Asianet Suvarna News Asianet Suvarna News

ನನ್ನ ಎರಡೂ ಇಲಾಖೆಗಳಲ್ಲಿ ರಾಜ್ಯದ ಯುವಕರಿಗೆ ಉದ್ಯೋಗ ನೀಡಲು ಆದ್ಯತೆ : ಸಚಿವ ಹೆಚ್‌.ಡಿ ಕುಮಾರಸ್ವಾಮಿ

ಪ್ರಧಾನಿ ಮೋದಿಯವರು ನನಗೆ ಕೊಟ್ಟ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಇಲಾಖೆಯಲ್ಲಿ ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

Karnataka youth will be given more employment in heavy industrial sectors says HD Kumaraswamy sat
Author
First Published Jun 17, 2024, 8:34 PM IST

ತುಮಕೂರು (ಜೂ.17): ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ವಿಶ್ವಾಸವಿಟ್ಟು ದೇಶದ ಜಿಡಿಪಿಗೆ ಅತಿಹೆಚ್ಚು ಆದಾಯ ಕೊಡುವಂತಹ 2 ಬೃಹತ್ ಇಲಾಖೆಯನ್ನು ಕೊಟ್ಟಿದ್ದಾರೆ. ಇಲ್ಲಿ ಉದ್ಯೋಗವಕಾಶಗಳೂ ಹೆಚ್ಚಾಗಿದ್ದು, ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ತುಮಕೂರಿನ ಶಿದ್ದಗಂಗಾ ಮಠಕ್ಕೆ ಸೋಮವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಇಲಾಖೆಯಲ್ಲಿ ವಿಚಾರ ತಿಳಿದುಕೊಳ್ಳಲಿಕೆ ಪ್ರಯತ್ನ ಮಾಡುತ್ತೇನೆ. ನಮ್ಮ ಮುಂದೆ ಕಠಿಣ ಹಾದಿ ಇದೆ. ಪ್ರಧಾನಿ ಅವರು ನನ್ನ ಮೇಲೆ ವಿಶ್ವಾಸ ಇಟ್ಟು ಎರಡು ಬೃಹತ್ ಇಲಾಖೆಯನ್ನ ಕೊಟ್ಟಿದ್ದಾರೆ. ಈ ಎರಡು ಇಲಾಖೆಗಳು ದೇಶದ ಜಿಡಿಪಿಗೆ ಆರ್ಥಿಕ ಶಕ್ತಿ ತುಂಬುವಂತಹದ್ದಾಗಿವೆ. ಯುವಕರಿಗೆ ಉದ್ಯೋಗ ಒದಗಿಸುವಂತಹದ್ದು. ಈ ಎರಡು ಇಲಾಖೆಯಲ್ಲಿ ಅವಕಾಶಗಳು ಹೆಚ್ಚಿವೆ. ಆದರೆ, ಎಲ್ಲಾ ಕಡೆನು ಸ್ಥಳೀಯರಿಗೆ ಉದ್ಯೋಗ ಇಲ್ಲ ಅನ್ನೋ ಕೂಗು ಇದೆ. ಇದರ ಬಗ್ಗೆ ಏನು ನಿಯಮ ಮಾಡೋಕೆ ಆಗಲ್ಲ‌. ಸಂಬಂಧಪಟ್ಟ ಉದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಳುವಳಿಕೆ ಮೂಡಿಸಿ ಸ್ಥಳೀಯರಿಗೆ ಉದ್ಯೋಗ ಕೊಡಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

