ಸಿಎಂ ಸಿದ್ದರಾಮಯ್ಯ ಮನವಿಗೆ ಮನವಿಗೂ ಸಾರಿಗೆ ನೌಕರರು ಕ್ಯಾರೇ ಎಂದಿಲ್ಲ. ಕರೆದಿದ್ದ ಮಹತ್ವದ ಸಂಧಾನ ಸಭೆ ವಿಫಲಗೊಂಡಿದೆ. ಇದರ ಪರಿಣಾಮ ನಾಳೆ ಬೆಳಗ್ಗೆಯಿಂದ ಸಾರಿಗೆ ಬಸ್ ಸೇವೆ ಲಭ್ಯವಿಲ್ಲ.
ಬೆಂಗಳೂರು (ಆ.04) ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಜಟಾಪಟಿ ತೀವ್ರಗೊಂಡಿದೆ. ಸಿಎಂ ಸಿದ್ದರಾಮಯ್ಯ ಕರೆದಿದ್ದ ಸಂಧಾನ ಸಭೆಯೂ ವಿಫಲಗೊಂಡಿರುವ ಹಿನ್ನಲೆಯಲ್ಲಿ ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಆರಂಭಗೊಳ್ಳಲಿದೆ. ಹೀಗಾಗಿ ನಾಳೆ ಬೆಳಗ್ಗೆಯಿಂದ ಸಾರಿಗೆ ಬಸ್ ಸೇವೆ ಲಭ್ಯವಿರುವುದಿಲ್ಲ. ಎಸ್ಮಾ ಜಾರಿ, ಸಾರಿಗೆ ನೌಕರರ ರಜಾ ರದ್ದು ಸೇರಿದಂತೆ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಸರ್ಕಾರ ಕೈಗೊಂಡರೂ ಯಾವುದಕ್ಕೂ ಕ್ಯಾರೇ ಅನ್ನದ ಸಾರಿಗೆ ನೌಕರರು ನಾಳೆಯಿಂದ ಮುಷ್ಕರ ಆರಂಭಿಸಲಿದ್ದಾರೆ.
38 ತಿಂಗಳ ಬಾಕಿ ವೇತನ 1800 ಕೋಟಿ ರೂಪಾಯಿ ತಕ್ಷಣವೇ ಬಿಡುಗಡೆ ಮಾಡುವಂತೆ ಸಾರಿಗಗೆ ನೌಕರರ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಕಾರಣ ಸಾರಿಗೆ ನೌಕರರು ಮುಷ್ಕರ ಘೋಷಿಸಿದ್ದರು. ನಾಳೆಯಿಂದ ಮುಷ್ಕರ ಆರಂಭದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಾರಿಗೆ ನೌಕರರ ಜೊತೆ ಮಹತ್ವದ ಸಭೆ ಕರೆದಿದ್ದರು. ಈ ಸಭೆಯಲ್ಲೂ 38 ತಿಂಗಳ ಬಾಕಿ ವೇತನ ನೀಡಲು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿಲ್ಲ. ಹೀಗಾಗಿ ಸಂಧಾನ ವಿಫಲಗೊಂಡಿದೆ. ನಾಳೆಯಿಂದ ಮುಷ್ಕರ ಆರಂಭದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಾರಿಗೆ ನೌಕರರ ಜೊತೆ ಮಹತ್ವದ ಸಭೆ ಕರೆದಿದ್ದರು. ಈ ಸಭೆಯಲ್ಲೂ 38 ತಿಂಗಳ ಬಾಕಿ ವೇತನ ನೀಡಲು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿಲ್ಲ. ಹೀಗಾಗಿ ಸಂಧಾನ ವಿಫಲಗೊಂಡಿದೆ.
