ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿಯವ್ರು ರಾಜಕೀಯ ಮಾಡುತ್ತಿದ್ದಾರೆ : ಗೃಹ ಸಚಿವ ಪರಮೇಶ್ವರ್
ಯಾವುದೇ ಜಿಲ್ಲೆ ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ಕೊಟ್ಟಿದ್ರೆ ಹಿಂತೆಗೆದುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ನಿನ್ನೆ ಸಹ ಸೂಚನೆ ಕೊಟ್ಟಿದ್ದಾರೆ. ಅಲ್ಲಿಗೆ ಇದೆಲ್ಲ ಸ್ಥಗಿತ ಆಗಲಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು
ಬೆಂಗಳೂರು (ನ.3): ಯಾವುದೇ ಜಿಲ್ಲೆ ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ಕೊಟ್ಟಿದ್ರೆ ಹಿಂತೆಗೆದುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ನಿನ್ನೆ ಸಹ ಸೂಚನೆ ಕೊಟ್ಟಿದ್ದಾರೆ. ಅಲ್ಲಿಗೆ ಇದೆಲ್ಲ ಸ್ಥಗಿತ ಆಗಲಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.
ವಕ್ಫ್ ಬೋರ್ಡ್ ಆಸ್ತಿ ವಿವಾದ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ವಕ್ಫ್ ವಿಚಾರದಲ್ಲಿ ಬಿಜೆಪಿಯವ್ರು ರಾಜಕೀಯ ದುರುದ್ದೇಶಕ್ಕೆ ಆರೋಪ ಮಾಡ್ತಾರೆ. ಪ್ರತಿಭಟನೆ ಮಾಡೋದು ಅವರ ಹಕ್ಕು ಮಾಡಿಕೊಳ್ಳಲಿ. ಆದ್ರೆ ನಾವು ಈ ಸಂಬಂಧ ಏನು ಕ್ರಮ ತಗೋಬೇಕೋ ಅದನ್ನು ತಗೊಳ್ತಿವಿ. ಬಿಜೆಪಿಯವ್ರು ರೈತರ ಪರವಾಗಿ ಮೂರು ಕೃಷಿ ಕಾಯ್ದೆ ಮಂಡಿಸಿದ್ರು ಅದರಿಂದ ಏನೆಲ್ಲ ತೊಂದರೆ ಅಯ್ತು, ಎಷ್ಟು ರೈತರು ಸತ್ರು, ಬಿಜೆಪಿಯವರ ಸ್ಪಂದನೆ ಹೇಗಿತ್ತು ಅಂತ ನೋಡಿದ್ರೆ ರೈತರ ಬಗ್ಗೆ ಅವರ ಬದ್ಧತೆ ಏನು ಅನ್ನೋದು ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದರು.
ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮುಸ್ಲಿಮರಿಂದ 13 ದಿನಗಳಲ್ಲಿ 3.66 ಕೋಟಿಗೂ ಇಮೇಲ್!
ವಕ್ಫ್‌ನಿಂದ ತಾತ್ಕಾಲಿಕ ನೋಟಿಸ್ ಕೊಡಲಾಗಿತ್ತು ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಇದು ತಾತ್ಕಾಲಿಕ ಅಂತ ಏನಿಲ್ಲ, ನೊಟೀಸ್ ಕೊಟ್ಟಿದ್ದಾರೆ ವಾಪಸ್ ತಗೋತಿವಿ ಅಂದ ಮೇಲೆ ಇಲ್ಲಿಗೆ ಮುಗಿತು. ಅದು ತಾತ್ಕಾಲಿಕ ಆಗಲಿ, ಪರ್ಮನೆಂಟ್ ಆಗಲಿ ವಾಪಸ್ ಪಡೆದಿದ್ದಾಯ್ತಲ್ಲ? ಬಿಜೆಪಿಯವರು ಪ್ರತಿಭಟನೆ ಮಾಡಿ ರಾಜಕೀಯಕ್ಕೆ ಈ ವಿಚಾರ ಬಳಸಿಕೊಳ್ತಾರೆ ಏನು ಮಾಡೋಕೆ ಆಗುತ್ತೆ? ನಾವು ಏನು ಮಾಡಬಹುದು ಅದನ್ನು ಮಾಡುತ್ತೇವೆ ಎಂದರು.