ತಿಂಗಳು ಪೂರೈಸಿದ ಶಕ್ತಿ ಯೋಜನೆ: ಸರ್ಕಾರಿ ಬಸ್‌ಗಳಲ್ಲಿ 16.75 ಕೋಟಿ ಮಹಿಳೆಯರ ಉಚಿತ ಪ್ರಯಾಣ

ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಡಿ ಒಂದು ತಿಂಗಳಲ್ಲಿ ಬರೋಬ್ಬರು 16 ಕೋಟಿ ಮಹಿಳೆಯರು ಉಚಿತ ಸಂಚಾರ ಮಾಡಿದ್ದಾರೆ.

Karnataka Shakti Yojana Free bus travel for 16 crore women in  july month sat

ಬೆಂಗಳೂರು (ಜು.11): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜೂ.11 ರಿಂದ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಇನ್ನು ಜೂ.11ರಿಂದ ಜುಲೈ 10ರವರೆಗೆ ಅಂದರೆ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 16,75,77,752 ಮಹಿಳಾ ಪ್ರಯಾಣಿಕರು (16.75 ಕೋಟಿ) ಸಂಚಾರ ಮಾಡಿದ್ದಾರೆ. ಇನ್ನು ಮಹಿಳೆಯರ ಪ್ರಯಾಣದ ವೆಚ್ಚ 399 ಕೋಟಿ ರೂಪಾಯಿ ಆಗಿದೆ ಸರ್ಕಾರ ಮಾಹಿತಿ ನೀಡಿದೆ.

ಕರ್ನಾಟಕ ವಿಧಾನಸಭಾ ಚುನಾವನೆಯಲ್ಲಿ 5 ಪ್ರಮುಖ ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಬಹುತಮದ ಸರ್ಕಾರವಾಗಿ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರದ ಮೊದಲನೇ ಗ್ಯಾರಂಟಿಯಾಗಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಜುಲೈ 11 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಜುಲೈ 10ಕ್ಕೆ (ನಿನ್ನೆ ಸೋಮವಾರ) ಒಂದು ತಿಂಗಳು ಪೂರ್ಣಗೊಂಡಿದೆ. ಈ ಯೋಜನೆಗೆ ಮಹಿಳೆಯರಿಂದ ಅಭೂತಪೂರ್ವ ಬೆಂಬಲವೂ ವ್ಯಕ್ತವಾಗಿದೆ.

ಶಿವಮೊಗ್ಗಕ್ಕೆ ವಿಮಾನ ಹಾರಾಟ, ಹೊಸ ರೈಲು ಮಾರ್ಗದ ಅಪ್ಡೇಟ್‌ ಮಾಹಿತಿ ಕೊಟ್ಟ ಸಂಸದ

ಜೂನ್‌11 ರಿಂದ ಜುಲೈ 10ವರೆಗೆ ಸಂಚಾರ ಮಾಡಿದ ಪ್ರಯಾಣಿಕರ ವಿವರ:
ಒಟ್ಟು ಪ್ರಯಾಣಿಕರು = 32,88,60,741
ಮಹಿಳಾ ಪ್ರಯಾಣಿಕರು= 16,75,77,752
ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್‌ ವೆಚ್ಚ: 399,28,53,933 ರೂ. 

  • ಸಾರಿಗೆ ವಿಭಾಗವಾರು ಮಹಿಳಾ ಪ್ರಯಾಣಿಕರ ವಿವರ (ಒಂದು ತಿಂಗಳಲ್ಲಿ)
  • ಸಾರಿಗೆ ವಿಭಾಗಗಳು- ಮಹಿಳಾ ಪ್ರಯಾಣಿಕರು- ಪ್ರಯಾಣದ ವೆಚ್ಚ
  • ಕೆಎಸ್‌ಆರ್‌ಟಿಸಿ- 5,04,24,810 - 149,69,07,025
  • ಬಿಎಂಟಿಸಿ- 5,38,53,817- 69,50,21,639
  • ಎನ್‌ಡಬ್ಲ್ಯೂಕೆಆರ್‌ಟಿಸಿ- 4,02,51,645- 103,35,69,955
  • ಕೆಕೆಆರ್‌ಟಿಸಿ- 2,30,47,480- 76,73,55,314

ಜುಲೈ 20ರಿಂದ ಮದ್ಯದ ದರ ದುಬಾರಿ: ಬ್ರ್ಯಾಂಡ್‌ವಾರು ಬೆಲೆ ಏರಿಕೆ ವಿವರ ಇಲ್ಲಿದೆ...

ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ: ಕರ್ನಾಟಕ ಸರ್ಕಾರದ ಮಹತ್ವದ ಶಕ್ತಿ ಯೋಜನೆ ಒಂದು ತಿಂಗಳು ಪೂರೈಸಿದೆ. ಶಕ್ತಿ ಯೋಜನೆ ಜಾರಿಯಾಗಿ ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದೆ. ಕಳೆದ ಜೂನ್ 11 ರಂದು ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಕ್ತಿ ಯೋಜನೆಗೆ ಗ್ರ್ಯಾಂಡ್‌ ಆಗಿ ಚಾಲನ ನೀಡಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಬಸ್‌ನಲ್ಲಿ ಪ್ರಯಾಣವನ್ನೂ ಮಾಡಿದ್ದರು. ಇನ್ನು ಕಳೆದ ಒಂದು ತಿಂಗಳಿಂದ ಶಕ್ತಿ ಯೋಜನಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ತಿಂಗಳಲ್ಲೇ ಸರ್ಕಾರದ ಸಾರಿಗೆಗಳಲ್ಲಿ ಕೋಟ್ಯಾಂತರ ಮಹಿಳೆಯರು ಸಂಚಾರ ಮಾಡಿದ್ದಾರೆ. 16.75 ಕೋಟಿ ಸ್ತ್ರೀಯರು ಉಚಿತ ಪ್ರಯಾಣ ಮಾಡಿದ್ದಾರೆ. ಮಹಿಳೆಯರ ಓಡಾಟ ಟಿಕೆಟ್ ಮೌಲ್ಯ 399 ಕೋಟಿ ದಾಟಿದೆ. ಶಕ್ತಿ ಯೋಜನೆಯ ಬಳಿಕ ಬಸ್ ಗಳಲ್ಲಿ ಓಡಾಟ ನಡೆಸುವವರ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಆದ್ರಲ್ಲೂ ದಿನೇ ದಿನೇ ಸಾರಿಗೆ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗುತ್ತಿದೆ. 

Latest Videos
Follow Us:
Download App:
  • android
  • ios