Asianet Suvarna News Asianet Suvarna News

ರಾಜ್ಯದಲ್ಲಿ ಕೋವಿಡ್‌ ಕೇಸು ದಿಢೀರ್‌ ಏರಿಕೆ:ಶೇ.2.11ಕ್ಕೆ ಜಿಗಿದ ಪಾಸಿಟಿವಿಟಿ!

* ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳ ಏರುಗತಿ

* ಮಂಗಳವಾರ 348 ಹೊಸ ಪ್ರಕರಣಗಳು ಪತ್ತೆ

* ಪಾಸಿಟಿವಿಟಿ ದರ ಶೇ.2.11ಕ್ಕೆ ಜಿಗಿತ

Karnataka reports 348 fresh Covid cases positivity rate at 2 11 percent pod
Author
Bangalore, First Published Jun 8, 2022, 4:48 AM IST

ಬೆಂಗಳೂರು(ಜೂ.07): ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳ ಏರುಗತಿ ಮುಂದುವರಿದಿದೆ. ಮಂಗಳವಾರ 348 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.2.11ಕ್ಕೆ ಜಿಗಿದಿದೆ. ತನ್ಮೂಲಕ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಮೂರು ತಿಂಗಳ ನಂತರ ಮುನ್ನೂರರ ಗಡಿ ದಾಟಿದಂತಾಗಿದೆ.

ಮೂರನೇ ಅಲೆ ನಿಸ್ತೇಜಗೊಳ್ಳುತ್ತ ಬಂದ ಅವಧಿಯಾದ ಮಾಚ್‌ರ್‍ 3ರಂದು 382 ಮಂದಿಯಲ್ಲಿ ಸೋಂಕು ಪತ್ತೆಯಾದ ಮೂರು ತಿಂಗಳ ಬಳಿಕ ಒಂದೇ ದಿನದ ಸೋಂಕು ಗರಿಷ್ಠ 350ರ ಸಂಖ್ಯೆ ಸಮೀಪಿಸಿದೆ. ಮಂಗಳವಾರ 311 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ವರದಿಯಾಗಿಲ್ಲ. 16,474 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ. ಏಪ್ರಿಲ್‌, ಮೇನಲ್ಲಿ ಶೇ.0.23ರ ತನಕ ಕುಸಿದಿದ್ದ ಪಾಸಿಟಿವಿಟಿ ದರ ಈಗ ಶೇ. 2ರ ಗಡಿ ದಾಟಿದೆ.

ಬೆಂಗಳೂರು ನಗರದಲ್ಲಿ 339 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಉಡುಪಿ 3, ಉತ್ತರಕನ್ನಡ, ಉಡುಪಿ, ಮೈಸೂರು, ರಾಯಚೂರು, ಕೋಲಾರ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಈವರೆಗೆ 39.53 ಲಕ್ಷ ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು, 39.11 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,478ಕ್ಕೆ ಏರಿದೆ. 40,066 ಮಂದಿ ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ:

ರಾಜ್ಯದಲ್ಲಿ ಮಂಗಳವಾರ 45,809 ಮಂದಿ ಕೋವಿಡ್‌-19 ಲಸಿಕೆ ಪಡೆದಿದ್ದಾರೆ. 9,118 ಮಂದಿ ಮೊದಲ ಡೋಸ್‌, 23,975 ಮಂದಿ ಎರಡನೇ ಡೋಸ್‌ ಮತ್ತು 15,350 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ. ಈವರೆಗೆ 10.94 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

Follow Us:
Download App:
  • android
  • ios