Asianet Suvarna News Asianet Suvarna News

ಮುದ್ರಾಂಕ ಶುಲ್ಕ ಐದು ಪಟ್ಟು ಭಾರಿ ಹೆಚ್ಚಳ: ಸರ್ಕಾರದ ಆದಾಯ 2000 ಕೋಟಿ ರು.ವರೆಗೂ ಹೆಚ್ಚಳ ನಿರೀಕ್ಷೆ!

ವಿಭಜನೆ, ದತ್ತು ಪತ್ರ, ಅಫಿಡವಿಟ್, ಕರಾರು ಪತ್ರದ ರದ್ದತಿ, ಕಂಪನಿಗಳ ಪುನರ್‌ನಿರ್ಮಾಣ ಅಥವಾ ವಿಭಜನೆ, ಅಡಮಾನದ ಮರುಹಂಚಿಕೆ ಸೇರಿದಂತೆ ಸರ್ಕಾರ ಒಟ್ಟು25ಕ್ಕೂಹೆಚ್ಚು ರೀತಿಯ ದಾಖಲೆಗಳ ಮುದ್ರಾಂಕ ಶುಲ್ಕವನ್ನು ರಾಜ್ಯ ಶೇ.200ರಿಂದ ಶೇ.500ರವರೆಗೆ ಹೆಚ್ಚಳ ಮಾಡಿ ಅಧಿಕೃತ ರಾಜ್ಯ ಪತ್ರ ಹೊರಡಿಸಿದೆ. 

karnataka ups stamp duty fee by 200 to 500 for all non registrable items gvd
Author
First Published Feb 9, 2024, 10:42 AM IST

ಬೆಂಗಳೂರು (ಫೆ.09): ವಿಭಜನೆ, ದತ್ತು ಪತ್ರ, ಅಫಿಡವಿಟ್, ಕರಾರು ಪತ್ರದ ರದ್ದತಿ, ಕಂಪನಿಗಳ ಪುನರ್‌ನಿರ್ಮಾಣ ಅಥವಾ ವಿಭಜನೆ, ಅಡಮಾನದ ಮರುಹಂಚಿಕೆ ಸೇರಿದಂತೆ ಸರ್ಕಾರ ಒಟ್ಟು 25ಕ್ಕೂ ಹೆಚ್ಚು ರೀತಿಯ ದಾಖಲೆಗಳ ಮುದ್ರಾಂಕ ಶುಲ್ಕವನ್ನು ರಾಜ್ಯ ಶೇ.200ರಿಂದ ಶೇ.500ರವರೆಗೆ ಹೆಚ್ಚಳ ಮಾಡಿ ಅಧಿಕೃತ ರಾಜ್ಯ ಪತ್ರ ಹೊರಡಿಸಿದೆ. ಇದರಿಂದ ವಿವಿಧ ದಾಖಲೆಗಳಿಗೆ ಮುದ್ರಾಂಕ ಶುಲ್ಕ ಎರಡು ಪಟ್ಟು, ಇನ್ನು ಕೆಲ ದಾಖಲೆಗಳಿಗೆ ಐದು ಪಟ್ಟು ಹೆಚ್ಚಳವಾಗಲಿದೆ. ಅತಿ ಹೆಚ್ಚು ಅಂದರೆ ನಗರ ಪ್ರದೇಶಗಳ ಆಸ್ತಿ ವಿಭಜನಾ ಪತ್ರಗಳಿಗೆ 1000 ರು. ಇದ್ದ ಮುದ್ರಾಂಕ ಶುಲ್ಕವನ್ನು ಪ್ರತಿ ಷೇರಿಗೆ 5,000 ರು.ಗೆ, ನಗರ ಹೊರಗಿರುವ ಆಸ್ತಿಗಳಿಗೆ 500 ರು. ಇದ್ದ ಶುಲ್ಕ ಪ್ರತಿ ಷೇರಿಗೆ 3,000 ರು.ಗೆ ಹೆಚ್ಚಿಸಲಾಗಿದೆ.

