Asianet Suvarna News Asianet Suvarna News

ಬೆಂಗ್ಳೂರಲ್ಲಿ ಕೊರೋನಾ ಸ್ಫೋಟ: ಭಾನುವಾರ ರಾಜ್ಯದಲ್ಲಿ ಮಹಾಮಾರಿ ಪರಿಸ್ಥಿತಿ ಇಂತಿದೆ

ಇಂದು, 21.06.2020, ಭಾನುವಾರ ಸಂಜೆ 5.00 ಗಂಟೆಯ ಮಾಹಿತಿಯಂತೆ ನಮ್ಮ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಈ ಕೆಳಗಿನಂತಿದೆ.‌\

Karnataka reports 453 fresh COVID19 cases 5 deaths On June 21
Author
Bengaluru, First Published Jun 21, 2020, 7:51 PM IST

ಬೆಂಗಳೂರು, (ಜೂನ್.21): ಕಂಕಣ ಸೂರ್ಯಗ್ರಹಣವಾದ ಇಂದು (ಭಾನುವಾರ) ಬೆಂಗಳೂರಿನಲ್ಲಿ ದಾಖಲೆಯ 196 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಬರೋಬ್ಬರಿ 453 ಮಂದಿ ಕೊರೋನಾ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,150ಕ್ಕೆ ಏರಿಕೆಯಾಗಿದೆ. 

ಡೇಂಜರ್ ಬೆಂಗಳೂರು; ಮೂರು ಹೊಸ ಕೋವಿಡ್ ಕೇರ್ ಸೆಂಟರ್, ಎಲ್ಲೆಲ್ಲಿ?

ಭಾನುವಾರ ರಾಜ್ಯದಲ್ಲಿ 5 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 137ಕ್ಕೆ ಏರಿಕೆಯಾಗಿದೆ. ಇನ್ನು ಪತ್ತೆಯಾಗಿರುವ 9,150 ಪ್ರಕರಣಗಳ ಪೈಕಿ 5,618 ಮಂದಿ ಗುಣಮುಖರಾಗಿದ್ದರೆ, 3,391 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಭಾನುವಾರದ ಜಿಲ್ಲಾವಾರು ಅಂಕಿ-ಅಂಶ
ಬೆಂಗಳೂರು ನಗರ ಜಿಲ್ಲೆಯಲ್ಲಿ ಶನಿವಾರ 94 ಮಂದಿಗೆ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಆದ್ರೆ, ಭಾನುವಾರ 196 ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗರನ್ನ ಬೆಚ್ಚಿಬೀಳಿಸಿದೆ.

ಬೆಂಗಳೂರು ನಗರ 196, ಬೀದರ್ 13, ಬಳ್ಳಾರಿ 40, ರಾಮನಗರ 2, ಕಲಬುರಗಿ 39, ಮೈಸೂರು 18, ಹಾಸನ 5, ರಾಯಚೂರು 2, ಹಾವೇರಿ 3, ವಿಜಯಪುರ 39, ಚಿಕ್ಕಮಗಳೂರು 1, ಧಾರವಾಡ 15, ಚಿಕ್ಕಬಳ್ಳಾಪುರ  3, ದಕ್ಷಿಣ ಕನ್ನಡ 7,  ಮಂಡ್ಯ 5, ಉತ್ತರ ಕನ್ನಡ 8, ಕೋಲಾರ 8, ದಾವಣಗೆರೆ 8, ಬಾಗಲಕೋಟೆ 14, ಶಿವಮೊಗ್ಗ 4, ಗದಗ 18, ತುಮಕೂರು 4, ಯಾದಗಿರಿ 3 ಪ್ರಕರಣಗಳು ದೃಢಪಟ್ಟಿದೆ.

Follow Us:
Download App:
  • android
  • ios