'ಮಿಸ್ಟರ್ ಸಿದ್ದರಾಮಯ್ಯ ರೈತರ ಭೂಮಿ ವಾಪಸ್ ಕೊಟ್ರೆ ಸರಿ ಇಲ್ಲದಿದ್ರೆ.., ಸಿಎಂಗೆ ಡೆಡ್‌ಲೈನ್ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್!

ವಕ್ಫ್ ಬೋರ್ಡ್‌ಗೆ ನೀಡಿದ್ದ ವಿಶೇಷ ಅಧಿಕಾರ ರದ್ದು ಮಾಡಿ. ಮಿಸ್ಟರ್ ಸಿದ್ದರಾಮಯ್ಯನವರೇ ನೀವು ರದ್ದು ಮಾಡದಿದ್ರೆ ರಾಜ್ಯದಲ್ಲಿ ದೊಡ್ಡ ರೈತ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್

Karnataka waqf land dispute farmer leader kodihalli chandrashekhar warns to cm siddaramaiah rav

ಬೀದರ್ (ನ.11): ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಹೆಸರು ವಿವಾದ ತೀವ್ರ ಸ್ವರೂಪ ಪಡೆಯುತ್ತಲೇ ರೈತರ ಸಂಘಟನೆ ಮುಖಂಡರ ಮೇಲೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಿಎಂ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದಾರೆ.

ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ಇಂದು ಬೀದರ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ರಾಲಿಯಲ್ಲಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ರೈತರ ಜಮೀನುಗಳನ್ನು ವಾಪಸ್ ಕೊಡಬೇಕು. ಸಿಎಂ ಸಿದ್ದರಾಮಯ್ಯರಿಗೆ ಇದು ಕೊನೆ ಡೆಡ್‌ಲೈನ್. ನ.15 ರಂದು ಕಾವೇರಿಗೆ ರೈತ ಮುಖಂಡರು ಬರುತ್ತೇವೆ. ಅಂದು ಅಧಿಕಾರಿಗಳು ರೈತರ ಜಮೀನುಗಳನ್ನ ವಾಪಸ್ ಕೊಟ್ರೆ ಸರಿ. ಇಲ್ಲವಾದ್ರೆ ವಕ್ಫ ಸೇರಿದ ಜಮೀನುಗಳನ್ನ ನಾವೇ ಸ್ವಾಧೀನ ಪಡೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಮುಡಾ ತೀರ್ಪು ರಾಜಕೀಯ ಪ್ರೇರಿತ ಹೇಳಿಕೆ: ಜಮೀರ್‌ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಗೌರ್ನರ್‌ ಸೂಚನೆ

ಈ ಹಿಂದೆ ಮಾಡಿದ್ದ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು.‌‌ ನೀವು ವಕ್ಫ್ ಹೆಸರಿನಲ್ಲಿ ಗೂಂಡಾಗಿರಿ ಮಾಡಿ ವಕ್ಫ್ ಟ್ರಸ್ಟ್ ಗೆ ನಮ್ಮ ರೈತರ ಜಮೀನು ಸೇರಿಸಿದ್ದೀರಿ. ವಕ್ಫ್ ನೋಟಿಸ್ ಗಳನ್ನು ವಾಪಸ್ ಪಡೆಯಿರಿ. ಎಲ್ಲೆಲ್ಲಿ ಗೊಂದಲ ಇದೆ ಅಲ್ಲಿ ಮಾತ್ರ ವಾಪಸ್ ಗೆ ನಿರ್ದೇಶನ‌ ಕೊಟ್ಟಂತಿದೆ. ಆದರೆ ಹೇಳೋದನ್ನು ಸ್ವಲ್ಪ ಗಮನವಿಟ್ಟು ಕೇಳಿ. ಈ ಹಿಂದೆ ವಕ್ಫ್ ಬೋರ್ಡ್‌ಗೆ ನೀಡಿದ್ದ ವಿಶೇಷ ಅಧಿಕಾರ ರದ್ದು ಮಾಡಿ. ಮಿಸ್ಟರ್ ಸಿದ್ದರಾಮಯ್ಯನವರೇ ನೀವು ರದ್ದು ಮಾಡದಿದ್ರೆ ರಾಜ್ಯದಲ್ಲಿ ದೊಡ್ಡ ರೈತ ಕ್ರಾಂತಿಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯಗೆ ಕೊನೆಯದಾಗಿ ಡೆಡ್‌ಲೈನ್ ನೀಡಿದರು.

Latest Videos
Follow Us:
Download App:
  • android
  • ios