ಬಿಲ್‌ ಬಾಕಿ: ದೂರು ಕೊಟ್ರೂ ಅಡ್ಜಸ್ಟ್‌ ಮಾಡ್ಕೊಂಡ್ಹೋಗಿ ಅಂದ್ರು, ಜಗನ್ನಾಥ್ ಶೆಗ್ಜಿ

3 ವರ್ಷದಿಂದ ಈ ಸಮಸ್ಯೆ ಶುರುವಾಗಿದ್ದು, ಅಲ್ಲಿಂದ ತಳ್ಳಿಕೊಂಡೇ ಬರಲಾಗುತ್ತಿದೆ. ಹಿಂದೆ ಬೊಮ್ಮಾಯಿ ಸರ್ಕಾರ ಇದ್ದಾಗಲೂ ಬಾಕಿ ಕೊಡುತ್ತೇವೆ ಎಂದೇ ಹೇಳಿಕೊಂಡು ಬಂದರು. ಸುಮಾರು 15-20 ಸಾವಿರ ಕೋಟಿ ರುಪಾಯಿ ಬಾಕಿ ಇದೆ. 

Karnataka State Contractors Association President Jagannath Shegji Talks Over Bill Dues

ಕನ್ನಡಪ್ರಭ  ಸಂದರ್ಶನ 
ಚಂದ್ರಮೌಳಿ ಎಂ. ಆರ್‌. 

ಬೆಂಗಳೂರು(ಡಿ.16):  ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಗದ್ದಲ ಸೃಷ್ಟಿಸಿದ್ದ ಗುತ್ತಿಗೆ ಬಾಕಿ ಬಿಡುಗಡೆಗೆ ವರ್ಸೆಂಟೇಜ್ ಕಳುಕಾರೆಂದ ಆರೋಪ ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಸದ್ದು ಮಾಡತೊಡಗಿದೆ. ಕಾಂಗ್ರೆಸ್ ಸರ್ಕಾರದಲ್ಲೂ ಕೆಲ ಇಲಾಖೆಗಳಲ್ಲಿ ಕೋಟ್ಯಂತರ ಬಿಲ್ ಬಾಕಿ ನೀಡುತ್ತಿಲ್ಲ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಗುತ್ತಿಗೆದಾರರು ರಾಷ್ಟ್ರಪತಿಯವರಿಗೆ ಪತ್ರ ಬರೆಯುವ ಮಟ್ಟಿಗೆ ಈ ವಿಚಾರ ಗಂಭೀರವಾಗಿದೆ. 32 ಸಾವಿರ ಕೋಟಿ ಕಾಮಗಾರಿ ಬಾಕಿ ಬಿಡುಗಡೆ ಮಾಡಬೇಕು. ಸೀನಿಯಾರಿಟಿ ಪ್ರಕಾರ ಬಿಡುಗಡೆ ಮಾಡುತ್ತಿಲ್ಲ, ತಮಗೆ ಬೇಕಾದವರಿಗೆ ಬಾಕಿ ಪಾವತಿಸಲಾಗುತ್ತಿದೆ ಎಂಬುದು ಗುತ್ತಿಗೆದಾರರ ನೇರ ಆರೋಪ. ಇಷ್ಟೊಂದು ಮೊತ್ತ ಬಾಕಿಯಾಗಲು ಕಾರಣವೇನು, ಕೆಲಸ ಮಾಡಿದರೂ ಬಾಕಿ ಹಣ ಬಿಡುಗಡೆಗೆ ಶಾಸಕರು, ಮಂತ್ರಿಗಳು ಅಥವಾ ಅಧಿಕಾರಿಗಳು ಅಡ್ಡಿ ಆಗಿದ್ದಾರೆಯೇ, ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳೇನು, ಪರಿಹಾರಹೇಗೆ ಎಂಬಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಗ್ಜಿ 'ಮುಖಾಮುಖಿ'ಯಾಗಿದ್ದಾರೆ. 

* ಗುತ್ತಿಗೆ ಕಾಮಗಾರಿ ಬಿಲ್ ಬಾಕಿ ಸಮಸ್ಯೆ ಎಲ್ಲ ಕಾಲದಲ್ಲೂ ಇದ್ದೇ ಇರುತ್ತಲ್ಲ?

