ಬೆಂಗಳೂರು (ಮಾ.26):  ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡುತ್ತೇನೆ. ರಾಜ್ಯದ ಕೊರೋನಾ ಮಹಾಮಾರಿ ಬಗ್ಗೆ ಅಂಕಿ ಸಂಖ್ಯೆಗಳನ್ನು ಬಚ್ಚಿಡುತ್ತಿದ್ದೇವೆ ಎನ್ನುವುದು ಸರಿಯಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಕೋವಿಡ್ ಹೆಚ್ಚಳದ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ವಿರೋಧ ಪಕ್ಷದ ನಾಯಕರ ಸಲಹೆಗಳನ್ನ ಸ್ವೀಕರಿಸಲು ನಾವು ರೆಡಿ ಇದ್ದೇವೆ. ಮಾರ್ಗಸೂಚಿ ಯನ್ನ ದೀನೇ ದಿನೇ ಬಿಗಿ ಮಾಡುತ್ತಿದ್ದೇವೆ.  ಹಬ್ಬ ಹರಿದಿನಗಳ ಬಗ್ಗೆ ಮಾರ್ಗಸೂಚಿ ಕಠಿಣಗೊಳಿಸಿದ್ದೇವೆ ಎಂದರು. 

ಮಣಿಪಾಲ್ ತಾಂತ್ರಿಕ ವಿವಿಯಲ್ಲಿ 704 ಪಾಸಿಟಿವ್ ಬಂದಿದೆ. ಸಂಪೂರ್ಣ ಕಾಲೇಜನ್ನ ಸೀಲ್ ಡೌನ್ ಮಾಡಿದ್ದೇವೆ. ನಾನು ಮತ್ತೆ ಮನವಿ ಮಾಡೋದು ಜನರು ಈಗಲಾದ್ರು ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಿ. ಜನ ಮಾಸ್ಕ್ ಕಡ್ಡಾವಾಗಿ ಧರಿಸಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಈಗಾಗಲೇ ಲಸಿಕೆ ಒಳ್ಳೆಯ ರೀತಿಯಲ್ಲಿ ಪ್ರಗತಿ ಆಗುತ್ತಿದೆ. ಮನೆಯಲ್ಲಿ ವಯಸ್ಸಾದವರಿಗೆ ಲಸಿಕೆ ಹಾಕಿಸಿ ಎಂದರು. 

ತಜ್ಞರು ಅನೇಕ ಸಲಹೆಗಳನ್ನ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಇನ್ನಷ್ಟು ಬಿಗಿ ಮಾಡುತ್ತಾರೆ. ಒತ್ತಡಗಳು ಎಲ್ಲಾ ಕಡೆಯಿಂದಲೂ ಇದೆ. ಜನರ ಆರ್ಥಿಕ ಪರಿಸ್ಥಿ ನಷ್ಟ ಉಂಟು ಮಾಡಿದೆ. ಇದರ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸುಧಾಕರ್ ಹೇಳಿದರು. 

ಕೊರೋನಾ ನಿಯಂತ್ರಣಕ್ಕೆ ಎಪ್ರಿಲ್ 1 ರಿಂದ ಕಠಿಣ ಕ್ರಮ; ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ! ..

ಕೊರೋನಾ ವಾರಿರ್ಯಸ್ ಗೆ ಸಂಬಳ   ತಡವಾಗಿದೆ. ಇದಕ್ಕೆ ತಾಂತ್ರಿಕ ಸಮಸ್ಯೆ ಕಾರಣವಾಗಿದೆ. ಆದಷ್ಟು ಬೇಗ ಅವರಿಗೆ ಸಂಬಳ ನೀಡಲಾಗುತ್ತದೆ ಎಂದು ಅವರು ಹೇಳಿದರು. 

ಜಾರಕಿಹೊಳಿ ಪ್ರಕರಣ ಪ್ರಸ್ತಾಪ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರದ ಸಂಬಂಧ ಮಾತನಾಡಿದ ಸುಧಾಕರ್ ಯುವತಿ ಇನ್ನೇನು ಸಿಡಿ ಬಿಡ್ತಾಳೆ ನೋಡಬೇಕು. ಈಗಾಗಲೇ 24 ದಿನ ಕಳೆದಿದೆ. ಈಗಾಗಲೇ sit ತನಿಖೆ ನಡೆಯುತ್ತಿದೆ ಎಂದು ಸುಧಾಕರ್ ಹೇಳಿದರು.