Asianet Suvarna News Asianet Suvarna News

Crime Review: ಹೆಣ್ಮಕ್ಕಳಿಗೆ ಕರ್ನಾಟಕ ಸೇಫಾ? ಪ್ರತಿ ಎರಡು ದಿನಕ್ಕೆ ರಾಜ್ಯದಲ್ಲಿ ಮೂರು ರೇಪ್‌!

ಕರ್ನಾಟಕ ರಾಜ್ಯ ಪೊಲೀಸ್‌ 2024ರ ಜನವರಿ ತಿಂಗಳ ಕ್ರೈವ್‌ ರಿವಿವ್ಯೂ ವರದಿಯನ್ನು ಪ್ರಕಟ ಮಾಡಿದೆ. ಜನವರಿ ತಿಂಗಳೊಂದರಲ್ಲೇ ಕರ್ನಾಟಕದಲ್ಲಿ ಮಹಿಳೆಯರ ಮೇಲೆ 1596 ಅಪರಾಧ ಘಟನೆಗಳಾಗಿವೆ. ಪ್ರತಿ ಎರಡು ದಿನಕ್ಕೊಮ್ಮೆ ರಾಜ್ಯದಲ್ಲಿ 3 ರೇಪ್‌ ಕೇಸ್‌ಗಳು ವರದಿಯಾಗುತ್ತಿದೆ.

Karnataka State Police has released the crime review of January 2024 sees Spike in crime against women san
Author
First Published Mar 29, 2024, 5:02 PM IST

ಬೆಂಗಳೂರು (ಮಾ.29): ರಾಜ್ಯ ಪೊಲೀಸ್‌ ಇಲಾಖೆ 2024ರ ಜನವರಿ ತಿಂಗಳ ಕ್ರೈವ್‌ ರಿವ್ಯೂವ್‌ ವರದಿಯನ್ನು ಪ್ರಕಟ ಮಾಡಿದೆ. ಇದರ ಪ್ರಕಾರ ಜನವರಿ ತಿಂಗಳೊಂದರಲ್ಲಿಯೇ ಕರ್ನಾಟಕದಲ್ಲಿ ಮಹಿಳೆಯರ ಮೇಲೆ 1596 ಅಪರಾಧ ಘಟನೆಗಳಾಗಿದೆ. 50 ರೇಪ್‌ ಕೇಸ್‌ಗಳು ವರದಿಯಾಗಿದ್ದು, ಇದರ ಅರ್ಥ ಪ್ರತಿ 2 ದಿನಗಳಿಗೊಮ್ಮೆ ರಾಜ್ಯದಲ್ಲಿ ಮೂರು ರೇಪ್‌ ಕೇಸ್‌ಗಳು ವರದಿಯಾಗುತ್ತಿದೆ.  ಹೌದು ಕರ್ನಾಟಕದಲ್ಲಿ ಒಂದೇ ತಿಂಗಳಲ್ಲಿ ಮಹಿಳೆಯರ ಮೇಲೆ 1500ಕ್ಕೂ ಅಧಿಕ ಅಪರಾಧ ಘಟನೆಗಳು ವರದಿಯಾಗಿದೆ. ಜನವರಿ ತಿಂಗಳಲ್ಲಿ ದಾಖಲಾದ 50 ರೇಪ್‌ಗಳ ಪೈಕಿ, ಒಂದು ಕಸ್ಟೋಡಿಯಲ್‌ ರೇಪ್‌ ಕೇಸ್‌ ಆಗಿದ್ದರೆ, ಎರಡು ಗ್ಯಾಂಗ್‌ರೇಪ್‌ ಕೇಸ್‌ಗಳಾಗಿವೆ. ಉಳಿದ 47 ಕೇಸ್‌ಗಳು, ಇತರ ಮಾದರಿಯ ರೇಪ್‌ ಕೇಸ್‌ಗಳು ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷದ ಜನವರಿಗೆ ಹೋಲಿಸಿದರೆ, ಈ ವರ್ಷದ ಜನವರಿಯಲ್ಲಿ ರೇಪ್‌ ಕೇಸ್‌ಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷದ ಜನವರಿಯಲ್ಲಿ ಒಟ್ಟು 29 ಕೇಸ್‌ಗಳು ದಾಖಲಾಗಿದ್ದರೆ, ಈ ವರ್ಷ 50ರ ಗಡಿ ಮುಟ್ಟಿದೆ. ಇದರರ್ಥ ರೇಪ್‌ ಕೇಸ್‌ಗಳಲ್ಲಿ ಶೇ. 72ರಷ್ಟು ಏರಿಕೆ ಕಂಡಿದೆ.

