Karnataka Reservoir Water Level:ಮುಂಗಾರು ಅಬ್ಬರದ ಮಧ್ಯೆ ಇಂದು ಜಲಾಶಯಗಳಲ್ಲಿ ಎಷ್ಟಿದೆ ನೀರಿನ ಪ್ರಮಾಣ?
Karnataka Dams water in-flow today: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಲವು ಜಲಾಶಯಗಳು ಬಹುತೇಕ ಭರ್ತಿಯಾಗುತ್ತಿವೆ. ಹಾಗಾದರೆ ಲಿಂಗನಮಕ್ಕಿ, ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ಹಾರಂಗಿ, ಕೆಆರ್‌ಎಸ್ ಸೇರಿದಂತೆ ಎಲ್ಲ ಜಲಾಶಯಗಳ ನೀರಿನ ಇಂದಿನ ಮಟ್ಟ ಎಷ್ಟು? ಈ ಕೆಳಗಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು (ಜುಲೈ.10): ಕರ್ನಾಟಕದ ಹಲವೆಡೆ ಬಿಡದೇ ಮಳೆ ಸುರಿಯುತ್ತಿದ್ದು (Heavy Rain across Karnataka), ರಾಜ್ಯದ ಜನತೆಗೆ ಸಂತೋಶ ಮತ್ತು ದುಖಃ ಎರಡನ್ನೂ ನೀಡುತ್ತಿದೆ. ರಾಜ್ಯದ ಕೆಲ ಭಾಗಗಳಲ್ಲಿ ಅನಾವೃಷ್ಟಿಯಿಂದ ಕಂಗೆಟ್ಟಿದ್ದ ಜನತೆಗೆ ವರುಣ ಸಂತಸ ತಂದರೆ, ಅತೀವೃಷ್ಟಿಯಿಂದ ಹಲವಾರು ಜಿಲ್ಲೆಯ ಜನ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಕೊಡುಗು ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ.
ಇದರ ಮಧ್ಯೆ ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಹಳ್ಳ-ಕೊಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಇನ್ನು ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚುತ್ತಿದೆ. ನದಿಗಳ ಒಳಹರಿವಿನ ಪ್ರಮಾಣ ಪ್ರವಾಹ ಮಟ್ಟದಲ್ಲಿ ಹರಿಯುತ್ತಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ (ಜುಲೈ 8) ನೀರಿನ ಮಟ್ಟ ಈ ಕೆಳಗಿನಂತಿದೆ ನೋಡಿ.
ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ
ಕೆಆರ್‌ಎಸ್ ಜಲಾಶಯ – KRS Dam
ಗರಿಷ್ಠ ಮಟ್ಟ - 124.80 ಅಡಿ
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ – 122 ಅಡಿ
ಇಂದಿನ ಒಳಹರಿವು - 35 ಸಾವಿರ ಕ್ಯುಸೆಕ್
ಇಂದಿನ ಹೊರಹರಿವು - 3576 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ - Tungabhadra Dam
ಗರಿಷ್ಠ ನೀರಿನ ಮಟ್ಟ - 1,633 ಅಡಿ
ಒಟ್ಟು ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರಿನ ಮಟ್ಟ – 168.8 ಅಡಿ
ಕಳೆದ ವರ್ಷ ನೀರಿನ ಮಟ್ಟ- 34.96 ಟಿಎಂಸಿ
ಇಂದಿನ ಒಳಹರಿವು - 58,770 ಕ್ಯೂಸೆಕ್ಸ್
ಇಂದಿನ ಹೊರಹರಿವು - 486 ಕ್ಯೂಸೆಕ್ಸ್
ಕಬಿನಿ ಜಲಾಶಯ Kabini Dam
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ.
ಜಲಾಶಯದ ಇಂದಿನ ನೀರಿನ ಮಟ್ಟ 2282.12 ಅಡಿ.
ಒಳ ಹರಿವಿನ ಪ್ರಮಾಣ 18303 ಕ್ಯುಸೆಕ್ಸ್.
ಹೊರ ಹರಿವಿನ ಪ್ರಮಾಣ 7458 ಕ್ಯುಸೆಕ್ಸ್.
ಆಲಮಟ್ಟಿ ಜಲಾಶಯ –Alamatti Dam
ಗರಿಷ್ಠ ಮಟ್ಟ: 519.60 ಮೀಟರ್.
ಇಂದಿನ ಮಟ್ಟ: 516.37 ಮೀಟರ್
ಒಳಹರಿವು: 78149 ಕ್ಯೂಸೆಕ್.
