ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸಿಬ್ಬಂದಿ ಮತ್ತು ನೌಕರರಿಗೆ ಜೂನ್‌ ತಿಂಗಳ ವೇತನ  ವೇತನ ಪಾವತಿಸಲು 162.5 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆ  ಕೊರೋನಾ ಲಾಕ್‌ಡೌನ್‌ ಜಾರಿಯಿಂದ ಶೇ.50 ರಷ್ಟು ಪ್ರಯಾಣಿಕರೊಂದಿಗೆ ಸಂಚಾರ 

ಬೆಂಗಳೂರು (ಜು.09): ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸಿಬ್ಬಂದಿ ಮತ್ತು ನೌಕರರಿಗೆ ಜೂನ್‌ ತಿಂಗಳ ವೇತನ ಪಾವತಿಸಲು 162.5 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

ಕೊರೋನಾ ಲಾಕ್‌ಡೌನ್‌ ಜಾರಿಯಿಂದ ಶೇ.50 ರಷ್ಟು ಪ್ರಯಾಣಿಕರೊಂದಿಗೆ ಸಂಚಾರ ನಡೆಸುತ್ತಿವೆ. ಇದರಿಂದ ಜೂನ್‌ ತಿಂಗಳಲ್ಲಿ ಬರುವ ಆದಾಯ ಡೀಸೆಲ್‌ ಖರೀದಿಗೆ ಸಾಕಾಗುತ್ತಿಲ್ಲ.. ಈಗಾಗಿ ನಾಲ್ಕು ನಿಗಮಗಳ ಸಿಬ್ಬಂದಿಗೆ ವೇತನ ಪಾವತಿಸಲು 325 ಕೋಟಿ ರು.ಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ, ಶೇ.50 ರಷ್ಟುವೇತನ ಪಾವತಿಸಲು ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದು, ಇನ್ನುಳಿದ ಶೇ.50 ರಷ್ಟುವೇತನವನ್ನು ನಿಗಮಗಳಿಂದಲೇ ಪಾವತಿಸಬೇಕಾಗಿದೆ.

ಕೆಎಸ್‌ಆರ್‌ಟಿಸಿಗೆ 4 ಸಾವಿರ ಕೋಟಿ ರು. ನಷ್ಟ ...

ಕೆಎಸ್‌ಆರ್‌ಟಿಸಿಗೆ 50.88 ಕೋಟಿ, ಬಿಎಂಟಿಸಿಗೆ 49.31, ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ 33.21 ಕೋಟಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆಗೆ 29.10 ಕೋಟಿ ರು.ಗಳ ಸೇರಿ ಒಟ್ಟು 162.50 ಬಿಡುಗಡೆ ಮಾಡಲಾಗಿದೆ.