Asianet Suvarna News Asianet Suvarna News

ರಾಮಚಂದ್ರ, ಗೀತಾ, ಪ್ರವೀಣ್‌ಗೆ ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕೊಡಮಾಡುವ 2022-23ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರಕಟಗೊಂಡಿದೆ. ಗೌರವ ಪ್ರಶಸ್ತಿಗೆ ಚನ್ನರಾಯಪಟ್ಟಣದ ಕರ್ನಾಟಕ ಸಂಗೀತ ಕಲಾವಿದ ಸಿ.ಆರ್‌.ರಾಮಚಂದ್ರ ಹಾಗೂ ಮಂಗಳೂರಿನ ನೃತ್ಯ ಗುರು ಗೀತಾ ಸರಳಾಯ ಹಾಗೂ ವಿಶೇಷ ಪ್ರಶಸ್ತಿಗೆ ಪ್ರವೀಣ್‌ ಡಿ. ರಾವ್‌ ಭಾಜನರಾಗಿದ್ದಾರೆ. 

Karnataka Sangeetha Nritya Academy Awards List gvd
Author
Bangalore, First Published Aug 26, 2022, 7:39 AM IST

ಬೆಂಗಳೂರು (ಆ.26): ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕೊಡಮಾಡುವ 2022-23ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರಕಟಗೊಂಡಿದೆ. ಗೌರವ ಪ್ರಶಸ್ತಿಗೆ ಚನ್ನರಾಯಪಟ್ಟಣದ ಕರ್ನಾಟಕ ಸಂಗೀತ ಕಲಾವಿದ ಸಿ.ಆರ್‌.ರಾಮಚಂದ್ರ ಹಾಗೂ ಮಂಗಳೂರಿನ ನೃತ್ಯ ಗುರು ಗೀತಾ ಸರಳಾಯ ಹಾಗೂ ವಿಶೇಷ ಪ್ರಶಸ್ತಿಗೆ ಪ್ರವೀಣ್‌ ಡಿ. ರಾವ್‌ ಭಾಜನರಾಗಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಪ್ರಕಟಿಸಿದರು.

ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ ಸೇರಿದಂತೆ ಏಳು ವಿಭಾಗಗಳಿಂದ 16 ಕಲಾವಿದರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿ ತಲಾ 50 ಸಾವಿರ ರು. ಹಾಗೂ ವಾರ್ಷಿಕ ಪ್ರಶಸ್ತಿ ತಲಾ 25 ಸಾವಿರ ರು. ನಗದು ಗೌರವ ಧನ ಹೊಂದಿದೆ. ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಮಲಯಾಳಂ ನಟಿ ಮಾಲಾ ಪಾರ್ವತಿಗೆ ಚಾರ್ಲಿ ಚಿತ್ರದ ಡೈರೆಕ್ಟರ್‌ ಕಿರಣ್‌ ರಾಜ್‌ ಹೆಸರಲ್ಲಿ ಕರೆ!

ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ಕರ್ನಾಟಕ ಸಂಗೀತ ವಿಭಾಗ:
ಸಿ.ಎ.ನಾಗರಾಜ-ಹಾಡುಗಾರಿಕೆ (ಮೈಸೂರು), ಎಂ.ನಾರಾಯಣ-ಹಾಡುಗಾರಿಕೆ (ಸುರತ್ಕಲ್‌, ಮಂಗಳೂರು). ಪಿ.ಕೆ. ದಾಮೋದರಂ-ಸ್ಯಾಕ್ಸೋಪೋನ್‌ (ಪುತ್ತೂರು). ಹಿಂದೂಸ್ತಾನಿ ಸಂಗೀತ ವಿಭಾಗ: ಎಂ.ಪಿ.ಹೆಗಡೆ ಪಡಿಗೆರೆ- ಗಾಯನ (ಶಿರಸಿ), ಮಹಾದೇವಪ್ಪ ನಿಂಗಪ್ಪಹಳ್ಳಿ- ಗಾಯನ (ಗದಗ), ಹನುಮಂತಪ್ಪ ಬ ತಿಮ್ಮಾಪೂರ-ವಯಲಿನ್‌ (ಅಂಧರು) (ಶಿಗ್ಗಾಂವ, ಹಾವೇರಿ), ಫಯ್ಯಾಜ್‌ಖಾನ್‌-ಸಾರಂಗಿ/ಗಾಯನ (ಬೆಂಗಳೂರು).

ನೃತ್ಯ ವಿಭಾಗ: ರೋಹಿಣಿ ಇಮಾರತಿ (ಧಾರವಾಡ), ಪುಷ್ಪಾ ಕೃಷ್ಣಮೂರ್ತಿ (ಶಿವಮೊಗ್ಗ), ಪುರುಷೋತ್ತಮ-ನೃತ್ಯ-ಮೃದಂಗ (ಬೆಂಗಳೂರು). ಸುಗಮ ಸಂಗೀತ ವಿಭಾಗ: ಸಿದ್ರಾಮಪ್ಪ ಪೋಲೀಸ್‌ ಪಾಟೀಲ್‌, ಅಂಧರು(ಕಲಬುರಗಿ), ಮಧುರಾ ರವಿಕುಮಾರ್‌ (ಬೆಂಗಳೂರು). ಕಥಾ ಕೀರ್ತನ ವಿಭಾಗ: ಶೀಲಾ ನಾಯ್ಡು (ಬೆಂಗಳೂರು) ಗಮಕ ವಿಭಾಗ: ಅನಂತ ನಾರಾಯಣ, ಹೊಸಹಳ್ಳಿ, ಚಂದ್ರಶೇಖರ ಕೇದಿಲಾಯ (ಉಡುಪಿ)

ಗಣೇಶನ ಮೂರ್ತಿಗಳ ಮಧ್ಯೆ ಕಂಗೊಳಿಸುತ್ತಿರುವ ಅಪ್ಪು ಪ್ರತಿಮೆ

ಆಕಾಶವಾಣಿ ನಿಲಯದ ಕಲಾವಿದರ ನೇಮಕಕ್ಕೆ ಪತ್ರ: ಆಕಾಶವಾಣಿಯಲ್ಲಿ ಸದ್ಯಕ್ಕೆ ನಿಲಯ ಕಲಾವಿದರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಇದರಿಂದ ಕಲಾವಿದರಿಗೆ ಉದ್ಯೋಗ ಅವಕಾಶ ಕಡಿಮೆ ಆಗುತ್ತಿದೆ. ಈ ಬಗ್ಗೆ ಪತ್ರ ಬರೆದಿದ್ದರೂ ಆಕಾಶವಾಣಿಯಿಂದ ಪ್ರತಿಕ್ರಿಯೆ ಬಂದಿಲ್ಲ. ಸಂಗೀತ ಉಪಕರಣಗಳ ನಿರ್ಮಾಣ ಚಟುವಟಿಕೆ ಕುಂಠಿತಗೊಂಡಿದೆ. ಸಂಗೀತ ಉಪಕರಣಗಳನ್ನು ತಯಾರಿಸುವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ ಎಂದು ಆನೂರು ಅನಂತಕೃಷ್ಣ ಶರ್ಮ ಆತಂಕ ವ್ಯಕ್ತಪಡಿಸಿದರು.

Follow Us:
Download App:
  • android
  • ios