ಹೊರಹರಿವು: 451 ಕ್ಯೂಸೆಕ್.
ಒಟ್ಟು ಸಾಮರ್ಥ್ಯ: 123.08 ಟಿಎಂಸಿ.
ಲಿಂಗನಮಕ್ಕಿ ಜಲಾಶಯ -Linganamakki Dam
ಗರಿಷ್ಠ ಮಟ್ಟ - 554.44 ಮೀಟರ್
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 1775.35 ಅಡಿ
ಕಳೆದ ವರ್ಷ ನೀರಿನ ಮಟ್ಟ - 61.90 ಟಿಎಂಸಿ
ಇಂದಿನ ಒಳಹರಿವು - 48000 ಕ್ಯೂಸೆಕ್ಸ್
ಇಂದಿನ ಹೊರಹರಿವು - 2445 ಕ್ಯೂಸೆಕ್ಸ್
ಸೂಪಾ ಜಲಾಶಯ-Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ - 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 29.10 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 57.20 ಟಿಎಂಸಿ
ಇಂದಿನ ಒಳಹರಿವು - 31006 ಕ್ಯೂಸೆಕ್ಸ್
ಇಂದಿನ ಹೊರಹರಿವು - 0 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ-Ghataprabha Dam
ಗರಿಷ್ಠ ಮಟ್ಟ - 2175.00 ಅಡಿ
ಒಟ್ಟು ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 2103.167 ಅಡಿ
ಕಳೆದ ವರ್ಷ ನೀರಿನ ಮಟ್ಟ- 24.92 ಟಿಎಂಸಿ
ಇಂದಿನ ಒಳಹರಿವು - 20407 ಕ್ಯೂಸೆಕ್ಸ್
ಇಂದಿನ ಹೊರಹರಿವು - 1097 ಕ್ಯೂಸೆಕ್ಸ್
ಹೇಮಾವತಿ ಜಲಾಶಯ – Hemavati Dam
ಗರಿಷ್ಠ ಮಟ್ಟ - 2,922 ಅಡಿ
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 2,916 ಅಡಿ
ಇಂದಿನ ಒಳಹರಿವು - ಕ್ಯೂಸೆಕ್ಸ್
ಇಂದಿನ ಹೊರಹರಿವು - 250 ಕ್ಯೂಸೆಕ್ಸ್
ನವೀಲುತೀರ್ಥ ಜಲಾಶಯ (ಮಲಪ್ರಭಾ ನದಿ)
ಗರಿಷ್ಠ ಮಟ್ಟ- 2079.50 ಅಡಿ
ಇಂದಿನ ಮಟ್ಟ- 2056.40
ಒಳ ಹರಿವು- 6791 ಕ್ಯೂಸೆಕ್
ಹೊರ ಹರಿವು- 194 ಕ್ಯೂಸೆಕ್
ಸಂಗ್ರಹಣಾ ಸಾಮರ್ಥ್ಯ- 37.731 tmc
ಇಂದಿನ ಸಂಗ್ರಹ- 13.824tmc
ಮಲಪ್ರಭಾ ಜಲಾಶಯ-Malaprabha Dam
ಗರಿಷ್ಠ ಮಟ್ಟ-2079.50 ಅಡಿ
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ - 12.254 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 19.14 ಟಿಎಂಸಿ
ಇಂದಿನ ಒಳಹರಿವು - 4256 ಕ್ಯೂಸೆಕ್ಸ್
ಇಂದಿನ ಹೊರಹರಿವು - 194 ಕ್ಯೂಸೆಕ್ಸ್
ವರಾಹಿ ಜಲಾಶಯ-Varahi Dam
ಗರಿಷ್ಠ ಮಟ್ಟ - 594.36 ಮೀಟರ್
ಒಟ್ಟು ಸಾಮರ್ಥ್ಯ - 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 5.70 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 4.43 ಟಿಎಂಸಿ
ಇಂದಿನ ಒಳಹರಿವು - 9900 ಕ್ಯೂಸೆಕ್ಸ್
ಇಂದಿನ ಹೊರಹರಿವು - 0 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ- Narayanapura Dam
ಗರಿಷ್ಠ ಮಟ್ಟ - 492.25 ಮೀಟರ್
ಒಟ್ಟು ಸಾಮರ್ಥ್ಯ - 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 27.92 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 26.39 ಟಿಎಂಸಿ
ಇಂದಿನ ಒಳಹರಿವು - 263 ಕ್ಯೂಸೆಕ್ಸ್
ಇಂದಿನ ಹೊರಹರಿವು - 263 ಕ್ಯೂಸೆಕ್ಸ್