Asianet Suvarna News Asianet Suvarna News

ಕರ್ನಾಟಕ ಬಿಜೆಪಿಯ ಹಿರಿಯ ಧುರೀಣ, ಮಾಜಿ ಶಾಸಕ ಕರ್ಕಿ ಇನ್ನಿಲ್ಲ

* ಉತ್ತರ ಕನ್ನಡ ಜಿಲ್ಲೆಯ ಬಿಜೆಪಿಯ ಹಿರಿಯ ಧುರೀಣ ನಿಧನ
* ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ ಇನ್ನಿಲ್ಲ
* 1983ರಲ್ಲಿ ಮತ್ತು 1994ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಡಾ. ಎಂ.ಪಿ.ಕರ್ಕಿ 
* ಡಾ. ಎಂ.ಪಿ.ಕರ್ಕಿ ನಿಧನಕ್ಕೆ ಸಿಎಂ ಸಂತಾಪ

Karnataka Veteran BJP leader Dr MP Karki Passes away rbj
Author
Bengaluru, First Published Oct 18, 2021, 9:03 PM IST
  • Facebook
  • Twitter
  • Whatsapp

ಬೆಂಗಳೂರು, (ಅ.18): ಉತ್ತರ ಕನ್ನಡ ಜಿಲ್ಲೆಯ (Uttara kannada District) ಬಿಜೆಪಿಯ ಹಿರಿಯ ಧುರೀಣರು, ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ (Dr MP Karki) ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕರ್ಕಿ ಅವರನ್ನ ಮಂಗಳೂರಿನ (Mangaluru) ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದ್ರೆ, ಇಂದು (ಅ.18) ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಸಿಎಂ ಹಾಗೂ ಸಿದ್ದು ಟ್ವಿಟರ್ ವಾರ್; ಅ.18ರ ಟಾಪ್ 10 ಸುದ್ದಿ!

1968 ರಿಂದ ಜನಸಂಘದ ಮೂಲಕ ರಾಜಕೀಯಕ್ಕೆ (ಫೊಲಿತಿಚಸ) ಕಾಲಿಟ್ಟ ಡಾ. ಕರ್ಕಿಯವರು ಸುದೀರ್ಘ ಕಾಲ ಬಿಜೆಪಿ (ಭಝಫ) ಒಂದೇ ಪಕ್ಷದಲ್ಲಿ ಸೇವೆ ಸಲ್ಲಿಸಿದವರು. 1983ರಲ್ಲಿ ಮತ್ತು 1994ರಲ್ಲಿ ಕುಮಟಾ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ದಿ. ಶಾಸಕ ಡಾ. ಯು. ಚಿತ್ತರಂಜನ್, ಡಾ. ಪಿಕಳೆ ಯವರಂಥ ಹಿರಿಯರ ಸಮಕಾಲೀನ ಡಾ. ಎಂ.ಪಿ. ಕರ್ಕಿಯವರು ಮಾಜಿ ಶಾಸಕರಾದರೂ ಬಿಜೆಪಿಯ ಉನ್ನತ ಮಟ್ಟದಲ್ಲಿ ತಮ್ಮದೇ ಆದ ವರ್ಚಸ್ಸು ಉಳ್ಳವರು. ತಮ್ಮ ಜೀವನದುದ್ದಕ್ಕೂ ಪ್ರಾಮಾಣಿಕತೆ ಮತ್ತು ಸಚ್ಚಾರಿತ್ರ್ಯವನ್ನು ಕಾಪಾಡಿಕೊಂಡು ಸಾರ್ವಜನಿಕರ ನಡುವೆ ಸದಾ ತಮ್ಮದೇ ಆದ ಘನತೆ ಕಾಪಾಡಿಕೊಂಡಿದ್ದರು. ಡಾ. ಕರ್ಕಿಯವರ ಸ್ವಚ್ಛ ವೈಯಕ್ತಿಕ ಜೀವನ ಮತ್ತು ಅವರ ಪ್ರಾಮಾಣಿಕತೆಯನ್ನು ವಿರೋಧ ಪಕ್ಷಗಳಾಗಲಿ, ಅವರ ರಾಜಕೀಯ ವಿರೋಧಿಗಳೇ ಆಗಲಿ ಇಂದಿಗೂ ಪ್ರಶ್ನಿಸದಂತ ವ್ಯಕ್ತಿತ್ವ.

ಕರ್ಕಿ ನಿಧನಕ್ಕೆ ಸ್ಪೀಕರ್ ಸಂತಾಪ
ಕರ್ಕಿ ಅವರ ನಿಧನಕ್ಕೆ ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

 ಜನಸಂಘದ ಕಾಲದಿಂದಲೂ ರಾಜಕಾರಣದಲ್ಲಿ ಸಕ್ರೀಯರಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಡಾ. ಕರ್ಕಿಯವರ ಕೊಡುಗೆ ಅಪಾರವಾದುದು.  ಡಾ. ಕರ್ಕಿಯವರು ಸಮಾಜ ಸೇವೆಯ ಜೊತೆಗೆ ವೈದ್ಯಕೀಯ, ಶೈಕ್ಷಣಿಕ  ಕ್ಷೇತ್ರದಲ್ಲಿಯೂ  ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದರು.  ವಯಕ್ತಿಕವಾಗಿ ಅವರು ನನಗೆ ನೀಡುತ್ತಿದ್ದ ಮಾರ್ಗದರ್ಶನವನ್ನು ಸ್ಮರಿಸಿಕೊಳ್ಳುತ್ತೇನೆ.  ಶ್ರೀಯುತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ದಯಪಾಲಿಸಲಿ. ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ
ಕುಮಟಾ ಕ್ಷೇತ್ರದ ಮಾಜಿ ಶಾಸಕ ಎಂ ಪಿ ಕರ್ಕಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದಲ್ಲಿ ಜನಸಂಘ ಮತ್ತು ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಕರ್ಕಿಯವರ ಪಾತ್ರ ಮಹತ್ವದ್ದಾಗಿತ್ತು. ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಸೇವೆಯಲ್ಲಿ ಇವರು ಮಾಡಿರುವ ಸೇವೆ ಅನುಕರಣೀಯ. ಕರ್ಕಿ ಅವರ ನಿಧನದಿಂದ ಸಂಘಪರಿವಾರ ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಂತಾಗಿದೆ.

ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಆ ದೇವರಲ್ಲಿ ಕೋರುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios