ಬಿಜೆಪಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಉರಿ: ಮಾಜಿ ಸಚಿವೆ ಉಮಾಶ್ರೀ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಅಂತಾ ಬಿಜೆಪಿಗೆ ಉರಿ. ಅದಕ್ಕೇ ಉರಿಗೌಡ-ನಂಜೇಗೌಡ ಕತೆ ಕಟ್ಟುತ್ತಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ಲೇವಡಿ ಮಾಡಿದರು. 

Ex Minister Umashree Slams On BJP Govt At Mandya gvd

ಮದ್ದೂರು (ಮಾ.20): ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಅಂತಾ ಬಿಜೆಪಿಗೆ ಉರಿ. ಅದಕ್ಕೇ ಉರಿಗೌಡ-ನಂಜೇಗೌಡ ಕತೆ ಕಟ್ಟುತ್ತಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ಲೇವಡಿ ಮಾಡಿದರು. ತಾಲೂಕಿನ ಕೊಪ್ಪದಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ-1 ಮತ್ತು 2ನೇ ವೃತ್ತದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಜೆಪಿ ಧರ್ಮ, ಸುಳ್ಳುಗಳ ಮೇಲೆ ಆಡಳಿತ ನಡೆಸುತ್ತಿದೆ. ಜನರ ಮನಸ್ಸಿನಲ್ಲಿ ಕತೆ ಕಟ್ಟಿಬೇರೆಡೆಗೆ ತಿರುಗಿಸುವುದೇ ಅವರ ಕೆಲಸವಾಗಿದೆ. ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಕಥೆ, ಮಂಡ್ಯದಲ್ಲಿ ಉರಿಗೌಡ- ನಂಜೇಗೌಡ ಅಂತ ಕತೆ ಕಟ್ಟುತ್ತಿದ್ದಾರೆ. 

ಇನ್ನೊಂದೆಡೆ ಹಿಜಾಬ್‌ ತರುತ್ತಾರೆ. ಬಿಜೆಪಿಯವರಿಗೆ ಗೌಡರೂ ಬೇಡ, ಲಿಂಗಾಯತರೂ ಬೇಡ. ಎಲ್ಲಾ ಜಾತಿಗಳನ್ನು ಛಿದ್ರ ಮಾಡಬೇಕು. ಮತ ವಿಭಜನೆ ಮಾಡಬೇಕೆನ್ನುವುದೇ ಬಿಜೆಪಿಯವರ ತಂತ್ರಗಾರಿಕೆಯಾಗಿದೆ ಎಂದರು. ಕೋಮುವಾದವನ್ನು ಸೃಷ್ಟಿಮಾಡುವ ಬಿಜೆಪಿ ಇಡೀ ದೇಶವನ್ನು ಛಿದ್ರ ಮಾಡಿಬಿಟ್ಟರು. ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ನಂಜುಕಾರುವಂತೆ ಮಾಡಿದ್ದಾರೆ. ಬಿಜೆಪಿ ಇವರುವವರೆಗೆ ಬಡವರು, ರೈತರು ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯವರು ಹಿಟ್ಲರ್‌ ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ದೊಡ್ಡ ರಾಜ್ಯಗಳಲ್ಲೇ ಕಾಂಗ್ರೆಸ್‌ಗೆ ಅಡ್ರೆಸ್ ಇಲ್ಲ, ಅವರಿಗೆ ನಾಚಿಕೆ ಆಗಬೇಕು: ಬಿ.ಎಸ್.ಯಡಿಯೂರಪ್ಪ