ಈ ಸಂಬಂಧ ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ 'ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ಮಸೂದೆ 2023' ಅನ್ನು ಮಂಡಿಸಿ ಸರ್ಕಾರ ಅಂಗೀಕಾರ ಪಡೆದಿತ್ತು. ಇದೇ ಫೆಬ್ರವರಿ 3 ರಂದು ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡಿದ್ದು, ಅದೇ ದಿನ ಹೊಸ ದರಗಳ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಮುದ್ರಾಂಕ ಶುಲ್ಕ ಸಂಗ್ರಹದಿಂದ ಬರುವ ಆದಾಯ ಕನಿಷ್ಠ 1000 ದಿಂದ 2000 ಕೋಟಿ ರು.ಗಳವರೆಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. 2022-2023ರಲ್ಲಿ ರಾಜ್ಯದಲ್ಲಿ ಮುದ್ರಾಂಕ ಶುಲ್ಕ ಸಂಗ್ರಹವು ಸುಮಾರು 2,027 ಕೋಟಿ ರು.ಗಳಷ್ಟಿತ್ತು. ಇನ್ನು ಮುಂದೆ ಇದು ಸುಮಾರು 3,000 ಕೋಟಿ ರು. ನಿಂದ 4,000 ಕೋಟಿ ರು.ಗಳಿಗೆ ಹೆಚ್ಚುವ ನಿರೀಕ್ಷೆ ಮಾಡಲಾಗಿದೆ. 

ಕಾಂಗ್ರೆಸ್‌ ಸರ್ಕಾರದಲ್ಲೂ 40% ಕಮಿಷನ್: ಕೆಂಪಣ್ಣ ಗಂಭೀರ ಆರೋಪ

ಯಾವ ದರ ಎಷ್ಟು ಹೆಚ್ಚಳ?: ರಾಜ್ಯ ಪತ್ರದಲ್ಲಿ ಪ್ರಕಟಿತ ತಿದ್ದುಪಡಿ ದರದ ಪ್ರಕಾರ, ದತ್ತು ಪತ್ರಗಳ ಮೇಲಿನ ಮುದ್ರಾಂಕ ಶುಲ್ಕ 500 ರು. ನಿಂದ 1,000 ರು.ಗೆ ಏರಿಕೆಯಾಗಿದೆ. ಸದ್ಯ ವಿವಿಧ ಅಫಿಡವಿಟ್‌ಗಳಿಗೆ 20 ರು. ಇರುವ ಮುದ್ರಾಂಕ ಶುಲ್ಕವನ್ನು 100 ರು. ವರೆಗೆ ಹೆಚ್ಚಿಸಲಾಗಿದೆ. ಪವರ್‌ಆಫ್ ಅಟಾರ್ನಿಗೆ 100 ರು. ಇದ್ದ ಮುದ್ರಣ ಶುಲ್ಕ 500 ರು.ಗೆ, ಐದಕ್ಕಿಂತ ಹೆಚ್ಚು ಮಂದಿ, ಆದರೆ 10ಕ್ಕಿಂತ ಕಡಿಮೆ ವ್ಯಕ್ತಿಗಳು ಜಂಟಿ ಯಾಗಿ ಪವರ್‌ಆಫ್ ಅಟಾರ್ನಿ ನೀಡುವುದಾದರೆ 200 ರು. ಬದಲು ಇನ್ನು ಮುಂದೆ 1,000 ರು. ಶುಲ್ಕ ಪಾವತಿಸಬೇಕು. 

