* 3ನೇ ಹಂತದ ಅನ್​ಲಾಕ್​​ ಮಾರ್ಗಸೂಚಿ ಬಿಡುಗಡೆ * ಜುಲೈ 5ರ ಮುಂಜಾನೆ 5 ಗಂಟೆಯಿಂದ ಅನ್​ಲಾಕ್ 3.O ಅನ್ವಯ* ಯಡಿಯೂರಪ್ಪನವರ ನೇತೃತ್ವದಲ್ಲಿ ಕೋವಿಡ್ ಉಸ್ತುವಾರಿ ಸಚಿವರ ಸಭೆಯಲ್ಲಿ ಮಹತ್ವದ ತೀರ್ಮಾನ

ಬೆಂಗಳೂರು, (ಜುಲೈ.03): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊರೊನಾ 2ನೇ ಅಲೆಯ ಬಳಿಕ 3ನೇ ಹಂತದ ಅನ್​ಲಾಕ್​​ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು (ಶನಿವಾರ) ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಕೋವಿಡ್ ಉಸ್ತುವಾರಿ ಸಚಿವರ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನ್‌ಲಾಕ್‌ 3.O ಜಾರಿಗೊಳಿಸುವ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಜುಲೈ 5ರ ಮುಂಜಾನೆ 5 ಗಂಟೆಯಿಂದ ಅನ್​ಲಾಕ್ 3.O ಅನ್ವಯವಾಗಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಅನ್​ಲಾಕ್ ಅನ್ವಯವಾಗಲಿದೆ. ಇನ್ನು ಪ್ರಮುಖವಾಗಿ ಜುಲೈ 5ರಿಂದ ವೀಕೆಂಡ್ ಕರ್ಫ್ಯೂ ರದ್ದು ಮಾಡಲಾಗಿದೆ. ಆದ್ರೆ, ದಿನದ ನೈಟ್ ಕರ್ಫ್ಯೂ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆ ವರೆಗೆ ಇರಲಿದೆ. ಇನ್ನು ಯಾವುದ್ಕೆಲ್ಲಾ ಅವಕಾಶ? ಯಾವುದಕ್ಕೆ ಇಲ್ಲ ಎನ್ನುವ ಮುಖ್ಯಾಂಶಗಳು ಈ ಕೆಳಗಿನಂತಿವೆ.

ಯಾವುದಕ್ಕೆಲ್ಲಾ ಅವಕಾಶ?
* ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇಕಡಾ 100ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ.
* ಎಲ್ಲಾ ಮಾಲ್‌ಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ. 
* ರಾಜ್ಯದಲ್ಲಿ ದೇವಾಲಯಗಳನ್ನು ತೆರೆಯಲು ಗ್ರೀನ್ ಸಿಗ್ನಲ್.( ಭಕ್ತರಿಗೆ ದೇವಾಲಯ ಪ್ರವೇಶ, ದೇವರ ದರ್ಶನ ಮತ್ತು ಆರತಿ ಸೇವೆಗಷ್ಟೇ ಅವಕಾಶ)
* ಬಾರ್​ಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.
* ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಇರುವುದಿಲ್ಲ. 
* ರಾಜ್ಯಾದ್ಯಂತ ಪ್ರತಿದಿನ ಸಂಜೆ 9ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿ ಇರುತ್ತೆ.
* ಧಾರ್ಮಿಕ, ರಾಜಕೀಯ ಇತರ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ. 
* ಪಬ್​ ಹಾಗೂ ಸಿನಿಮಾ ಹಾಲ್​ಗಳು ಕೂಡ ತೆರೆಯಲು ಅವಕಾಶ ನೀಡಲಾಗಿಲ್ಲ.
* ಮಾರ್ಕೆಟ್‌ಗಳ ಓಪನ್ ಇರುವುದಿಲ್ಲ