3 ವರ್ಷದಿಂದ ಈ ಸಮಸ್ಯೆ ಶುರುವಾಗಿದ್ದು, ಅಲ್ಲಿಂದ ತಳ್ಳಿಕೊಂಡೇ ಬರಲಾಗುತ್ತಿದೆ. ಹಿಂದೆ ಬೊಮ್ಮಾಯಿ ಸರ್ಕಾರ ಇದ್ದಾಗಲೂ ಬಾಕಿ ಕೊಡುತ್ತೇವೆ ಎಂದೇ ಹೇಳಿಕೊಂಡು ಬಂದರು. ಸುಮಾರು 15-20 ಸಾವಿರ ಕೋಟಿ ರುಪಾಯಿ ಬಾಕಿ ಇದೆ. 

32,000 ಕೋಟಿ ಬಾಕಿ ಕೊಡಿ: ಸರ್ಕಾರಕ್ಕೆ 8 ದಿನ ಡೆಡ್‌ಲೈನ್‌ ಕೊಟ್ಟ ಗುತ್ತಿಗೆದಾರರು

* ನೀವು 32 ಸಾವಿರ ಕೋಟಿ ಎಂದು ಹೇಳಿದ್ದೀರಿ, ಉಳಿದದ್ದು ಹಾಲಿ ಸರ್ಕಾರದ ಬಾಕಿಯೇ?

ಇಲ್ಲ, ಹಾಗೆ ನೋಡಿದರೆ ಈ ಸರ್ಕಾರ ಬಂದ ಮೇಲೆ ಟೆಂಡ‌ರ್ ಕರೆದೇ ಇಲ್ಲ. ಹಿಂದಿನ ಟೆಂಡರ್ ಕೆಲಸಗಳದ್ದೇ ಬಾಕಿ ಇದೆ. ಉಳಿದ ಕೆಲಸ ಮುಗಿಸಲು ಐದು-ಹತ್ತು ಸಾವಿರ ಕೋಟಿ ರು. ಜಾಸಿ ಆಗಿದೆ ಅಷ್ಟೆ. 

* ಬಾಕಿ ಬಿಡುಗಡೆಗೆ ಅಡ್ಡಿಯಾರು? ಸಚಿವರಾ ಅಥವಾ ಅಧಿಕಾರಿಗಳಾ? 

ಸರ್ಕಾರದ ಬಳಿ ದುಡ್ಡಿದೆ, ಸರ್ಕಾರವನ್ನು ನಾವು ಬ್ರೇಮ್ ಮಾಡುತ್ತಿಲ್ಲ. ಹಣ ಬಿಡುಗಡೆ ಮಾಡಿ ಅಂತ ಅಷ್ಟೇ ನಾವು ಕೇಳುತ್ತಿದ್ದೇವೆ. ಸಿಎಂಸಾಹೇಬ್ರು ಮೀಟಿಂಗ್ ಕರೆದಾಗ ಹಿಂದಿನ ಸರ್ಕಾರದವರು ಬಜೆಟ್‌ನಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಕಾಮಗಾರಿ ನೀಡಿದ್ದರಿಂದ ಈ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ. ನಾವು ಈ ಹಿಂದೆ ತೆಗೆದುಕೊಂಡ ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆಯೇ ನೀಡಿಲ್ಲ. ಹಿಂದೆ 50-60 ಸಾವಿರ ಕೋಟಿ ರು. ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಿದ್ದನ್ನು ಆರ್ಥಿಕ ಇಲಾಖೆ ಆಕ್ಷೇಪಿಸಿ ಕಳಿಸಿದ್ದರೂ ಟೆಂಡ‌ರ್ ಕರೆದು ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. 

*ಹೀಗಿರುವಾಗ 40 ಪರ್ಸೆಂಟ್, 60 ಪರ್ಸೆಂಟ್ ಕೇಳ್ತಾ ಇದ್ದಾರೆ ಎಂಬ ಆರೋಪ ಸುಳ್ಳೇ? 

ನಾವ್ಯಾರು ಹಾಗೇ ಹೇಳಿಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾ ರಸ್ವಾಮಿ ಅವರು 60 ಪರ್ಸೆಂಟ್ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಅವರನ್ನೇ ನಾವು ಕೇಳಿದ್ದೇವೆ. 60 ಪರ್ಸೆಂಟೇಜ್ ಕೊಟ್ಟು ನಮ್ಮ ಹೊಲ, ಮನಿ, ಆಸ್ತಿ ಮಾರಿಕೊಳ್ಳಬೇಕಾ? ಎಂದಿದ್ದೇವೆ. 60 ಪರ್ಸೆಂಟೇಜ್ ಕೊಟ್ಟು ಕೆಲಸ ಮಾಡಲು ಆಗುತ್ತಾ? ಹೀಗಾಗಿ ತಪ್ಪು ಸಂದೇಶ ಕೊಡಬೇಡಿ ಎಂದು ಕುಮಾರಸ್ವಾಮಿ ಅವರನ್ನು ಆಗ್ರಹಿಸಿ ನಾನು ಸ್ಟೇಟ್‌ಮೆಂಟ್ ಸಹ ನೀಡಿದ್ದೇನೆ. ಯಾವುದೇ ಸರ್ಕಾರ ಇರಲಿ, ನಾವು ಕೆಲಸ ಮಾಡಿದ್ದೇವೆ, ಹಣ ಕೊಡಿ ಎಂದಷ್ಟೇ ಕೇಳುತ್ತಿದ್ದೇವೆ. ಇತ್ತೀಚೆಗೆ ಪಿಡಬ್ಲ್ಯುಡಿ ಸಚಿ ವರ ಜೊತೆ ಮೀಟಿಂಗ್ ಮಾಡಿದಾಗ ಸದ್ಯ ಶೇ.50ರಷ್ಟಾದರೂ ಬಾಕಿ ಬಿಡುಗಡೆ ಮಾಡಿ ಎಂದು ಕೇಳಿದಾಗ ಶೇ.40ರಷ್ಟು ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. 

* ಎಲ್ಲ ಇಲಾಖೆಗಳಲ್ಲೂ ಇದೇ ರೀತಿ ಸಮಸ್ಯೆ ಇದೆಯಾ? 

ಪ್ರಮುಖವಾಗಿ ನೀರಾವರಿ, ಪೌರಾಡಳಿತ, ಸಣ್ಣ ನೀರಾವರಿ ಇಲಾಖೆಯಲ್ಲಿ ಸೀನಿಯಾರಿಟಿ ಪ್ರಕಾರ ಬಾಕಿ ಹಣ ಬಿಡುಗಡೆ ಯಾಗುತ್ತಿಲ್ಲ. ಆರ್‌ಡಿಆರ್‌ ಮತ್ತು ಪಿಡಬ್ಲ್ಯುಡಿಯಲ್ಲಿ ಸಲ ಸೀನಿಯಾರಿಟಿ, ಪಾರದರ್ಶಕತೆ ಇದೆ. ಸಚಿವ ಪ್ರಿಯಾಂಕ್ ಖರ್ಗೆ ಇದರಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಮೊನ್ನೆ 1000 ಸಾವಿರ ಕೋಟಿ ರು.ಗಳ ಕಲ್ಯಾಣ ವಥ ಯೋಜನೆಯ ಟೆಂಡರ್‌ನಲ್ಲಿ ಸಚಿವರು ಎಂಟರ್ ಆಗಲಿಲ್ಲ. 

* ಈ ಸೀನಿಯಾರಿಟಿ ಪ್ರಕಾರ ಬಾಕಿ ಬಿಡುಗಡೆಗೆ ಅಡ್ಡಿ ಯಾರು? 

ಅಧಿಕಾರಿಗಳಿಗೆ ಸೀನಿಯಾರಿಟಿ ಪ್ರಕಾರ ಕೊಡಿ ಎಂದಾಗ, ಸಾಹೇಬ್ರು (ಸಚಿವರು)ಲಿಸ್ಟ್ ಮಾಡಿ ಕಳುಹಿಸುತ್ತಾರೆ, ಅದರ ಪ್ರಕಾರ ನಾವು ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ. ಸಚಿವರನ್ನು ಕೇಳಿದರೆ ಅದನ್ನು ನೋಡಿಕೊಳ್ಳುವುದು ಅಧಿಕಾರಿ ಗಳು ಅತಾರೆ. ಹೀಗಾಗಿ ಅಧಿಕಾರಿಗಳ ಸಮಕಮ ಸಭೆ ಕರೆದು ಸರಿ ಮಾಡಿ ಎಂದು ನಾವು ಸಚಿವರನ್ನು ಆಗ್ರಹಿಸಿದ್ದೇವೆ. 

* ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ನೀವು ಯಾವುದೇ ಗಡುವು ನೀಡಿರುವಿರಾ? 

ಇಲ್ಲ, ಅಧಿಕಾರಿಗಳನ್ನು ಕರೆದು ಸೀನಿಯಾರಿಟಿ ಪ್ರಕಾರ ಕೊಡಿ, ತೀರಾ ತೊಂದರೆ ಇದವರಿಗೆ ಸ್ವಲ ಹಣ ಬಿಡುಗಡೆ ಮಾಡಲು ಸೂಚಿಸುವಂತೆ ಸಚಿವರಿಗೆ ಮನವಿ ಮಾಡಿದ್ದೇವೆ, ಆದರೆ ಕೆಲ ಮಾಧ್ಯಮಗಳು ಸರ್ಕಾರಕ್ಕೆ ಗಡುವು ಕೊಟ್ಟಿದ್ದೇವೆ ಎಂದೆಲ್ಲ ನಮ್ಮ ಹೇಳಿಕೆಯನ್ನು ತಿರುಚಿದರು. 

* ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಆಗಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟೇಜ್ ಬಗ್ಗೆ ಆಪಾದಿಸಿದ್ದರಾ? 

ನೋಡಿ ನಾನು ಕೆಂಪಣ್ಣ ಅವರ ಕೈಯಲ್ಲಿ ಬೆಳೆದಿದ್ದೇನೆ, ಸರ್ಕಾ ರದಮೇಲೆ ಆರೋಪ ಮಾಡಬೇಡಿ, ಯಾರು ಮಾಡುತ್ತಾರೋ ಅವರ ಹೆಸರು ಹೇಳಿ ಎಂದು ಕೆಂಪಣ್ಣ ಅವರಿಗೆ ನಾನು ಹೇಳಿದ್ದೆ. 

* ನೀವಾದರೂ ಯಾರು ಪರ್ಸೆಂಟೇಜ್ ಕೇಳುತ್ತಾರೆಂದು ಹೆಸರು ಹೇಳುತ್ತೀರಾ, ಹೆಸರು ಹೇಳಲು ಯಾಕೆ  ಹಿಂಜರಿಕೆ? 

ನೋಡಿ, ಈಗ ಎಂಎಲ್‌ಎಗಳದ್ದೇ ದುನಿಯಾ. ಯಾರಿಗೂ ಟೆಂಡ‌ರ್ ಹಾಕಲು ಬಿಡುತ್ತಿಲ್ಲ. ಶಾಸಕರ ಹೆಸರು ಹೇಳಲು ಆಗುವುದಿಲ್ಲ. ಆದರೆ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ಮುಂದೆ ಶಾಸಕರ ಹೆಸರು ಹೇಳದೆ ಯಾವ ಕ್ಷೇತ್ರದಲ್ಲಿ ಅವ್ಯವಹಾರ ಆಗಿದೆ ಎಂಬ ಬಗ್ಗೆ ದಾಖಲೆ ಸಹಿತ ಸಂಘದಿಂದ ದೂರು ನೀಡಿದ್ದೇವೆ. 

* ಪರ್ಸೆಂಟೇಜ್ ಪ್ರಮಾಣ ಹೆಚ್ಚುತ್ತಾ ಹೋಗುತ್ತಿದೆ ಅಂತಾರಲ್ವ? ಹೀಗಾದರೆ ಗುಣಮಟ್ಟದ ಕಥೆಯೇನು? 