ವಿಧವೆಯರಿಗೆ ಪಿಂಚಣಿ ಕೊಟ್ಟಿದ್ದು ಇಂದಿರಾಗಾಂಧಿ. ಪಡಿತರ ಚೀಟಿ ಕೊಟ್ಟಿದ್ದು ಕಾಂಗ್ರೆಸ್‌ ಸರ್ಕಾರ. ಅರಸು ಸರ್ಕಾರದಲ್ಲಿ ಉಳುವವನೇ ಭೂಮಿಯ ಒಡೆಯ ಎಂದರು. ಮಹಾತ್ಮಗಾಂಧಿಗೆ ಗುಂಡೇಟು ಹೊಡೆದ ಜನರೇ ಇಂದಿರಾ ಗಾಂಧಿಯನ್ನು ಕೊಂದರು. ಅಂತಹ ನಾಯಕಿಯನ್ನು ನೆನಪಿಸಿಕೊಂಡು ಕಾಂಗ್ರೆಸ್‌ಗೆ ರಾಜ್ಯದ ಜನರು ಮತ ಹಾಕಬೇಕು ಎಂದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸ್ತ್ರೀಶಕ್ತಿ ಸಾಲಮನ್ನಾ ಮಾಡುತ್ತೇನೆ ಎಂದರು. ಆದರೆ, ಮಾಡಲಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘದ ಎಲ್ಲಾ ಸಾಲವನ್ನು ಮನ್ನಾ ಮಾಡಲಿದೆ. 

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ಯಾವತ್ತೂ ಮಾತು ತಪ್ಪಿಲ್ಲ. ನಮ್ಮೆಲ್ಲಾ ಕಾರ್ಯಕ್ರಮಗಳು ತಲುಪಬೇಕು ಎಂದರೆ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಬೇಕು ಎಂದರು. ದೇಶದಲ್ಲಿ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಬಿಜೆಪಿಯವರು ಮನುಷ್ಯತ್ವವೇ ಇಲ್ಲದವರು. ಜೆಡಿಎಸ್‌ಗೆ ಮತ ಹಾಕಿದರೆ ಸರ್ಕಾರ ರಚನೆಯಾಗುವುದಿಲ್ಲ. ಅತಂತ್ರ ಸರ್ಕಾರವನ್ನು ರಾಜ್ಯದಲ್ಲಿ ತರಬೇಡಿ. ಜೆಡಿಎಸ್‌ಗೆ ಮತ ಹಾಕಿದರೆ ಅದು ಕಾಂಗ್ರೆಸ್‌ಗೆ ಅನ್ಯಾಯ ಮಾಡಿದಂತೆ. ಜೆಡಿಎಸ್‌-ಬಿಜೆಪಿ ಎರಡೂ ಪಕ್ಷವನ್ನು ದೂರವಿಡಿ ಎಂದು ಮಹಿಳೆಯರಲ್ಲಿ ಮನವಿ ಮಾಡಿದರು. 

ಕೆಆರ್‌ಪಿಪಿ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ: ಜನಾರ್ದನ ರೆಡ್ಡಿ

ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರು ಚಿನ್ನದ ಒಡವೆಗಳನ್ನ ಗಿರವಿ ಇಟ್ಟಿದ್ದರೆ ಬಿಡಿಸಿ ಕೊಡ್ತೀವಿ ಎಂದು ಹೇಳಿದ್ದರು. ಕೊನೆಗೆ ಏನಾಯ್ತು. ಜೆಡಿಎಸ್‌ನವರ ಮಾತು ಕೇಳಿ ಹೆಣ್ಣು ಮಕ್ಕಳು ಕೆಟ್ಟರು. ಅದಕ್ಕಾಗಿ ಕಣ್ಣೀರು ಹಾಕಿ ಕೈ ಮುಗಿದು ಸುಳ್ಳು ಹೇಳಿದರೆ ಕರಗಬೇಡಿ. ಕಾಂಗ್ರೆಸ್‌ಗೆ ಮತಹಾಕಿ ಕೈ ಹಿಡಿಯಿರಿ ಎಂದು ಮನವಿ ಮಾಡಿದರು. ಸಭೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಮಹಿಳಾ ಪದಾಧಿಕಾರಿಗಳು, ಜಿಲ್ಲಾ ಮಹಿಳಾ ಮುಖಂಡರು ಹಾಜರಿದ್ದರು.

Latest Videos
Follow Us:
Download App:
  • android
  • ios