ರೈತರನ್ನ ಎದುರು ಹಾಕಿಕೊಂಡ್ರೆ ನಿಮ್ಮ ಸರ್ಕಾರ ಉಳಿಯಲ್ಲ : ಸಿಎಂ ಸಿದ್ದರಾಮಯ್ಯಗೆ ವಿ ಕೋಡಿಹಳ್ಳಿ ಮತ್ತೆ ವಾರ್ನ್
ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿವಾದ ಮುಂದುವರಿದರೆ ಸರ್ಕಾರ ಅಧಿಕಾರದಲ್ಲಿರೋದಿಲ್ಲ. ಕೂಡಲೇ ವಕ್ಫ್ ಬೋರ್ಡ್‌ಗೆ ರೈತರ ಜಮೀನು ವರ್ಗಾವಣೆ ಮಾಡುವುದು ಬಂದ್ ಮಾಡಿ ಎಂದು ಸರ್ಕಾರದ ವಿರುದ್ಡ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ಕೋಲಾರ (ನ.12): ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿವಾದ ಮುಂದುವರಿದರೆ ಸರ್ಕಾರ ಅಧಿಕಾರದಲ್ಲಿರೋದಿಲ್ಲ. ಕೂಡಲೇ ವಕ್ಫ್ ಬೋರ್ಡ್‌ಗೆ ರೈತರ ಜಮೀನು ವರ್ಗಾವಣೆ ಮಾಡುವುದು ಬಂದ್ ಮಾಡಿ ಎಂದು ಸರ್ಕಾರದ ವಿರುದ್ಡ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ಇಂದು ಕೋಲಾರದಲ್ಲಿ ನಡೆದ ಜಿಲ್ಲಾ ಮಟ್ಟದ ಮುಖಂಡರ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಜಮೀನುಗಳಿಗೆ ಕೈ ಹಾಕಿದರೆ ರೈತರು ಸರ್ಕಾರದ ವಿರುದ್ಧ ದಂಗೆ ಏಳಬೇಕಾಗುತ್ತೆ. ರೈತರನ್ನ ಎದುರುಹಾಕಿಕೊಂಡರೆ ನಿಮ್ಮ ಸರ್ಕಾರ ಧೂಳಿಪಟವಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ವಿರುದ್ಡ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ರೈತರ ಆಸ್ತಿಗಳನ್ನ ವಕ್ಫ್ ಬೋರ್ಡ್ ಕಬಳಿಕೆ ಮಾಡ್ತಿದೆ. ವಕ್ಫ್ ವಿಚಾರವಾಗಿ ರಾಜಕೀಯ ಮಾಡಲು ಎರಡು ಪಕ್ಷಗಳ ಪ್ರಯತ್ನಿಸುತ್ತಿವೆ. 2015 ರಲ್ಲಿ ಮೊಕಾಶಿ ಟ್ರಸ್ಟ್ ಗೂ ರೈತರ ಜಮೀನು ವರ್ಗಾವಣೆ ಆಗಿದೆ. ವಕ್ಪ್ ಬೋರ್ಡ್ ಹೆಸರಲ್ಲಿ ಬೇರೆ ಟ್ರಸ್ಟ್ ಗೂ ಜಮೀನು ವರ್ಗಾವಣೆ ಆಗಿದೆ. 2015 ರಲ್ಲು ರೈತರ ಆಸ್ತಿ ಕಬಳಿಕೆಯಾಗಿದೆ. ಅದಕ್ಕೆ ಸಿಎಂ ಸಿದ್ದರಾಮಯ್ಯ, ಜಮೀರ್ ಅಹಮದ್ ಉತ್ತರಿಸಲಿ. ರಾಜ್ಯದಲ್ಲಿ ವಕ್ಪ್ ಬೋರ್ಡ್ ಹೆಸರಲ್ಲಿನ ಡೀಲಿಂಗ್ ನಿಲ್ಲಬೇಕು. ಹಾವೇರಿಯಲ್ಲಿ ರೈತನಿಗಾದ ಅನ್ಯಾಯದ ವಿರುದ್ಡ ಹೋರಾq ಮಾಡುತ್ತೇವೆ. ಖಾಸಗಿ ವ್ಯಕ್ತಿಯ ಟ್ರಸ್ಟ್‌ಗೆ ನೀಡಿರುವ ಭೂಮಿ ವಾಪಸ್ ನಾವೂ ಕಬ್ಜ ಮಾಡ್ತೇವೆ.