ಒಳ್ಳೆಯ ಪ್ರಶ್ನೆ, ಹಿಂದೆ ಒಂದು ತಾಲೂಕಲ್ಲಿ ಒಬ್ಬ ಕ್ಲಾಸ್ ಒನ್ ಕಾಂಟ್ರಾಕ್ಟ‌ರ್ ಇರುತ್ತಿದ್ದರು, ಕೆಲಸ ಮಾಡಿದ ಮೇಲೆ ಶಾಲು ಹೊದಿಸಿ ಸನ್ಮಾನ ಮಾಡುತ್ತಿದ್ದರು. ಈಗ ಒಂದು ಹಳ್ಳಿಯಲ್ಲಿ ಮೂರ್ನಾಲ್ಕು ಮಂದಿ ಕ್ಲಾಸ್ ಒನ್ ಕಂಟ್ರಾಕ್ಟರ್ ಇದ್ದಾರೆ. ಹೀಗಾಗಿ ಪೈಪೋಟಿ ಶುರುವಾಗಿದೆ. ಮೊದಲು ಒಂದು ಟ್ರ್ಯಾಕ್ಟರ್ ಖರೀದಿಸಬೇಕಾದರೆ 10 ಸೆಕ್ಯುರಿಟಿ ಕೊಡಬೇಕಾಗಿತ್ತು. ಈಗ ಬೇಕಾದಷ್ಟು ಫೈನಾನ್ಸ್ ಇದೆ. ಡೌನ್ ಪೇಮೆಂಟ್ ಕೊಟ್ಟರೆ ಎಷ್ಟು ಬೇಕಾದರೂ ವೆಹಿಕಲ್ ಸಿಗುತ್ತದೆ. 10 ಕೋಟಿ ಕೆಲಸ ಸಿಕ್ಕರೆ 15 ಕೋಟಿ ರು. ವೆಹಿಕಲ್ ಖರೀದಿಸುತ್ತಾನೆ. ಇಂತಹವರು ಪರ್ಸೆಂಟೇಜ್ ಜಾಸ್ತಿ ಕೊಡುತ್ತಾರೆ. ಹೀಗಾದರೆ ವ್ಯವಹಾರ ಮಾಡುವುದಾದರೂ ಹೇಗೆ? ಮೊದಲಿನ ಹಾಗೆ ಈಗ ವಾತಾವರಣ ಇಲ್ಲ.

* ಈ ಪರ್ಸೆಂಟೇಜ್ ವ್ಯವಹಾರದಲ್ಲಿ ಅಧಿಕಾರಿಗಳು ಶಾಮೀಲು ಆಗಿಲ್ಲವೇ? 

ಅಧಿಕಾರಿಗಳ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ, ಶಾಸಕರು ಹೇಳಿದ ಹಾಗೆ ಅವರು ಕೇಳಬೇಕಾಗುತ್ತದೆ, ಅವರೂ ಬದುಕಬೇಕಲ್ಲವೇ? ಶಾಸಕರು ಹೇಳಿದಂತೆ ಕೇಳದಿದ್ದರೆ ಕಿತ್ತು ಬಿಸಾಕುತ್ತಾರೆ. ಟ್ರಾನ್ಸ್‌ಪರ್ ಮಾಡುತ್ತಾರೆ. 
* ಕಾಮಗಾರಿಯ ಬಾಕಿ ಬಿಡುಗಡೆಗೆ ಆರು ತಿಂಗಳು, ವರ್ಷ ಆಗುವುದಾದರೇ ನಿಮ್ಮದು ರಿಸ್ಕಿ ಜಾಬ್ ಅಲ್ವ? 
ಹತ್ತಾರು ವರ್ಷಗಳಿಂದ ಗುತ್ತಿಗೆ ಕೆಲಸ ಮಾಡಿಕೊಂಡು ಬಂದಿದ್ದೇವೆ. ಬೇರೆ ಯಾವ ದಂಧೆ ನಮಗೆ ಗೊತ್ತಿಲ್ಲ, ಹಾಗಾಗಿ ಇವತ್ತು ಕೆಲಸ ಸಿಕ್ಕರೆ ಸಾಕು ಎನ್ನುವಂಥ ಸ್ಥಿತಿ ಗುತ್ತಿಗೆದಾರರಿಗೆ ಬಂದಿದೆ. ಯಾರಿಗೆ ರಿಗೆ ಎಷ್ಟು ಕೊಡಬೇಕೋ ಅಷ್ಟು ಕೊಟ್ಟು ಕೆಲಸ ಮಾಡುವಂತಹ ಸಂದರ್ಭ ಇದೆ. 

* ಎಂಎಲ್‌ಎ ಹಾಗೂ ಸಚಿವರ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ಗುತ್ತಿಗೆ ಸಿಗುತ್ತೆ ಅಂತಾನೂ ಆರೋಪಿಸುತ್ತಾರೆ ಅಲ್ವಾ? 

