Asianet Suvarna News Asianet Suvarna News

Chikkamagaluru: ಆರ್​ಎಸ್​ಎಸ್​ ಮುಖಂಡನ ಕಾರಿನ ಮೇಲೆ 'ಕಿಲ್ ಯು' ಜಿಹಾದಿ ಬರಹ

ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಮಧ್ಯೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ಪ್ರಕರಣ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಾರಿನ ಮೇಲೆ ಬರೆದಿರುವ ಪದ ಜನರಲ್ಲಿ ಆತಂಕ ತರಿಸಿದೆ.

Kill You message found in Chikkamagaluru RSS leader car gvd
Author
First Published Sep 26, 2022, 9:05 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.26): ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಮಧ್ಯೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ಪ್ರಕರಣ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಾರಿನ ಮೇಲೆ ಬರೆದಿರುವ ಪದ ಜನರಲ್ಲಿ ಆತಂಕ ತರಿಸಿದೆ. ಕಾಫಿನಾಡು ಕಡೂರಿನಲ್ಲಿ ಮನೆ ಮುಂದೆ ನಿಂತಿದ್ದ ಕಾರಿನ ಮೇಲೆ ಬರೆದಿರುವ ಬರಹಗಳು  ಇಡೀ ಕಾಫಿನಾಡನ್ನೇ ತಲ್ಲಣಗೊಳಿಸಿದೆ. ಕಡೂರಿನ ಇತಿಹಾಸದಲ್ಲಿ ಇಂತಹಾ ಪ್ರಕರಣ ನಡೆದಿರೋ ಸಣ್ಣ ಉದಾಹರಣೆಯೂ ಇಲ್ಲ. 

ಕಿಲ್ ಯು, ಜಿಹಾದ್, ಅಶ್ಲೀಲ ಪದಗಳ ಬಳಕೆ: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಆರ್.ಎಸ್.ಎಸ್. ಮುಖಂಡನ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರದ ಗಾಳಿ ಬಿಟ್ಟು ಕಿಲ್ ಯು, ಜಿಹಾದಿ ಎಂದು ಬರೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಡೂರು ನಿವಾಸಿ ಡಾ.ಶಶಿಧರ್ ವೃತ್ತಿಯಲ್ಲಿ ಬ್ಯುಸಿನೆಸ್‌ಮೆನ್ ಆಗಿದ್ದು, ಹಿಂದೂತ್ವದ ಕೆಲಸ-ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಆರ್.ಎಸ್.ಎಸ್. ಧರ್ಮ ಜಾಗರಣ ಸಹ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ಜಾಗದಲ್ಲಿ 30-35 ಕಾರುಗಳಿದ್ದರೂ ಅವರ ಕಾರಿನ ಮೇಲೇ ಈ ರೀತಿ ಬರೆದಿರುವುದು.

ಪಿಯು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ

ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಬೆದರಿಸುವ ತಂತ್ರ ಅಥವ ಟಾರ್ಗೆಟ್ ಮಾಡಿದ್ದಾರಾ ಎಂಬ ಅನುಮಾನವೂ ಮೂಡಿದೆ. ಈಗಾಗಲೇ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಡಾ.ಶಶಿಧರ್, ಇದು ಹಿಂದೂ ಕಾರ್ಯಕರ್ತರ ಮನೋಸ್ಥೈರ್ಯವನ್ನ ಕುಗ್ಗಿಸುವ ಪ್ರಯತ್ನ, ಹಿಂದೂ ಕಾರ್ಯಕರ್ತರ ಮೇಲೆ ನಡೆಯುವ ಈ ರೀತಿ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು, ಇಂತಹಾ ಬೆದರಿಕೆಗಳಿಗೆಲ್ಲಾ ಹಿಂದೂ ಕಾರ್ಯಕರ್ತರು ಬೆದರಲ್ಲ ಎಂದು ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಡಾ ಶಶಿಧರ್ ಆಗ್ರಹಿಸಿದ್ದಾರೆ. 

ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ: ಕಾರಿನ ಮೇಲಿನ ಬರಹಗಳನ್ನ ಕಂಡ ಕೂಡಲೇ ಆರ್.ಎಸ್.ಎಸ್. ಕಾರ್ಯಕರ್ತ ಜಯಣ್ಣ ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಂಭೀರ ಪ್ರಕರಣ ಹಾಗೂ ಬರಹವಾಗಿರೋದ್ರಿಂದ ಬಿಟ್ಟರೇ ದೊಡ್ಡದಾಗುತ್ತೆಂದು ಪ್ರಕರಣ ದಾಖಲಿಸಿಕೊಂಡಿರೋ ಕಡೂರಿನ ಖಾಕಿಗಳು ಕೂಡ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದಾರೆ. ಕಾರು ಇದ್ದ ಜಾಗ ಹಾಗೂ ಹೋಗಿ-ಬರುವ ಮಾರ್ಗದಲ್ಲಿನ ಎಲ್ಲಾ ಸಿಸಿಟಿವಿ ಫುಟೇಜ್‌ಗಳನ್ನ ವಶಕ್ಕೆ ಪಡೆದಿದ್ದಾರೆ. 

ಈಗಾಗಲೇ ವಿಶೇಷ ತಂಡ ರಚಿಸಿರೋ ಎಸ್ಪಿ ಉಮಾಪ್ರಶಾಂತ್ ಕೂಡ ಪ್ರಕರಣವನ್ನ ಸೀರಿಯಸ್ಸಾಗಿ ತೆಗೆದುಕೊಂಡು ಪೊಲೀಸರು ಅಲರ್ಟ್ ಆಗಿರಲು ಸೂಚಿಸಿದ್ದಾರೆ. ಯಾರು ಮಾಡಿರಬಹುದು, ಯಾವ ದೃಷ್ಠಿಯಿಂದ ಮಾಡಿರಬಹುದು. ಈ ರೀತಿ ಬರೆದವರು ಹಿಂದೆ ಯಾರಾದರೂ ಇದ್ದಾರಾ. ಬರೆದಿದ್ದರೆ ಏಕೆ ಬರೆದಿರಬಹುದು ಎಂಬೆಲ್ಲಾ ಆಯಾಮದಲ್ಲಿ ಪೊಲೀಸರ ತನಿಖೆ ಆರಂಭಿಸಿದ್ದಾರೆ. ಕಡೂರು ಅಪ್ಪಟ ಬಲುಸೀಮೆಭಾಗ. ಇಲ್ಲಿ ಇತಿಹಾಸದಲ್ಲಿ ಈ ರೀತಿಯ ಸಂಸ್ಕೃತಿ ಇರಲಿಲ್ಲ. ಈಗ ಮಲೆನಾಡು ಭಾಗದಲ್ಲಿದ್ದ ಈ ಜಿಹಾದಿ ಮನಸ್ಥಿತಿಯ ಬರೆವಣಿಗೆ ಬಯಲುಸೀಮೆಗೂ ಕಾಲಿಡ್ತಾ ಎಂಬ ಅನುಮಾನ ಮುಡಿದೆ. 

ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು: ಉಕ್ಕಡದ ಮಾರಮ್ಮನಿಗೆ ಭಕ್ತನ ವಿಚಿತ್ರ ಪತ್ರ!

ಒಟ್ಟಾರೆ, ಮನೆ ಮುಂದೆ ನಿಲ್ಲಿಸಿದ್ದ ಬೈಕು-ಕಾರುಗಳ ಗಾಳಿ ಬಿಡೋದು, ಕಲ್ಲು ಹೊಡೆಯೋದು ಸರ್ವೇ ಸಾಮಾನ್ಯ. ಕುಡಿದು ಟೈಟ್ ಆದಾಗ ಕಿಡಿಗೇಡಿಗಳು ಅಂತಹಾ ಕೃತ್ಯ ಮಾಡುತ್ತಾರೆ. ಆದರೆ, ನಿಗದಿತವಾಗಿ ಕಿಲ್ ಯೂ, ಜಿಹಾದಿ ಅಂತ ಬರೆದಿರೋದನ್ನ ಗಮನಿಸಿದರೆ ಇದು ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳ ಕೃತ್ಯ ಅಂತ ಮೇಲ್ನೋಟಕ್ಕೆ ಸಾಭೀತಾದಂತಿದೆ. ಅವರ ಉದ್ದೇಶ ಏನು, ಏಕೆ ಬರೆದರು, ಅವರ ಮುಂದಿನ ನಡೆ ಏನು. ಇದು ಸ್ಯಾಂಪಲ್ಲಾ ಎಂಬೆಲ್ಲಾ ಪ್ರಶ್ನೆಗಳು ಮೂಡಿದೆ. ಪ್ರಕರಣ ದಾಖಲಿಸಿಕೊಂಡಿರೋ ಕಡೂರು ಪೊಲೀಸರು ಎಲ್ಲದಕ್ಕೂ ಪೂರ್ಣವಿರಾಮ ಹಾಕಬೇಕಾಗಿದೆ.

Follow Us:
Download App:
  • android
  • ios