ಜನವರಿ ತಿಂಗಳಲ್ಲಿ ಒಟ್ಟು 50 ರೇಪ್‌ ಕೇಸ್‌ಗಳು ವರದಿಯಾಗಿದೆ. 2023ರ ಡಿಸೆಂಬರ್‌ ತಿಂಗಳಿನಲ್ಲಿ ಒಟ್ಟು 57 ಕೇಸ್‌ಗಳು ದಾಖಲಾಗಿದ್ದವು.  ಆದರೆ, ಕಳೆದ ವರ್ಷದ ಜನವರಿಯಲ್ಲಿ ಇದರ ಪ್ರಮಾಣ ಕೇವಲ 29 ಆಗಿತ್ತು. ಇನ್ನು ಜನವರಿ ತಿಂಗಳಲ್ಲಿ ಒಟ್ಟು 6 ವರದಕ್ಷಿಣೆ ಕೇಸ್‌ಗಳು ದಾಖಲಾಗಿದ್ದು, ಡಿಸೆಂಬರ್‌ನಲ್ಲೂ ಇದರ ಪ್ರಮಾಣ ಇಷ್ಟೇ ಇತ್ತು. 2023ರ ಜನವರಿಯಲ್ಲಿ ಇದರ ಪ್ರಮಾಣ 7 ಆಗಿತ್ತು' ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌  (ಸೆ.354 ಐಪಿಸಿ) ಅಡಿಯಲ್ಲಿ ಒಟ್‌ಟು 523  ಪ್ರಕರಣಗಳು ವರದಿಯಾಗಿದೆ. ಮಹಿಳೆಯರ ಅಪಹರಣದ ಒಟ್ಟು 10 ಪ್ರಕರಣಗಳು ವರದಿಯಾಗಿದೆ. ಮಹಿಳೆಯನ್ನು ಅವಮಾನಿಸಿದ ಅಥವಾ ಈವ್‌ ಟೀಸಿಂಗ್‌ ಮಾಡಿದ 6 ಘಟನೆಗಳು ನಡೆದಿವೆ. ಮಹಿಳಾ ಪಬ್ಲಿಕ್‌ ಸರ್ವೆಂಟ್‌ಗಳ ಮೇಲೆ ನಿಂದಿಸಿದ 9 ಕೇಸ್‌ಗಳು ದಾಖಲಾಗಿದೆ. ಪತಿ ಅಥವಾ ಗಂಡನ ಸಂಬಂಧಿಕರಿಂದ ಕ್ರೌರ್ಯದ 237 ಪ್ರಕರಣಗಳನ್ನು ದಾಖಲಿಸಿದೆ ಎಂದು ತಿಳಿಸಲಾಗಿದೆ.

ಒಂದು ಪ್ರಕರಣವು ವರದಕ್ಷಿಣೆಗಾಗಿ ಕೊಲೆ (ಇತರ ವಿಧಾನ) ಎಂದು ವರದಿಯಾಗಿದೆ. 30 ಪ್ರಕರಣಗಳು ಇತರ ಕಾರಣಗಳಿಗಾಗಿ ಕೊಲೆ, ಮತ್ತು ಏಳು ಇತರ ವಿಧಾನಗಳಿಂದ ವರದಕ್ಷಿಣೆಗಾಗಿ ಕೊಲೆ ಯತ್ನ,  ಆತ್ಮಹತ್ಯೆಗೆ ಪ್ರಚೋದನೆಗಾಗಿ 11 ಪ್ರಕರಣಗಳನ್ನು ದಾಖಲಿಸಿಕೊಂಡಲಾಗಿದೆ. ಇಮ್ಮೋರಲ್‌ ಟ್ರಾಫಿಕ್ (ಪ್ರಿವೆನ್ಶನ್‌) ಕಾಯ್ದೆ ಸಂಬಂಧಿಸಿದಂತೆ 33 ಪ್ರಕರಣಗಳು ವರದಿಯಾಗಿವೆ. ಮದುವೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಮಹಿಳೆಯರ ವಿರುದ್ಧ 613 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.

ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡುವಾಗ ಶೋಕಿಗಾಗಿ ಆಟಿಕೆ ಪಿಸ್ತೂಲ್ ತೋರಿಸಿದ ಯುವಕರು; ಲಾಠಿ ರುಚಿ ತೋರಿಸಿದ ಪೊಲೀಸರು

ವರದಿಯಾಗುತ್ತಿರುವ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಪಲಾಯನ ಪ್ರಕರಣಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಅಪ್ರಾಪ್ತ ವಯಸ್ಕರು ಯಾರೊಂದಿಗಾದರೂ ಓಡಿಹೋಗುವುದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ' ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಬಾಂಬ್‌ ತಯಾರಿಸಿದ್ದ ಮುಜಾಮಿಲ್ ಶರೀಫ್‌ 7 ದಿನ ಎನ್‌ಐಎ ವಶಕ್ಕೆ

 

Follow Us:
Download App:
  • android
  • ios