ತಿರುಪತಿ ದೇವಳಕ್ಕೆ ಕೆಎಂಎಫ್ ನಂದಿನಿ ತುಪ್ಪ ನೀಡುತ್ತಿಲ್ಲ: ಅಧ್ಯಕ್ಷ
ಕಳೆದ ಒಂದು ವರ್ಷದಿಂದ ತಿರುಪತಿ ದೇವಸ್ಥಾನಕ್ಕೆ ತುಪ್ಪ ನೀಡುತ್ತಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ತಿಳಿಸಿದರು.
ಬಳ್ಳಾರಿ (ಜು.26) : ಕಳೆದ ಒಂದು ವರ್ಷದಿಂದ ತಿರುಪತಿ ದೇವಸ್ಥಾನಕ್ಕೆ ತುಪ್ಪ ನೀಡುತ್ತಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳಿಂದ ತಿರುಪತಿಗೆ ಕೆಎಂಎಫ್‌ನ ತುಪ್ಪ ನೀಡುತ್ತಿದ್ದೆವು. ಕಳೆದ ವರ್ಷ ಟೆಂಡರ್ ಕರೆದಿದ್ದರೂ ನಾವು ಹಾಕಲಿಲ್ಲ. ಪೈಪೋಟಿಯ ದರದಲ್ಲಿ ನಾವು ಗುಣಮಟ್ಟದ ತುಪ್ಪ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಟೆಂಡರ್‌ನಿಂದ ದೂರ ಉಳಿದೆವು ಎಂದರು.
ಕೆಎಂಎಫ್ ತುಪ್ಪ(KMF Ghees)ಕ್ಕೆ ಭಾರೀ ಬೇಡಿಕೆಯಿದೆ. ಬೇಡಿಕೆಯ ಶೇ. 60ರಷ್ಟುಮಾತ್ರ ಪೂರೈಕೆ ಮಾಡಲು ಸಾಧ್ಯವಾಗಿದೆ. ಈ ಕಾರಣಕ್ಕಾಗಿಯೇ ಹಾಲು ಉತ್ಪಾದನೆ ಹೆಚ್ಚಳಕ್ಕೆ ರೈತರಿಗೆ ಹೆಚ್ಚುವರಿಯಾಗಿ .3 ನೀಡಲು ನಿರ್ಧರಿಸಿದ್ದೇವೆ ಎಂದರು.
Nandini Milk Price Hike: ನಂದಿನಿ ಹಾಲಿನ ದರ 3 ರೂ ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್
ಹೆಚ್ಚಿನ ಕಮೀಷನ್ ಆಸೆಗೆ ನಂದಿನಿ ಹಾಲು ಇದ್ದಾಗ್ಯೂ ಖಾಸಗಿ ಹಾಲು ಮಾರಾಟ ಮಾಡುವ ಡೀಲರ್‌ಗಳ ಪರವಾನಗಿ ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು. ಮಾರುಕಟ್ಟೆವಿಸ್ತರಣೆ ಹಾಗೂ ಗುಣಮಟ್ಟಪರಿಶೀಲನೆಗೆ ವಿಶೇಷ ತಂಡ ರಚಿಸಲಾಗುವುದು. ರಾಜ್ಯದಲ್ಲಿಯೇ ಮಾದರಿಯಾಗುವಂತಹ ಮೆಗಾ ಡೈರಿಯನ್ನು ಬಳ್ಳಾರಿಯಲ್ಲಿ ಸ್ಥಾಪಿಸುವ ಚಿಂತನೆ ಇದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಾಗ ನೀಡುವಂತೆ ಕೋರಲಾಗಿದೆ ಎಂದರು.
ನಾನು ಬಳ್ಳಾರಿಯ ಒಕ್ಕೂಟದ ಅಧ್ಯಕ್ಷನಾದ ಮೊದಲ ವರ್ಷದಲ್ಲಿಯೇ .7 ಕೋಟಿ ಲಾಭ ಮಾಡಿದೆ. ಎರಡನೇ ವರ್ಷ .8ರಿಂದ .9 ಕೋಟಿ ಲಾಭವಾಯಿತು. ಹಾಲು ಉತ್ಪಾದರಿಗೆ ಬೋನಸ್ ನೀಡಿದೆ. ಕಳೆದ 30 ವರ್ಷಗಳಲ್ಲಾಗದ ಕೆಲಸ ಮಾಡಿದೆ ಎಂದರು.
ನಂದಿನಿ ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ?: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್
ವಿದೇಶದಲ್ಲೂ ಬೇಡಿಕೆ:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಎಂಎಫ್ ಹಾಲಿಗೆ ವಿದೇಶದಲ್ಲೂ ಬೇಡಿಕೆಯಿದೆ. ದುಬೈನಲ್ಲಿ ಕೆಎಂಎಫ್ ಮಳಿಗೆ ಉದ್ಘಾಟಿಸಲಾಗುತ್ತಿದ್ದು, ಮುಖ್ಯಮಂತ್ರಿಗಳಿಗೂ ಆಗಮಿಸುವಂತೆ ಕೋರಲಾಗಿದೆ. ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಹಾಲಿನ ಬೇಡಿಕೆಯಿದೆ ಎಂದರು.