ಬೆಂಗಳೂರು, (ಡಿ. 28): ರಾಜ್ಯದಲ್ಲಿ ಇಂದು (ಸೋಮವಾರ) 653  ಹೊಸ ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,16,909 ಕ್ಕೆ ಏರಿಕೆಯಾಗಿದೆ.

ಇನ್ನು ಕಳೆದ 24 ಗಂಟರಗಳಲ್ಲಿ 8 ಮಂದಿ ಸೋಂಕಿತರ ಮೃತಪಟ್ಟಿದ್ದಾರೆ. ಈ ಮೂಲ 12,070 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

ರೂಪಾಂತರಿ ವೈರಸ್ ಡೇಂಜರ್..ಡೇಂಜರ್ ಅಂತಿರೋದ್ಯಾಕೆ..?

ರಾಜ್ಯದಲ್ಲಿ ಇಂದು 1178 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 8,92,273 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 

ಸದ್ಯ ರಾಜ್ಯದಲ್ಲಿ 12,547 ಸಕ್ರಿಯ ಪ್ರಕರಣಗಳಿದ್ದು, 205 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ವರದಿ
ಬೆಂಗಳೂರಿನಲ್ಲಿ 309 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸಂಖ್ಯೆ 3,86,908 ಕ್ಕೆ ಏರಿಕೆಯಾಗಿದ್ದು, ಇವತ್ತು 654 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 3,74,378 ಜನ ಬಿಡುಗಡೆಯಾಗಿದ್ದು, 8225 ಸಕ್ರಿಯ ಪ್ರಕರಣಗಳಿವೆ. ಇನ್ನು ಇಂದು 5 ಜನರು ಮೃತಪಟ್ಟಿದ್ದು, ಇದುವರೆಗೆ 4304 ಜನ ಸಾವನ್ನಪ್ಪಿದ್ದಾರೆ.