ಬೆಂಗಳೂರು ಬಂದ್: ವಾಹನ ಸವಾರರಿಗೆ ಸಂಚಾರಿ ಪೊಲೀಸರ ಸಲಹೆ, ಇಲ್ಲಿವೆ ಪರ್ಯಾಯ ಮಾರ್ಗಗಳು
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಇಂದು (ಸೆ.11)‘ಬೆಂಗಳೂರು ಬಂದ್’ಗೆ ಕರೆ ನೀಡಿರುವುದರಿಂದ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗುವ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಸಾರ್ವಜನಿಕರಿಗೆ ಸಂಚಾರಿ ಸಲಹೆಯನ್ನು ನೀಡಿದ್ದಾರೆ.

ಬೆಂಗಳೂರು (ಸೆ.11): ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಇಂದು (ಸೆ.11)‘ಬೆಂಗಳೂರು ಬಂದ್’ಗೆ ಕರೆ ನೀಡಿರುವುದರಿಂದ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗುವ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಸಾರ್ವಜನಿಕರಿಗೆ ಸಂಚಾರಿ ಸಲಹೆಯನ್ನು ನೀಡಿದ್ದಾರೆ.
"ಇಂದು ಆಟೋ ಟ್ಯಾಕ್ಸಿ, ಸೇರಿದಂತೆ ಖಾಸಗಿ ಬಸ್‌ಗಳು ರಸ್ತೆಗಳಿಯುವುದಿಲ್ಲ ಹೀಗಾಗಿ ಹೀಗಾಗಿ ಸಂಚಾರ ಪೊಲೀಸರು ಕೆಲವು ಮಾರ್ಗ ಬದಲಾವಣೆಯನ್ನು ಮಾಡಿದ್ದಾರೆ. ಸಾರ್ವಜನಿಕರು ಕೆಳಗಿನ ತಿಳಿಸಿರುವ ಮಾರ್ಗಗಳ ಬದಲಾಗಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರಿಗೆ ಬಂದ್ ಎದುರಿಸಲು ಸರ್ಕಾರ ಸಿದ್ಧತೆ; 500 ಬಿಎಂಟಿಸಿ ಬಸ್ ನಿಯೋಜನೆ
ಪರ್ಯಾಯ ಮಾರ್ಗಗಳು ಇಂತಿವೆ:
- ಆರ್‌ಆರ್ ಜಂಕ್ಷನ್‌ನಿಂದ ಖೋಡೆ ಸರ್ಕಲ್‌ಗೆ ಬರುವ ವಾಹನಗಳು ಮಲ್ಲೇಶ್ವರಂ ಕಡೆಗೆ ಹೋಗುವುದು.
- ಗೂಡ್ ಶೆಡ್ ರೋಡ್ ಕಡೆಯಿಂದ ಬರುವ ವಾಹನಗಳು ಸಂಗೋಳ್ಳಿ ರಾಯಣ್ಣ ರಸ್ತೆ ಮೂಲಕ ಜಿಟಿ ರಸ್ತೆ ಸಾಗಿ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್-ಓಕಳಿಪುರಂ ಸುಜಾತ ಮೂಲಕ ಮುಂದೆ ಹೋಗುವುದು.
- ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು ಹಳೇ ಜೆಡಿಎಸ್ ಕಚೇರಿ ರಸ್ತೆ-ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು.
- ಮೈಸೂರು ಬ್ಯಾಂಕಿನಿಂದ ಬರುವ ವಾಹನಗಳು ಪ್ಯಾಲೇಸ್ ರಸ್ತೆ-ಮಹಾರಾಣಿ ಅಂಡರ್‌ಪಾಸ್- ಬಸವೇಶ್ವರ ಸರ್ಕಲ್ ಮುಖಾಂತರ ಸಂಚರಿಸುವುದು.
ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರು ಸರ್ಕಾರಿ ಬಸ್ ಪ್ರಯಾಣ ಮಾಡುತ್ತಿರುವುದರಿಂದ ಖಾಸಗಿ ಸಾರಿಗೆ ಬಸ್ ಗಳು, ಆಟೋರಿಕ್ಷಾ, ಟ್ಯಾಕ್ಸಿಗೆ ಪ್ರಯಾಣಿಕರ ಕೊರತೆಯಿಂದ ನಷ್ಟವುಂಟಾಗಿದೆ. ಖಾಸಗಿ ವಾಹನ ಚಾಲಕರು, ಮಾಲೀಕರಿಗೆ ಪರಿಹಾರ ಸೇರಿದಂತೆ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ. ಆದರೆ ಸರ್ಕಾರ ಖಾಸಗಿ ಒಕ್ಕೂಟದ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆ. ಖಾಸಗಿ ಸಾರಿಗೆ ಸಂಸ್ಥೆ ಬೆಂಗಳೂರು ಬಂದ್ ಗೆ ಕರೆ ನೀಡಿದೆ. ಅದ್ಯಾಗೂ ಸರ್ಕಾರ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಿಎಂಟಿಸಿ 500ಕ್ಕೂ ಹೆಚ್ಚು ಬಸ್‌ಗಳನ್ನು ರಸ್ತೆಗಿಳಿಸಿದೆ. ಬೆಂಗಳೂರು ಬಂದ್ ಪ್ರತಿಭಟನೆಯಿಂದ ನಗರದಲ್ಲಿ ಸಾರಿಗೆ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
'ಬೇಡಿಕೆ ಈಡೇರಿಸಿಕೊಳ್ಳಬೇಕೆಂದರೆ ಬಂದು ಮಾತಾಡಲಿ' ಖಾಸಗಿ ಸಾರಿಗೆ ಬಂದ್‌ಗೆ ಡೋಂಟ್‌ಕೇರ್ ಎಂದ ಸಾರಿಗೆ ಸಚಿವ