇರುವವರಂತೆ ಇದ್ದು, ಮರು ಸೃಷ್ಟಿಯೇ ಎಂದು ಹೇಳಲಾಗುತ್ತದೆ.

ಇನ್ನು ಇನ್ನು ಇತ್ತೀಚೆಗಷ್ಟೇ ಕರ್ನಾಟಕದ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಖಡಕ್ ಪೊಲೀಸ್ ಅಧಿಕಾರಿ ಈಪಿಎಸ್‌ ಡಿ. ರೂಪಾ ಕೂಡಾ ಈ ಸಂಬಂಧ ಟ್ವೀಟ್ ಮಾಡಿದ್ದು, ದಿವಂಗತ ಪತ್ನಿಯ ವ್ಯಾಕ್ಸ್ ಪ್ರತಿಮೆ ಮಾಡಿದ್ದರ ಹಿಂದಿನ ಭಾವನೆಗಳು ಅಮೋಘವಾದದ್ದು. ಅದರ ಜೊತೆಗೆ ಕರ್ನಾಟಕದ ಕಲಾವಿದ ರಂಗಣ್ಣನವರು ಮಾಡಿರುವ,ನೈಜವ್ಯಕ್ತಿಗೆ ಸೆಡ್ಡು ಹೊಡೆಯುವಂತೆ ಇರುವ ಪ್ರತಿಮೆ ಅಪ್ರತಿಮ. ಫ್ರಾನ್ಸ್ನಿಂದ ಬಂದು ಇಂತಹ ಮೂರ್ತಿ ಮಾಡುವದು ಕೇಳಿದ್ದೆ. ರಂಗಣ್ಣ ಅವರನ್ನು ಪ್ರೋತ್ಸಾಹಿಸಿ ಸರ್ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios