Asianet Suvarna News

ಶನಿವಾರ ಒಂದೇ ದಿನ ರಾಜ್ಯದಲ್ಲಿ ಕೊರೋನಾ ಡಬಲ್ ಸೆಂಚುರಿ:ಇಲ್ಲಿದೆ ಜಿಲ್ಲಾವಾರು ಮಾಹಿತಿ

ನಾಲ್ಕನೇ ಹಂತದ ಲಾಕ್‌ಡೌನ್‌ಲ್ಲಿ ಸಡಿಲಿಕೆ ಕೊಟ್ಟಾಗಿನಿಂದ ರಾಜ್ಯದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಾಗಾದ್ರೆ ಶನಿವಾರ ಪತ್ತೆಯಾದ ಕೇಸ್‌ಗಳು ಎಷ್ಟು..? ಯಾವ-ಯಾವ ಜಿಲ್ಲೆಗಳಲ್ಲಿ ಎಷ್ಟು? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

Karnataka reports 216 COVID19 cases in 24hrs,total 1959
Author
Bengaluru Railway Station, First Published May 23, 2020, 6:09 PM IST
  • Facebook
  • Twitter
  • Whatsapp

ಬೆಂಗಳೂರು, (ಮೇ.23): ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಕೋವಿಡ್-19 ಸೋಂಕಿತರ ಸಂಖ್ಯೆ ಇನ್ನೂರರ ಗಡಿ ದಾಟಿದೆ. 

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 216 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇಡೀ ಕರ್ನಾಕವನ್ನೇ ಬೆಚ್ಚಿಬೀಳಿಸಿದೆ. 

ಶನಿವಾರ ಮಧ್ಯಾಹ್ನದ ವರದಿಯಲ್ಲಿ 196 ಹೊಸ ಪ್ರಕರಣಗಳು ದೃಢವಾಗಿತ್ತು. ನಂತರ ಸಂಜೆ ಹೊತ್ತಿಗೆ ಮತ್ತೆ 20 ಪ್ರಕರಣಗಳು ವರದಿಯಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೋನಾ ವೈರಸ್ ಕೇಕೆ, ಟಿ20 ವಿಶ್ವಕಪ್ ಮುಂದೂಡಿಕೆ; ಮೇ.23ರ ಟಾಪ್ 10 ಸುದ್ದಿ!

ಇನ್ನು ಮೂರನೆ ಹಂತದ ಲಾಕ್‌ಡೌನ್‌ ವರೆಗೂ ಗ್ರೀನ್ ಝೋನ್‌ನಲ್ಲಿದ್ದ ಯಾದಗಿರಿಯಲ್ಲಿ ಇಂದು (ಶನಿವಾರ) 72 ಜನರಿಗೆ ಅಟ್ಯಾಕ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

ಡಿಸ್ಚಾರ್ಜ್ ಆಗಿರುವವರ ಮತ್ತು ಸಾವನ್ನಪ್ಪಿರುವವರನ್ನು ಹೊರತುಪಡಿಸಿ ರಾಜ್ಯದಲ್ಲಿ ಸದ್ಯ ಸೋಂಕಿತರ ಸಂಖ್ಯೆ 1307 

ಶನಿವಾರ ಯಾವ ಜಿಲ್ಲೆಗಳಲ್ಲಿ ಎಷ್ಟು ಕೇಸ್?


ಬೆಂಗಳೂರು-04, ಮಂಡ್ಯ 28, ಕಲಬುರಗಿ-01, ಬೆಳಗಾವಿ-01, ದಾವಣಗೆರೆ-03, ಚಿಕ್ಕಬಳ್ಳಾಪುರ-26, ಯಾದಗಿರಿ-72, ಹಾಸನ-04, ಬೀದರ್-03, ಉತ್ತರಕನ್ನಡ-02, ರಾಯಚೂರು-40, ದಕ್ಷಿಣ ಕನ್ನಡ-03, ಉಡುಪಿ-03, ಧಾರವಾಡ-05, ಗದಗ-15, ಬಳ್ಳಾರಿ-03, ಕೋಲಾರ-03

Follow Us:
Download App:
  • android
  • ios