ಜಿಲ್ಲಾ ಉಸ್ತುವಾರಿ ಸಚಿವ, ಶಾಸಕನಿಗೆ ತಲೆನೋವಾಗಿದ್ದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ.ಎ.ಕಾಳೆ ಅವರನ್ನು ಸರ್ಕಾರ ಕೊನೆಗೂ ವರ್ಗಾವಣೆ ಮಾಡಿದೆ. ಕೊಪ್ಪಳ ಜಿಲ್ಲೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ವೈ.ಎ.ಕಾಳೆ. ಭ್ರಷ್ಟಾಚಾರದ ಆರೋಪದ ಬಂದಿದ್ದ ಹಿನ್ನಲೆಯಲ್ಲಿ ಕಾಳೆ ವರ್ಗಾವಣೆಗೆ ಪತ್ರ ಬರೆದಿದ್ದ ಸಚಿವ, ಶಾಸಕರು. ವೈ.ಎ.ಕಾಳೆ ವರ್ಗಾವಣೆ ಮಾಡಿಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್. 

ಕೊಪ್ಪಳ (ಸೆ.28) ಜಿಲ್ಲಾ ಉಸ್ತುವಾರಿ ಸಚಿವ, ಶಾಸಕನಿಗೆ ತಲೆನೋವಾಗಿದ್ದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ.ಎ.ಕಾಳೆ ಅವರನ್ನು ಸರ್ಕಾರ ಕೊನೆಗೂ ವರ್ಗಾವಣೆ ಮಾಡಿದೆ.

ಕೊಪ್ಪಳ ಜಿಲ್ಲೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ವೈ.ಎ.ಕಾಳೆ. ಭ್ರಷ್ಟಾಚಾರದ ಆರೋಪದ ಬಂದಿದ್ದ ಹಿನ್ನಲೆಯಲ್ಲಿ ಕಾಳೆ ವರ್ಗಾವಣೆಗೆ ಪತ್ರ ಬರೆದಿದ್ದ ಸಚಿವ, ಶಾಸಕರು. ವೈ.ಎ.ಕಾಳೆ ವರ್ಗಾವಣೆ ಮಾಡಿಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್. 

ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪತ್ರ ಬರೆದು ತಿಂಗಳಾದರೂ ಅದಕ್ಕೆ ಅದಕ್ಕೆ ಕ್ಯಾರೇ ಅನ್ನದಿದ್ದ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಹೀಗಾಗಿ ಶಾಸಕ ರಾಘವೇಂದ್ರ ಹಿಟ್ನಾಳ್ ಖುದ್ದು ಹೆಚ್​.ಸಿ.ಮಹದೇವಪ್ಪರನ್ನು ಭೇಟಿಯಾಗಿ ವರ್ಗಾವಣೆಗೊಳಿಸುವಂತೆ ಪಟ್ಟು ಹಿಡಿದಿದ್ದರು. 

ಮೈತ್ರಿಗೂ ಮುನ್ನ ಕೊಪ್ಪಳದಲ್ಲಿ ಜೆಡಿಎಸ್‌ ಶಕ್ತಿ ಪ್ರದರ್ಶನ..!

ಕಾಳೆ ವರ್ಗಾವಣೆ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದ ಸಚಿವ ತಂಗಡಗಿ, ಶಾಸಕ ಹಿಟ್ನಾಳ್. ಕೊನೆಗೂ ಒತ್ತಡಕ್ಕೆ ಮಣೆದ ಸಚಿವ ಎಚ್ ಸಿ ಮಹದೇವಪ್ಪ. ಪಟ್ಟು ಬಿಡದ್ದಕ್ಕೆ ವರ್ಗಾವಣೆ ಮಾಡಿ ಆದೇಶ. ಬಳ್ಳಾರಿ ಜಿಲ್ಲೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಹುದ್ದೆಗೆ ವರ್ಗಾವಣೆ ಮಾಡಿದ ಸಚಿವ.

ಕೊಪ್ಪಳ ಜಿಲ್ಲಾ ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ವೈ.ಎ.ಕಾಳೆ ಜಿಲ್ಲಾಧಿಕಾರಿಯ ಸಹಿಯನ್ನು ಪೊರ್ಜರಿ ಮಾಡಿ ಭ್ರಷ್ಟಾಚಾರ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್​ ನಾಯಕರು ಅಂತಹ ಭ್ರಷ್ಟ ಅಧಿಕಾರಿ ಸೇವೆ ನಮ್ಮ ಜಿಲ್ಲೆಗೆ ಬೇಡ ಎಂದು ಪಟ್ಟುಹಿಡಿದು ಪತ್ರ ಬರೆದಿದ್ದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗೆ ದಿಲ್ಲಿಯಲ್ಲಿ ಕಸರತ್ತು..!

 ಹಿಂದೆ ರಾಯಚೂರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾಗಿದ್ದಾಗಲೂ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಆಗಲು ವರ್ಗಾವಣೆಗೆ ಹಲವು ಸಂಘಟನೆಗಳು ಪಟ್ಟು ಹಿಡಿದಿದ್ದವು. ಅಲ್ಲಿಂದ ವರ್ಗಾವಣೆಗೊಂಡಿದ್ದ ಕಾಳೆ. ಇದೀಗ ಕೊಪ್ಪಳದಿಂದ ಬಳ್ಳಾರಿಗೆ ವರ್ಗಾವಣೆಯಾಗಿದ್ದಾರೆ. ವೈಕೆ ಕಾಳೆ ವರ್ಗಾವಣೆ ಮಾಡಿಸುವಲ್ಲಿ ಕೊನೆಗೂ ಯಶ್ವಸಿಯಾದ ಸಚಿವ ತಂಗಡಗಿ, ಶಾಸಕ ಹಿಟ್ನಾಳ್ ಸಿಟ್ಟು.