ಬೆಂಗಳೂರು: ಅಬ್ಬಬ್ಬಾ ಏನ್ ಬಿಸಿಲು? ಇನ್ನು ಮಾರ್ಚ್ ಮುಗಿದಿಲ್ಲ, ಏಪ್ರಿಲ್, ಮೇ ಹೇಗೇನೋ?  ರಾಜ್ಯದಲ್ಲೆಡೆ ಜನ ಗೋಳು ಹೊಯ್ಯುತ್ತಿರುವುದು ಸೆಖೆಯ ಬಗ್ಗೆನೇ.

ಇದರೆಲ್ಲರ ನಡುವೆ, ಹವಾಮಾನ ಇಲಾಖೆಯಿಂದ ಮಳೆ ಬರುವ ಸುದ್ದಿ ಬಂದಿದೆ.  ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ.

 ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಜೆಲ್ಲೆಗಳು, ಮಲೆನಾಡು ಭಾಗ ಹಾಗೂ ಅದಕ್ಕೆ ಹೊಂದಿಕೊಂಡಿರುವ ಒಳನಾಡು ಜಿಲ್ಲೆಗಳಲ್ಲಿ ಲಘು ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ : ನಿಮ್ಮ ಮನೆಗೂ ನೀರು ಪೂರೈಕೆ ನಿಲ್ಲಬಹುದು!

ಪಶ್ಚಿಮ ಘಟ್ಟದ ಚಿಕ್ಕಮಗಳೂರಿನಲ್ಲಿ ಬುಧವಾರ 28 ಡಿಗ್ರಿ ತಾಪಮಾನ ದಾಖಲಾಗಿದ್ದರೆ, ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಅತೀ ಹೆಚ್ಚು, ಅಂದರೆ 38 ಡಿಗ್ರಿ, ತಾಪಮಾನ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ 35 ಡಿಗ್ರಿಯನ್ನು ಮುಟ್ಟಿದೆ.