ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಬುಧವಾರವೂ ಸಹ ರಾಜ್ಯದಲ್ಲಿ ಕೊರೋನಾ ಸ್ಪೋಟವಾಗಿದೆ. ಹಾಗಾದ್ರೆ ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್? ಇಲ್ಲಿದೆ ವಿವರ

ಬೆಂಗಳೂರು, (ಜೂನ್.03): ರಾಜ್ಯದಲ್ಲಿ ಇಂದು (ಬುಧವಾರ) ಕೊರೋನಾ ಸ್ಪೋಟವಾಗಿದ್ದು, ಬರೋಬ್ಬರಿ 267 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾಗಿದೆ. 267ರ ಪೈಕಿ 250 ಜನರು ಅಂತರ್ ರಾಜ್ಯದಿಂದ ಬಂದವರಲ್ಲಿ ಕೊರೋನಾ ಅಟ್ಯಾಕ್ ಆಗಿದೆ. 

ಚಾಮರಾಜನಗರ ದ.ಭಾರತದಲ್ಲೇ ಕೊರೋನಾ ಮುಕ್ತ ಏಕೈಕ ಜಿಲ್ಲೆ!

ಇನ್ನು ಇವತ್ತು ಒಂದೇ ದಿನ 111 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಇದುವರೆಗೆ 1514 ಜನ ಬಿಡುಗಡೆಯಾದಂತಾಗಿದೆ.

2494 ಸಕ್ರಿಯ ಪ್ರಕರಣಗಳು ಇದ್ದು ಈವರೆಗೆ ಒಟ್ಟು 53 ಮಂದಿ ಕೊರೋನಾ ಸೋಂಕಿತರು ಮೃತಪಟ್ಟಿದ್ದಾರೆ. 16 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದ ಹೆಲ್ತ್ ಬುಲೆಟಿನ್‌ನ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
* ಕಲಬುರಗಿ-105
* ಉಡುಪಿ-62
* ಬೆಂಗಳೂರು ನಗರ-20
* ಮಂಡ್ಯ- 13
* ಯಾದಗಿರಿ- 9
* ರಾಯಚೂರು- 35
* ಹಾಸನ- 01
* ದಾವಣಗೆರೆ- 03
* ವಿಜಯಪುರ-06
* ದಕ್ಷಿಣ ಕನ್ನಡ-02
* ಮೈಸೂರು-02
* ಬಾಗಲಕೋಟೆ- 02
* ಶಿವಮೊಗ್ಗ- 02
* ಕೋಲಾರ-2
* ಬಳ್ಳಾರಿ-01
* ಧಾರವಾಡ-01
* ಬೆಂಗಳೂರು ಗ್ರಾಮಾಂತರ- 01