Asianet Suvarna News Asianet Suvarna News

ಭಕ್ತರಿಗಿಲ್ಲಿದೆ ಗುಡ್ ನ್ಯೂಸ್ : ದೇಗುಲಗಳಲ್ಲಿ ಸೇವೆ ಪುನಾರಂಭ , ಕಂಡೀಶನ್ಸ್

ಕೊರೋನಾ ಮಹಾಮಾರಿ ಅಟ್ಟಹಾಸದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಎಲ್ಲಾ ದೇವಾಲಯಗಳ ಸೇವೆಯನ್ನು ಇಂದಿನಿಂದ ಮತ್ತೆ ಆರಮಭ ಮಾಡಲಾಗುತ್ತಿದೆ.

Karnataka Temple Starts Pooja From September 1
Author
Bengaluru, First Published Sep 1, 2020, 7:52 AM IST
  • Facebook
  • Twitter
  • Whatsapp

ಉಡುಪಿ (ಸೆ.01): ಅನ್‌ಲಾಕ್‌ 4.0 ಮಾರ್ಗಸೂಚಿ ಅನುಸಾರ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಸೆ.1ರಿಂದ ಭಕ್ತರಿಗೆ ಸೇವಾ ಕಾರ್ಯಕ್ರಮ ಆರಂಭಿಸಲಾಗುವುದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಆದರೆ, ಅನ್ನದಾನ ಮತ್ತು ಹೆಚ್ಚು ಜನ ಸೇರುವ ಉತ್ಸವ, ರಥಸೇವೆ, ಸಮಾರಂಭಗಳಿಗೆ ಮಾತ್ರ ಅವಕಾಶ ಇಲ್ಲ ಎಂದಿದ್ದಾರೆ.

ಈಗಾಗಲೇ ದೇವಾಲಯಗಳಲ್ಲಿ ಸೇವೆ ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿ ಅವರಿಗೆ ಪ್ರಸ್ತಾಪ ಸಲ್ಲಿಸಲಾಗಿದ್ದು, ಒಳಾಂಗಣದ ಎಲ್ಲ ಸೇವೆ ಆರಂಭ ಮಾಡಿ ಎಂದು ಮನವಿ ಮಾಡಿದ್ದೇವೆ. 

ಕೊರೋನಾದಿಂದ ಆರ್ಥಿಕ ಸಂಕಷ್ಟ: ತಿರುಪತಿ ದೇಗುಲಕ್ಕೆ ಈಗ ಠೇವಣಿ ಬಡ್ಡಿಯೇ ಆಧಾರ!...

ಕೋವಿಡ್‌ ನಿಯಮಾವಳಿಗಂತೆ ಸಾಮಾಜಿಕ ಅಂತರ, ಸೀಮಿತ ಜನರ ಭಾಗವಹಿಸುವಿಕೆಯಲ್ಲಿ ದೇವಾಲಯದೊಳಗೆ ನಡೆಯುವ ಎಲ್ಲ ಸೇವೆಗಳನ್ನು ಆರಂಭ ಮಾಡಲು ಯೋಚಿಸಲಾಗಿದೆ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಶೀಘ್ರದಲ್ಲೇ ಸಂಬಂಧಪಟ್ಟದೇವಸ್ಥಾನಗಳಿಗೆ ತಲುಪಲಿದೆ ಎಂದರು.

ಕಳೆದ 5 ತಿಂಗಳಿನಿಂದಲೂ ಕೂಡ ಕೊರೋನಾ ಹಿನ್ನೆಲೆಯಲ್ಲಿ ಎಲ್ಲಾ ದೇಗುಲಗಳನ್ನು ಬಂದ್ ಮಾಡಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಜನರು ಸೇರುವ ಹಿನ್ನೆಲೆಯಲ್ಲಿ ಎಲ್ಲಾ ಪ್ರಮುಖ ದೇವಾಲಗಳನ್ನು ಮುಚ್ಚಲಾಗಿತ್ತು. ಇದೀಗ ಮತ್ತೆ ಸೇವೆ ಆರಂಭ ಮಾಡಲಾಗುತ್ತಿದೆ.

Follow Us:
Download App:
  • android
  • ios