Asianet Suvarna News Asianet Suvarna News

ಎಣ್ಣೆ ಪ್ರಿಯರಿಗೆ ಗುಡ್‌ನ್ಯೂಸ್: ವೀಕೆಂಡ್ ಪಾರ್ಟಿಗೆ ಸಿಕ್ತು ಗ್ರೀನ್ ಸಿಗ್ನಲ್

* 3ನೇ ಹಂತದ ಅನ್​ಲಾಕ್​​ ಮಾರ್ಗಸೂಚಿ ಬಿಡುಗಡೆ
* ಯಡಿಯೂರಪ್ಪನವರ ನೇತೃತ್ವದಲ್ಲಿ ಕೋವಿಡ್ ಉಸ್ತುವಾರಿ ಸಚಿವರ ಸಭೆಯಲ್ಲಿ ಮಹತ್ವದ ತೀರ್ಮಾನ
* ಎಣ್ಣೆ ಪ್ರಿಯರಿಗೆ ಗುಡ್‌ನ್ಯೂಸ್ ಸಹ ಸಿಕ್ಕಿದೆ

Karnataka Unlock 3.0: Drinking allowed In bar rbj
Author
Bengaluru, First Published Jul 3, 2021, 8:11 PM IST

ಬೆಂಗಳೂರು, (ಜುಲೈ.03): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊರೊನಾ 2ನೇ ಅಲೆಯ ಬಳಿಕ 3ನೇ ಹಂತದ ಅನ್​ಲಾಕ್​​ ಮಾರ್ಗಸೂಚಿ ಪ್ರಕಟಿಸಿದ್ದು,  ಹಲವು ಚಟುವಟಿಕೆಗಳಿಗೆ ಮತ್ತೆ ರಿಲ್ಯಾಕ್ಸ್ ನೀಡಲಾಗಿದೆ. 
 
ಅದರಲ್ಲೂ ಜನರಿಗೆ ವಾರಾಂತ್ಯದ ರಜಾ-ಮಜಾಕ್ಕೆ ಅವಕಾಶ ನೀಡಲಾಗಿದೆ.  ಅದರಲ್ಲೂ ಎಣ್ಣೆ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ರಾಜ್ಯಾದ್ಯಂತ ಪ್ರತಿದಿನ ಸಂಜೆ 9ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಇರಲಿದ್ದು, ರಾಜ್ಯಾದ್ಯಂತ ವೀಕೆಂಡ್‌ ಕರ್ಫ್ಯೂ ರದ್ದು ಮಾಡಲಾಗಿದೆ..

ಕರ್ನಾಟಕದಲ್ಲಿ ಅನ್‌ಲಾಕ್ 3.0 ಮಾರ್ಗಸೂಚಿ ಪ್ರಕಟ: ಏನಿರುತ್ತೆ? ಏನಿರಲ್ಲ?

ಬಾರ್‌ಗಳಲ್ಲಿ ಕುಳಿತು ಎಣ್ಣೆ ಸೇವಿಸಲು ರಾತ್ರಿ 9ರ ವರೆಗೆ ಅನುಮತಿ ಇದೆ.  ಈ ಹಿಂದೆ ಬಾರ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ಅವಕಾಶ ಇದ್ದಿಲ್ಲ. ಬದಲಿಗೆ ಪಾರ್ಸಲ್‌ಗೆ ಮಾತ್ರ ಅವಕಾಶ ಇತ್ತು.

ಇದೀಗ ಜುಲೈ 5ರಿಂದ ವೀಕೆಂಡ್‌ನಲ್ಲಿ ಎಣ್ಣೆ ಪಾರ್ಟಿ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಮದ್ಯ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಯಾಕಂದ್ರೆ ಬಾರ್‌ನಲ್ಲಿ ಕುಳಿತು ಮಾಡುವ ಪಾರ್ಟಿ ತರ ಮನೆಯಲ್ಲಿ ಆಗುವುದಿಲ್ಲ. 

Follow Us:
Download App:
  • android
  • ios