Asianet Suvarna News Asianet Suvarna News

ಇಂದು ಎಸ್ಸೆಸ್ಸೆಲ್ಸಿ ಕೊನೆಯ ಪರೀಕ್ಷೆ, ಪರೀಕ್ಷೆ ಬರೆಯಲಿದ್ದಾರೆ ಅಂದಾಜು 7 ಲಕ್ಷ ವಿದ್ಯಾರ್ಥಿಗಳು

ಸಾಕಷ್ಟುಆತಂಕ, ಭಯದಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆದು ಅಂತಿಮ ಘಟ್ಟಕ್ಕೆ ಬಂದಿದೆ. ಶುಕ್ರವಾರ ನಡೆಯಲಿರುವ ತೃತೀಯ ಭಾಷಾ ಪರೀಕ್ಷೆ ಕೊನೆಯದ್ದಾಗಿದೆ.

Karnataka SSLC Hindi exam on July 03rd
Author
Bangalore, First Published Jul 3, 2020, 7:20 AM IST

ಬೆಂಗಳೂರು(ಜು.03): ಸಾಕಷ್ಟುಆತಂಕ, ಭಯದಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆದು ಅಂತಿಮ ಘಟ್ಟಕ್ಕೆ ಬಂದಿದೆ. ಶುಕ್ರವಾರ ನಡೆಯಲಿರುವ ತೃತೀಯ ಭಾಷಾ ಪರೀಕ್ಷೆ ಕೊನೆಯದ್ದಾಗಿದೆ.

ಈಗಾಗಲೇ ಕನ್ನಡ, ಇಂಗ್ಲಿಷ್‌, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳು ಮುಕ್ತಾಯವಾಗಿವೆ. ಶುಕ್ರವಾರ ನಡೆಯಲಿರುವ ತೃತೀಯ ಭಾಷೆ ಹಿಂದಿ ಪರೀಕ್ಷೆಗೆ ಅಂದಾಜು ಏಳು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

ಆಗಸ್ಟ್‌ ಬಳಿಕ ಶಾಲೆ, ಕಾಲೇಜು ಆರಂಭಕ್ಕೆ ಚಿಂತನೆ

ನಿವಾರ ಅತಿ ಕಡಿಮೆ ಸಂಖ್ಯೆಯಲ್ಲಿರುವ ಜೂನಿಯರ್‌ ಟೆಕ್ನಿಕಲ್‌ ಸ್ಕೂಲ್‌ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ ನಡೆಯಲಿದೆ. ಅದಕ್ಕೆ ಕೇವಲ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುತ್ತಾರೆ.

ಕೊರೋನಾ ದೃಢ: ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಕರೆದ್ಯೊಯ್ದ ಆರೋಗ್ಯ ಸಿಬ್ಬಂದಿ

ಕೊರೋನಾ ಪಾಸಿಟಿವ್‌ ದೃಢಪಟ್ಟಹಿನ್ನಲೆ ಬುಧವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯನ್ನು ಅರ್ಧಕ್ಕೆ ಕರೆದುಕೊಂಡು ಹೋಗಿರುವ ಪ್ರಕರಣ ಜಿಲ್ಲೆಯ ಪಾಂಡವಪುರದಲ್ಲಿ ವರದಿಯಾಗಿದೆ.

ಇಲ್ಲಿನ ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್‌ ಬಂದಿದೆ. ವಿಷಯ ತಿಳಿದ ಕೊರೋನಾ ವಾರಿಯರ್ಸ್‌ಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಕೊಠಡಿಯಿಂದಲೇ ಕರೆದುಕೊಂಡು ಹೋಗಿದ್ದು, ಇದೀಗ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಆತಂಕ ಶುರವಾಗಿದೆ. ಈಗ ವಿದ್ಯಾರ್ಥಿನಿಗೆ ಮಂಡ್ಯ ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಂದೆಯಿಂದ ವಿದ್ಯಾರ್ಥಿನಿ ಜೊತೆಗೆ ತಾಯಿ ಹಾಗೂ ಸಹೋದರಿನಿಗೂ ಪಾಸಿಟಿವ್‌ ಬಂದಿದೆ.

Follow Us:
Download App:
  • android
  • ios