ಗುತ್ತಿಗೆ ವಿಷಯದಲ್ಲಿ ಒಟ್ಟಾರೆ ಸಚಿವರು ಬರುವುದಿಲ್ಲ. ಒಂದು ವೇಳೆ ಸಚಿವರು ಬರಲು ಮುಂದಾದರೂ ಎಂಎಲ್‌ಎಗಳು ಬಿಡುವುದಿಲ್ಲ. ನಿನಗೇನು ಬೇಕು ಹೇಳಿ, ಇದು ನನ್ನ ಕ್ಷೇತ್ರ ಎಂದು ಹೇಳುತ್ತಾರೆ. ಸಚಿವರಿಗೆ ಈಗೇನಿದೆ ಪವರ್, ನಾಳಿಂದ ನಿನ್ನ ಕಿತ್ತು ಹಾಕುತ್ತೇವೆ ಎನ್ನುತ್ತಾರೆ. ಅಷ್ಟು ಬೆಳೆದು ಬಿಟ್ಟಿದ್ದಾರೆ. ಶಾಸಕರ ಮುಂದೆ ಮುಖ್ಯಮಂತ್ರಿಗಳು ಸ್ಟ್ರಾಂಗ್ ಇಲ್ಲ. ಈ ಹಿಂದೆ ಶಾಸಕರ ಬಗ್ಗೆ ಹೇಳಲು ಹೋದಾಗ ಅವರಿಗೆ ಹೇಳಲು ಆಗಲ್ಲ. ಶಾಸಕರ ವಿರುದ್ಧ ದಾಖಲೆ ಸಹಿತ ದೂರು ನೀಡಿದರೂ ಏನೂ ಮಾಡಲಿಲ್ಲ. ನೀವೇ ಅಡ್ಡಸ್ಟ್ ಮಾಡಿಕೊಂಡು ಹೋಗುವಂತೆ ಹೇಳಿದರು.

ಕಾಂಗ್ರೆಸ್​ ಸರ್ಕಾರಕ್ಕೂ ಕಮಿಷನ್ ಕಳಂಕ: ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

* ಗುತ್ತಿಗೆದಾರ ಸಂಘಗಳನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ ಅಂತಾನೂ ಆರೋಪವಿದೆಯಲ್ಲಾ? ನಮಗೆ ರಾಜಕೀಯ ಬೇಡ, ಕೇವಲ ಗುತ್ತಿಗೆದಾರರ ಹಿತ ಕಾಪಾಡಬೇಕು ಎಂಬುದಷ್ಟೇ ನಮ್ಮ ಉದ್ದೇಶ.ಈ ವಿಷಯದಲ್ಲಿ ನಾವು ಮಾತನಾಡಬಾರದು. ನಮಗೆ ನ್ಯಾಯ ಕೊಡಿ, ಟೆಂಡರ್ ನಲ್ಲಿ ಮಧ್ಯ ಪ್ರವೇಶ ಮಾಡಬೇಡಿ ಎಂಬುದಷ್ಟೇ ನಮ್ಮ ಆಗ್ರಹ.

* ಈಗ ಪರ್ಸೆಂಟೇಜ್ ಆರೋಪ ಕೇಳಿಬಂದಿದೆಯಲ್ಲ? 

ಪರ್ಸೆಂಟೇಜ್ ವ್ಯವಹಾರ ಮೊದಲಿನಿಂದಲೂ ಇದೆ. ಇಲ್ಲ ಅಂತ ಹೇಳಲ್ಲ. ಇದು ಓಪನ್ ಸೀಕ್ರೆಟ್. ನಾವು ದಂಧೆ ಮಾಡು ವವರು. ಅವರು ಬೇಡ ಎಂದರೂ ಪರ್ಸೆಂಟೇಜ್ ಕೊಡುತ್ತೇವೆ. ಈಗ ಸೀನಿಯಾರಿಟಿ ಪ್ರಕಾರ ಬಾಕಿ ಹಣ ಬಿಡುಗಡೆ ಮಾಡಿ ಎಂಬುದು ನಮ್ಮ ಒತ್ತಾಯ. ಪೇಮೆಂಟ್ ಬಿಡುಗಡೆಯಾ ಗದಿದ್ದಾಗ ಪರ್ಸೆಂಟೇಜ್ ಮಾತು ಎಲ್ಲಿ ಬರುತ್ತದೆ?. 

Latest Videos
Follow Us:
Download App:
  • android
  • ios