ಯಾವುದೇ ಒಂದು ಜವಾಬ್ದಾರಿ ತೆಗೆದುಕೊಂಡ ನಂತರ ಮೇಲೆ ದೇವರ ಅನುಗ್ರಹ ಗುರುಹಿರಿಯರ ಆಶಿರ್ವಾದವೂ ಬೇಕು. ಈ ಹಿನ್ನೆಲೆಯಲ್ಲಿ ಪರಮಪೂಜ್ಯ ಸಿದ್ದಲಿಂಗ ಶ್ರೀಗಳ ಆಶಿರ್ವಾದ ಪಡೆದಿದ್ದೇನೆ‌. ನಿನ್ನೆ ಚುಂಚನಗಿರಿ ಸ್ವಾಮೀಜಿಗಳ ಆಶಿರ್ವಾದ ಪಡೆದಿದ್ದೇನೆ. ರಾಜ್ಯ ಮತ್ತು ದೇಶದ ಸಮಸ್ಯೆಗಳಿಗೆ ಪರಿಗಾರ ತರುವ ಪ್ರಯತ್ನದಲ್ಲಿ ಗುರುಹಿರಿಯರ ಆಶಿರ್ವಾದ ಬೇಕಿದೆ. ಈ ನಿಟ್ಟಿನಲ್ಲಿ ಭೇಟಿ ಕೊಟ್ಟಿದ್ದೇನೆ. ಸಿದ್ದಲಿಂಗ ಶ್ರೀಗಳಿಂದ ಅಭಿನಂದನಾ ಪತ್ರ ಬಂದಿದ್ದು, ಶುಭಾಶಯ ಕೋರಿ ನಿನ್ನ ಕಾರ್ಯಗಳು ಯಶಸ್ವಿಯಾಗಲಿ ಎಂದು ಆಶಿರ್ವಾದ ಮಾಡಿದ್ದಾರೆ. ಅವರ ಆಶಿರ್ವಾದ ನನಗೆ ಕೆಲಸ ಮಾಡುವ ಶಕ್ತಿ ಇಮ್ಮಡಿಯಾಗಿದೆ. ನಾಡಿನ ಜನತೆ ನಿರೀಕ್ಷೆ ಇಟ್ಟು, ಜೆಡಿಎಸ್ ಹಾಗೂ ಬಿಜೆಪಿಗೆ ದೊಡ್ಡ ಬೆಂಬಲ ಕೊಟ್ಟಿದ್ದಾರೆ. ಕೆಲ ಕಾರ್ಯಕ್ರಮಗಳನ್ನ ರಾಜ್ಯಕ್ಕೆ ಮತ್ತು ದೇಶಕ್ಕೆ ತರಬೇಕಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬಿಳುತ್ತೆ ಎಂಬ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಚುನಾವಣೆ ನಂತರ ರಾಜಕೀಯದಲ್ಲಿ ಹಲವು ಬದಲಾವಣೆ ತರಬಹುದು ಅಂತ ಹೇಳಿದ್ದೆ. ಸ್ವಲ್ಪ ದಿವಸ ಕಾದು ನೋಡೋಣ. ಇನ್ನು ದೇಶದಲ್ಲಿ ಇವಿಎಂ ಮಿಷನ್ ಹ್ಯಾಕ್ ಆರೋಪ ವಿಚಾರದ ಬಗ್ಗೆ ಮಾತನಾಡಿ, ಇದು ಹಲವು ವರ್ಷಗಳಿಂದ ಹೇಳಿಕೊಂಡು ಬರ್ತಿದ್ದಾರೆ. ಅದನ್ನು ಇನ್ನು ಯಾರು ಪ್ರೂ ಮಾಡಲಿಕ್ಕೆ ಆಗಿಲ್ಲ. ಅದೆಲ್ಲಾ ಊಹಾಪೋಹ ಅಂತ ಎಲೆಕ್ಷನ್ ಕಮಿಷನರ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ನಲ್ಲೂ ಇದರ ಬಗ್ಗೆ ಚರ್ಚೆ ಆಗಿದೆ. ಇದರ ಬಗ್ಗೆ ಎಲ್ಲಾ ಮಾತಾಡುತ್ತಿದ್ದವರು ಇನ್ನು ಸಾಕ್ಷಿ ಕೋಡೋಕೆ ಆಗಿಲ್ಲ. ಕರ್ನಾಟಕದಲ್ಲೂ 136 ಸೀಟ್ ಗೆದ್ರಲ್ಲ ಇವಿಎಂ ಮಿಷನ್ ಹ್ಯಾಕ್ ಮಾಡುದ್ರಾ..? ಎಂದು ಕಿಡಿಕಾರಿದರು.

ನಮ್ಮ ಇಲಾಖೆಯಲ್ಲಿ ಎಲ್ಲವನ್ನೂ ತಿಳಿದುಕೊಳ್ಳುವ ಕಾರ್ಯದಲ್ಲಿದ್ದೇನೆ. ರಾಜ್ಯಕ್ಕೆ ಯಾವ್ಯಾವ ಕೈಗಾರಿಕೆ ತರಬಹುದು ಎಲ್ಲವನ್ನು ಕುಲಕುಂಷವಾಗಿ ಚರ್ಚೆ ಮಾಡ್ತಿನಿ. ನಮ್ಮ ಇಲಾಖೆಯ ಕಾರ್ಯದಲ್ಲಿ ಕರ್ನಾಟಕಕ್ಕೆ ಆದ್ಯತೆ ಕೊಡ್ತಿನಿ. ಜೊತೆಗೆ ದೇಶದ ಅಭಿವೃದ್ಧಿಗೆ ಪ್ರಯತ್ನಿಸ್ತಿನಿ. ಇನ್ನು ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಮುಂದಿನ ದಿನಗಳಲ್ಲಿ ಮಾತಾಡೋಣ ಎಂದು ಹೇಳಿ ಹೊರಟು ಹೋದರು.

Latest Videos
Follow Us:
Download App:
  • android
  • ios