Asianet Suvarna News Asianet Suvarna News

ವೀರ ಮಹಿಳೆಯರಲ್ಲಿ ಕಿತ್ತೂರ ಚೆನ್ನಮ್ಮ ಅಗ್ರಗಣ್ಯ: ಸಿಎಂ ಬೊಮ್ಮಾಯಿ

ವೀರರಾಣಿ ಕಿತ್ತೂರ ಚೆನ್ನಮ್ಮ ಈ ನಾಡಿನ ವೀರ ಮಹಿಳೆಯರಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇದ್ದಾರೆ. ಒಬ್ಬ ಮಹಿಳೆಯು ದೈತ್ಯ ಬ್ರಿಟಿಷ್‌ ಸೈನ್ಯವನ್ನು ಸೆದೆಬಡಿದು ನಾಡು ರಕ್ಷಿಸಿರುವುದು ಇತಿಹಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

Kittur Chennamma is Foremost Among the Heroic Women Says CM Basavaraj Bommai gvd
Author
First Published Mar 21, 2023, 3:00 AM IST

ಶಿಗ್ಗಾಂವಿ (ಮಾ.21): ವೀರರಾಣಿ ಕಿತ್ತೂರ ಚೆನ್ನಮ್ಮ ಈ ನಾಡಿನ ವೀರ ಮಹಿಳೆಯರಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇದ್ದಾರೆ. ಒಬ್ಬ ಮಹಿಳೆಯು ದೈತ್ಯ ಬ್ರಿಟಿಷ್‌ ಸೈನ್ಯವನ್ನು ಸೆದೆಬಡಿದು ನಾಡು ರಕ್ಷಿಸಿರುವುದು ಇತಿಹಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಧಾರವಾಡದ ರಂಗಾಯಣ ಆಯೋಜಿಸಿದ್ದ ‘ಕಿತ್ತೂರು ರಾಣಿ ಚೆನ್ನಮ್ಮ ಬೃಹತ್‌ ನಾಟಕ’ದ 25ನೇ ಪ್ರದರ್ಶನಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಈ ನಾಡಿನ ಗತವೈಭವವನ್ನು ಜೀವಂತವಾಗಿ ನೋಡುವ ಅವಕಾಶ ಶಿಗ್ಗಾಂವ-ಸವಣೂರ ಜನತೆಗೆ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ.

ಚೆನ್ನಮ್ಮನ ಬಗ್ಗೆ ಯಾರು ಕೂಡಾ ಹೇಳುವ ಅವಶ್ಯಕತೆ ಇಲ್ಲ. ಈ ನಾಡಿನ ಪ್ರತಿಯೊಬ್ಬರಿಗೂ ಅವರ ಇತಿಹಾಸ ಗೊತ್ತಿದೆ ಎಂದರು. ಮಲ್ಲಸಜ್ಜನ ದೊರೆಯ ನಂತರ ಬ್ರಿಟಿಷ್‌ ಸಾಮ್ರಾಜ್ಯ ತನ್ನ ಹಿಡಿತ ಸ್ಥಾಪಿಸಲು ಪ್ರಯತ್ನಿಸಿತು. ಆದರೆ, ಒಬ್ಬ ಮಹಿಳೆ ಆ ಸೈನ್ಶವನ್ನು ಸೆದೆಬಡಿಯಬಹುದು ಎಂಬ ಊಹೆ ಯಾರಿಗೂ ಇರಲಿಲ್ಲ. ಆದರೆ ಚೆನ್ನಮ್ಮನ ತನ್ನ ಸಾಹಸ, ಶೌರ್ಯದಿಂದ ಇಡಿ ಬ್ರಿಟಿಷ್‌ ಅಧಿಕಾರಿಗಳ ಕನಸ್ಸನ್ನು ನುಚ್ಚು ನೂರು ಮಾಡಿದಳು. ಇದರ ಹಿಂದೆ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪರಂತಹ ಶೂರರು ಚೆನ್ನಮ್ಮನ ಬೆನ್ನಿಗೆ ನಿಂತು ಬ್ರಿಟಿಷರಿಂದ ನಾಡು ಉಳಿಸಿಕೊಳ್ಳಲ್ಲು ಪಣತೊಟ್ಟರು ಎಂದು ಹೇಳಿದರು.

ಬಿಜೆಪಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಉರಿ: ಮಾಜಿ ಸಚಿವೆ ಉಮಾಶ್ರೀ

ಇಂತಹ ಚೆನ್ನಮ್ಮನ ಶೌರ್ಯದ ಅನೇಕ ಘಟನೆ ಆಧರಿಸಿ ಧಾರವಾಡದ ರಂಗಾಯಣದ ಕಲಾವಿದರಿಂದ ಬೃಹತ್‌ ನಾಟಕ ಕಿತ್ತೂರಿನ ಇತಿಹಾಸವನ್ನು ಜನರಿಗೆ ತಿಳಿಯಪಡಿಸುತ್ತಿರುವುದು ಹೆಮ್ಮೆಯ ವಿಷಯ. ಇಂಥ ಕಿತ್ತೂರಿನ ಇತಿಹಾಸ ಉಳಿಸಲು ನಮ್ಮ ಸರ್ಕಾರ ಕಿತ್ತೂರು ಕೋಟೆ ಮರುಸ್ಥಾಪಿಸಲು . 50 ಕೋಟಿ ಬಿಡುಗಡೆ ಮಾಡಿದೆ ಎಂದರು. ಈ ವೇಳೆ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣ ಪೂಜಾರ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಪುರಸಭೆಯ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಗುತ್ತಿಗೆದಾರರ ಸಂಘದ ತಾಲೂಕಾಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ವಾಯುವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ತಿಪ್ಪಣ್ಣ ಸಾತಣ್ಣವರ, ಕಿರಣ, ವೀರೇಶ ಅಜೂರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕ ಇದ್ದರು.

ವಿವಿಧ ಕಾಮಗಾರಿಗಳಿಗೆ ಸಿಎಂ ಶಂಕು: ಸವಣೂರು, ಶಿಗ್ಗಾಂವಿ ಹಾಗೂ ಬಂಕಾಪುರದಲ್ಲಿ ಜನರಿಗೆ ವಿಶೇಷವಾಗಿ ಜಿ ಪ್ಲಸ್‌ ಮನೆ ನಿರ್ಮಿಸಲಾಗಿದೆ. ಮುಂದಿನ ಹಂತದಲ್ಲಿ 1020 ಮನೆ ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪುರಸಭೆ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಚುನಾವಣೆಗೂ ಮುನ್ನವೇ ಬೆಟ್ಟಿಂಗ್‌: ಬೆಳ್ಳಿ ಪ್ರಕಾಶ್ ಗೆಲ್ಲುತ್ತಾರೆಂದು ತನ್ನ ಇಡೀ ಆಸ್ತಿಯನ್ನೇ ಬಾಜಿಗಿಟ್ಟ ವ್ಯಕ್ತಿ!

ಹಳೆ ಪುರಸಭೆ ಕಾರ್ಯಾಲಯ ಕಟ್ಟಡ ನೆಲಸಮಗೊಳಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು, ಬೆಣ್ಣೆ ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆನಿರ್ಮಾಣಕ್ಕೆ ಗುದ್ದಲಿ ಪೂಜೆ, . 64 ಕೋಟಿ ವೆಚ್ಚದಲ್ಲಿ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜು, . 3 ಕೋಟಿ ವೆಚ್ಚದಲ್ಲಿ ಎಸಿ ಆಫೀಸ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಶೈಲಾ ಮುದಿಗೌಡ್ರ, ಪುರಸಭೆ ಸದಸ್ಯರಾದ ರೇಖಾ ಬಂಕಾಪುರ, ಬಿಜೆಪಿ ಮಂಡಲ ಅಧ್ಯಕ್ಷ ಗಂಗಾಧರ ಬಾಣದ, ಎಸ್‌ಡಿಎಂಸಿ ಉಪಾಧ್ಯಕ್ಷ ಮಂಜುನಾಥ ಗಾಣಿಗೇರ, ಉಪವಿಭಾಗ ಅಧಿಕಾರಿ ರಾಯಪ್ಪ ಹುಣಸಗಿ, ತಾಲೂಕು ದಂಡಾಧಿಕಾರಿ ಅನಿಲಕುಮಾರ ಜಿ., ಉಪಸ್ಥಿತರಿದ್ದರು.

Follow Us:
Download App:
  • android
  • ios