ಷೇರಿಗೆ 5,000 ರು.ಗೆ ಹೆಚ್ಚಿಸಲಾಗಿದೆ. ನಗರ ಮಿತಿಯಿಂದ ಹೊರಗಿರುವ ಆಸ್ತಿಗಳಿಗೆ ಪ್ರಸ್ತುತ ಇರುವ 500 ರು. ಬದಲು ಪ್ರತಿ ಷೇರಿಗೆ 3,000 ರು. ಶುಲ್ಕಪಾವತಿಸಬೇಕು. ಕೃಷಿ ಆಸ್ತಿಗಳನ್ನು ವಿಭಜಿಸಲು ಪ್ರತಿ ಷೇರಿಗೆ ಇದ್ದ 250 ರು.ಗಳನ್ನು ಈಗ 1,000 ರು.ಗೆ ಹೆಚ್ಚಿಸಲಾಗಿದೆ. ಇನ್ನು, ವಿಚ್ಛೇದನ ಪತ್ರಗಳ ಮೇಲಿನ ಸ್ಟಾಂಪ್ ಡ್ಯೂಟಿ ಕೂಡ 100 ರು. ರಿಂದ 500 ರು.ಗೆ ಹೆಚ್ಚಾಗಿದೆ. ಪ್ರಮಾಣೀಕೃತ ಪ್ರತಿಗಳ ಶುಲ್ಕವನ್ನು 5 ರು.ರಿಂದ20 ರು.ಗೆ, ಸದ್ಯ ವಿವಿಧ ಅಫಿಡವಿಟ್ಟುಗಳಿಗೆ 20 ರು. ಇದ್ದ ಮುದ್ರಾಂಕ ಶುಲ್ಕವನ್ನು 100 ರು.ಗಳ ನಗರ ಪ್ರದೇಶಗಳ ಆಸ್ತಿ ವಿಭಜನಾ ಪತ್ರಗಳಿಗೆ ವರೆಗೆ ಹೆಚ್ಚಿಸಲಾಗಿದೆ. 

ಹೈಸೆಕ್ಯೂರಿಟಿ ನಂಬರ್‌ ಪ್ಲೇಟ್‌ ಹಾಕಿಸಲು ಮಾಲೀಕರ ನಿರಾಸಕ್ತಿ: ಕಾರಣವೇನು?

ಅದೇ ರೀತಿ ಟ್ರಸ್ಟ್‌ಗಳನ್ನು 1000 ರು. ಇದ್ದ ಮುದ್ರಾಂಕ ಶುಲ್ಕವನ್ನು ಪ್ರತಿ ನೋಂದಾಯಿಸುವುದು, ಕಂಪನಿಗಳ ವಿಲೀನ ಮತ್ತಿತರ ಪ್ರಕ್ರಿಯೆಗಳ ಶುಲ್ಕದಲ್ಲೂ ಸಹ ಹೆಚ್ಚಳವಾಗಲಿದೆ. ಕಂಪನಿಗಳ ವಿಲೀನವನ್ನು ಒಳಗೊಂಡಿರುವ ಸಾಗಣೆ ಪತ್ರಗಳಲ್ಲಿ ನಿಗದಿತ ಮುದ್ರಾಂಕ ಶುಲ್ಕವು ಆಸ್ತಿಯ ಮಾರುಕಟ್ಟೆ ಮೌಲ್ಯದ ಮೇಲೆ 3 ಪ್ರತಿಶತ ಅಥವಾ ಷೇರುಗಳ ಒಟ್ಟು ಮೌಲ್ಯದ 1 ಪ್ರತಿಶತಕ್ಕೆ ಸಮನಾಗಿರುತ್ತದೆ. ಇದನ್ನು ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ.5 ಮತ್ತು ಷೇರುಗಳ ಮೌಲ್ಯದ ಶೇ.5 ಹೆಚ್ಚಿಸಲು ಮಸೂದೆ ಪ್ರಸ್ತಾಪಿಸುತ್ತದೆ. ಬಿಲ್‌ನ ಆಪ್ಲೆಕ್ಸ್‌ ಗಳು ಮತ್ತು ಕಾರಣಗಳ ಹೇಳಿಕೆಯಪ್ರಕಾರ, ಬ್ಯಾಂಕ್ ಗ್ಯಾರಂಟಿಗಳ ಮೇಲೆ ಮುದ್ರಾಂಕ ಶುಲ್ಕವನ್ನು ವಿಧಿಸುವಬಗ್ಗೆ ಪ್ರತ್ಯೇಕನಿಬಂಧನೆಯನ್ನು ಪ್ರಸ್ತಾಪಿಸಲಾಗಿದೆ.

Follow Us:
Download App:
  • android
  • ios